6 ಎಕರೆ ಕೆರೆ ಒತ್ತುವರಿ ತೆರವು
ಸಂಜೆವಾಣಿ ವಾರ್ತೆ
ನಂಜನಗೂಡು: ಜು.17:- ತಹಸಿಲ್ದಾರ್ ಶಿವಕುಮಾರ್ ಆದೇಶದಂತೆ ನಂಜನಗೂಡು ತಾಲೂಕು ಕಸಬಾ ಹೋಬಳಿಯ ಸಿಂಧುವಳ್ಳಿ ಗ್ರಾಮದ ಸರ್ವೆ ನಂಬರ್ 312 ರಲ್ಲಿ 52 ಎಕರೆ ಸರ್ಕಾರಿ ಕೆರೆ ಇದ್ದು ಈ ಪೈಕಿ ಒತ್ತುವರಿ ಯಾಗಿದ್ದ 6 ಎಕರೆ 10 ಗುಂಟೆ ಜಮೀನನ್ನು ಬೆಳಗ್ಗೆಯಿಂದ ಕಾರ್ಯಚರಣೆ ಮಾಡಿ ಕಸಬಾ ಹೋಬಳಿ ರಾಜ ಸ್ವ ನಿರೀಕ್ಷಕರಾದ ಹರೀಶ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಸಿಂಧುವಳ್ಳಿ ಗ್ರಾಮದಲ್ಲಿ ಇದ್ದಂತ ಕೆರೆ 6ಎಕರೆ ಕೆರೆ ಜಮೀನನ್ನು ಸುಮಾರು ವರ್ಷಗಳಿಂದ ಅನ್ಯರು ಅಕ್ರಮವಾಗಿ ವಶಪಡಿಸಿ ಕೊಂಡಿದ್ದರು ಎಚ್ಚೆತ್ತುಕೊಂಡ ತಾಲೂಕು ಆಡಳಿತ ಇಂದು ತಹಸೀಲ್ದಾರ್ ಶಿವಕುಮಾರ್ ಆದೇಶದ ಮೇರೆಗೆ ತಾಲೂಕಿನ ಆಡಳಿತ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಸರ್ವೇ ಮಾಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಆರು ಎಕರೆ 10ಗುಂಟೆ ಜಮೀನನ್ನು ತೆರವುಗೊಳಿಸಿದರು.
ಈ ಕಾರ್ಯಾಚರಣೆಯಲ್ಲಿ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರಾದ ಹರೀಶ್, ನೀರಾವರಿ ಇಲಾಖೆಯ ಎಇಇ ಸುಹಾಸ್ ರವರು ತಾಲೂಕು ಭೂಮಾಪಕರಾದ ಕೆಂಪಣ್ಣ ರವರು ಹಾಗೂ ಸಿಂದುವಳ್ಳಿ ಗ್ರಾಮ ಆಡಳಿತ ಅಧಿಕಾರಿಯಾದ ಶಿವಶಂಕರ್ ಸೇರಿದಂತೆ ಇತರರು ಇದ್ದರು