ಹೆಬ್ಬಾಳು ಗ್ರಾ.ಪಂ ಸದಸ್ಯರಿಂದ ಸುಳ್ಳು ಆರೋಪ: ಅಧ್ಯಕ್ಷೆ ಆಶಾ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜು.17:- ತಾಲ್ಲೂಕಿನ ಹೆಬ್ಬಾಳು ಗ್ರಾಮ ಪಂಚಾಯತಿ ಸದಸ್ಯ ಜಲೇಂದ್ರ ಅವರ ಬ್ಲಾಕ್ ಮೇಲ್ ತಂತ್ರಕ್ಕೆ ಮಣಿಯದ ಕಾರಣ ನಮ್ಮಗಳ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ, ಸ್ಪಷ್ಟ ಪಡಿಸಿದ ಅವರು ನಾನು ಪರಿಶಿಷ್ಟ ಜಾತಿ ಮಹಿಳೆ ಎಂಬ ಕಾರಣಕ್ಕೆ ಪಂಚಾಯತಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯ ವರೆಗೂ ಕಿರುಕುಳ ನೀಡುತ್ತಿದ್ದಾರೆ ಹೆಬ್ಬಾಳು ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ಗಂಬೀರ ಆರೋಪ ಮಾಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾ.ಪಂ ಸದಸ್ಯ ಜಲೇಂದ್ರ ಅವರು ಮತ್ತೊರ್ವ ನವೀನ್ ಹಾಗೂ ಉಪಾಧ್ಯಕ್ಷ ನಾಗೇಶ್ ಅವರ ಜೊತೆಗೂಡಿ ಅಮೃತ ಯೋಜನೆಯಡಿಯಲ್ಲಿ ಟೆಂಡರ್ ಕರೆಯದೆ ಹಗರಣ ನಡೆದಿದೆ ಎಂಬ ಆರೋಪ ಸುಳ್ಳು ಎಂದು ಈ ಬಗ್ಗೆ ಟೆಂಡರ್ ಕರೆಯಲಾಗಿರುವ ಇ ಟೆಂಡರ್, ಅಮೃತ್ ಯೋಜನೆಯ ಬ್ಯಾಂಕ್ ಪಾಸ್ ಪುಸ್ತಕದ ದಾಖಲಾತಿ ಬಿಡುಗಡೆ ಮಾಡಿದ ಅಧ್ಯಕ್ಷೆ ಆಶಾ ಈ ಟೆಂಡರ್ ನ್ನು ನಮ್ಮ ಕಡೆಯವರಿಗೆ ಕೊಡಿ, ಇಲ್ಲದಿದ್ದಲ್ಲಿ 3 ಲಕ್ಷ ಹಣ ಕೊಡಿ ಎಂದು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಪರಿಶಿಷ್ಟ ಜಾತಿಯ ಶೋಷಿತ ಸಮಾಜದ ಮಹಿಳೆಯಾದ ನನಗೆ ಮತ್ತು ಪಿಡಿಓ ಅವರನ್ನು ಬೆದರಿಸಿದ್ದರು ಇದಕ್ಕೆ ಅಂಜದಿದ್ದಾಗ ಈ ರೀತಿಯಲ್ಲಿ ಆರೋಪ ಮಾಡಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ನಾನು ದಲಿತ ಮಹಿಳೆ ಎಂಬ ಕಾರಣಕ್ಕೆ ಪಂಚಾಯತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಬಿಡುತ್ತಿಲ್ಲ ಆರೋಪಿಸಿ ಅಧ್ಯಕ್ಷೆ ಆಶಾ ಪಂಚಾಯತಿಯ ಯಾವುದೇ ಯೋಜನೆಯನ್ನು ಜಾರಿಗೆ ತಂದು ಅಭಿವೃದ್ಧಿ ಮಾಡಲು ಒಂದಲ್ಲ ಒಂದು ರೀತಿಯ ಕಿರುಕುಳ ನೀಡಿ ಕಾಮಗಾರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರ ಅಧ್ಯಕ್ಷೆ ನನಗೆ ದುಡ್ಡಿಗಾಗಿ ಪೀಡಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಜೀವಕ್ಕೆ ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಜಲೇಂದ್ರ ಹಾಗೂ ಉಪಾಧ್ಯಕ್ಷರಾದ ನಾಗೇಶ್ ಅವರುಗಳೆ ಹೊಣೆಯಾಗಲಿದ್ದಾರೆ ಎಂದು ಪತ್ರಿಕಾ ಘೋಷ್ಠಿಯಲ್ಲಿ ಅಧ್ಯಕ್ಷೆ ಶ್ರೀಮತಿ ಆಶಾ ತಮ್ಮ ಅಳಲನ್ನು ತೋಡಿಕೊಂಡರು.
ಪಂಚಾಯತಿಯ ಎಲ್ಲಾ ಕೆಲಸಗಳಿಗೆ ತೊಂದರೆ ನೀಡಿ ಅಡ್ಡಗಾಲು ಹಾಕುವುದೇ ಜಲೇಂದ್ರ ರವರ ಕೆಲಸವಾಗಿದೆ. ಇದೇ ರೀತಿ ಮೈಸೂರು ಜಿಲ್ಲೆಯ ಇತರೆ ಅಮೃತ ಗ್ರಾಮ ಪಂಚಾಯತಿಯ ವರನ್ನು ಸಂಪರ್ಕಿಸಿ, ಅಲ್ಲೂ ಕೂಡ ದುಡ್ಡು ಪೀಕಲು, ಇದೇ ರೀತಿಯ ಬ್ಲಾಕ್‍ಮೇಲ್ ತಂತ್ರವನ್ನು ಜಲೇಂದ್ರ ಹಾಗೂ ಅವರ ಟೀಮ್ ಮಾಡುತ್ತಿದ್ದಾರೆ. ಈ ಬಗ್ಗೆ ತಾ.ಪಂ.ಇಓ ಹಾಗೂ ಜಿ.ಪಂ.ಸಿಇಓ ಅವರಿಗೆ ದೂರು ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹೆಬ್ಬಾಳು ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಎಲ್. ಕಾಂತರಾಜು, ಹೆಚ್.ಎಸ್.ರವಿ, ದಲಿತ ಮುಖಂಡರಾದ ಸತೀಶ್, ಸೋಮಶೇಖರ್ ಹಾಜರಿದ್ದರು.