ವಿಜಯಪುರದÀ ಕಲ್ಯಾಣರಾವ ಸೇರಿ ಹಲವರಿಗೆ ವಾಗ್ದೇವಿ ಗಮಕ ಕಲಾ ಪ್ರಶಸ್ತಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.17: ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ .2024ರ ಗಮಕ ಕಲಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ವಿಜಯಪುರ ನಗರದ ಗಮಕ ವ್ಯಾಖ್ಯಾನಕಾರ ಕಲ್ಯಾಣರಾವ ದೇಶಪಾಂಡೆ ಅವರು ಈ ವರ್ಷದ ವಾಗ್ದೇವಿ ಗಮಕ ಕಲಾ ಪ್ರಶಸ್ತಿ'ಯನ್ನು ಪಡೆದಿದ್ದಾರೆ. ಅದೇ ರೀತಿಉತ್ತಮ ಗಮಕ ಶಿಕ್ಷಕ ಪ್ರಶಸ್ತಿ’ಯು ನವರತ್ನಾ ಎಸ್. ವಟಿ ಬೇಲೂರು ಹಾಗೂ ಕುಮಾರಿ ಆಶ್ರಿತಾ ಎಸ್. ಬೆಂಗಳೂರು ಇವರುಗಳು `ದಿ.ಕೆ.ವಿ.ರವೀಂದ್ರನಾಥ ಟ್ಯಾಗೋರ ಯುವ ಗಮಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ಕುರಿತು ವಾಗ್ದೇವಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ. ಪುತ್ತುರಾಯ ಹಾಗೂ ಪ್ರತಿಷ್ಠಾನದ ಸದಸ್ಯರು ಇವರುಗಳು ಬಹಿರಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರಾಜಾಜಿ ನಗರದ ಶ್ರೀಕುಮಾರವ್ಯಾಸ ಮಂಟಪದಲ್ಲಿ ಜು.21ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜರುಗುವುದು. ಈ ಕಾರ್ಯಕ್ರಮದಲ್ಲಿ ಗಮಕಗೋಷ್ಠಿಗಳು ಹಾಗೂ ಚಿಕ್ಕ ಮಕ್ಕಳ ಗಮಕ ಹಾಗೂ ಹಾಡುಗಳು ನಡೆಯುವವು. ಈ ಸಮಾರಂಭಕ್ಕೆ ಎಲ್ಲ ಗಮಕಾಭಿಮಾನಿಗಳು ಆಗಮಿಸಬೇಕಾಗಿ ವಿನಂತಿಸಲಾಗಿದೆ.
ಗಮಕ ದಿಗ್ಗಜ ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.