ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ ವಿತರಣೆ
ಸಂಜೆವಾಣಿ ವಾರ್ತೆ
ಹನೂರು ಜು 17 :- ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಎಫ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಉಚಿತವಾಗಿ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಪುಸ್ತಕ ವಿತರಿಸಿ ವಿಜಯಕುಮಾರ್ ಅವರು ಮಾತನಾಡಿ ಸ್ವತಃ ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿರುವ ನನಗೆ, ಸರ್ಕಾರಿ ಶಾಲೆಯ ಮಕ್ಕಳ ಪರಿಸ್ಥಿತಿ ನನಗೆ ತಿಳಿದಿದ್ದು ಗ್ರಾಮಾಂತರ ಜಿಲ್ಲೆ ಹಾಗೂ ಗಡಿ ಭಾಗದ ಕಾಡಾಂಚಿನ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕಷ್ಟವಾಗಬಾರದೆಂದು ಉಚಿತವಾಗಿ ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ಎಫ್ಸನ್ ಸಂಸ್ಥೆಯು ನೆರವಿನೊಂದಿಗೆ ವಿತರಿಸಲಾಗಿದೆ.
ಎಫ್ಸನ್ ಇಂಡಿಯಾ ಸಂಸ್ಥೆ ಮುಂದಿನ ವರ್ಷ ಚಾಮರಾಜನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿರುವ ಗ್ರಾಮೀಣ ಶಾಲೆಗಳಿಗೆ ಹೆಚ್ಚಿನ ನೆರವನ್ನು ಒದಗಿಸುವ ದೊಡ್ಡ ಯೋಜನೆಯನ್ನೂ ರೂಪಿಸುವಂತೆ ಅವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
ಶಿಕ್ಷಕರು ಮಕ್ಕಳ ಓದಿನ ಜೊತೆಗೆ ಫಿಟ್‍ನೆಸ್ ಹೆಚ್ಚಿಸಲು ಮಕ್ಕಳಲ್ಲಿ ಶಾಲಾ ಮಟ್ಟದಿಂದಲೇ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಲಾ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ, ಸೌಹಾರ್ದ ಕರ್ನಾಟಕ ಹಾಗೂ ಹಸಿರೇ-ನಮ್ಮುಸಿರು ಫೌಂಡೇಷನ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಮಕ್ಕಳಲ್ಲಿ ದೇಶಭಕ್ತಿ ತುಂಬಿ ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿ ಬೆಳೆಸಬೇಕು.
ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಶಿಸ್ತು ಕಲಿಸಿದಾಗ ಸದೃಢವಾಗಿ ನಿರ್ಮಾಣವಾಗುತ್ತಾರೆ ಸರ್ಕಾರದ ಮತ್ತು ವಿವಿಧ ಸಂಘ ಸಂಸ್ಥೆಗಳು ಕೊಡುವ ಎಲ್ಲಾ ಸೌಲಭ್ಯಗಳನ್ನು ಸಮಗ್ರವಾಗಿ ಬಳಸಿಕೊಂಡು ಮಕ್ಕಳು ವ್ಯಾಸಂಗದ ಕಡೆಗೆ ಗಮನ ಕೊಟ್ಟರೆ ಭವಿಷ್ಯ ಉತ್ತಮವಾಗಲಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯಿನಿರಾಣಿ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕೆಯಲ್ಲಿ ಪೆÇ್ರೀತ್ಸಾಹಿಸಬೇಕೆಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ. ನರಸಿಂಹಮೂರ್ತಿ ಮತ್ತು ವಿಜಯ್ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಅವರ ಒತ್ತಾಸೆಯಾಗಿದ್ದು, ಈ ಹಿನ್ನಲೆಯಲ್ಲಿ ಎಫ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೂಲಕ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಶಾಲೆಗೆ ನೀಡಿರುವ ಅವರ ಈ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಸರಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಎಫ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ಸಾಂಬಾ ಮೂರ್ತಿ, ಹೆಚ್ ಆರ್ ಡಿ ರಾಜೇಂದ್ರ ಕುಮಾರ್ ಸಿಂಗ್ ಮತ್ತು ಆಡ್ಮಿನ್ ಶಿವಕುಮಾರ್ ಸಿ. ಎಸ್ ಅವರುಗಳ ಸಹಾಯಸ್ತದ ನೆರವಿನಿಂದ ಶಾಲೆಯ ಎಲ್ಲಾ ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ಮಳೆ ನೀರಿನಿಂದ ಪಠ್ಯಪುಸ್ತಕಗಳಿಗೆ ರಕ್ಷಣೆ ನೀಡುವ ಉತ್ತಮ ಬ್ಯಾಗ್‍ಗಳನ್ನು ಮತ್ತು ನೋಟ್ ಪುಸ್ತಕಗಳನ್ನು ವಿಜಯ್ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಮತ್ತು ಸೌಹಾರ್ದ ಕರ್ನಾಟಕ ಹಾಗೂ ಹಸಿರೇ-ನಮ್ಮುಸಿರು ಫೌಂಡೇಷನ್ ಅಧ್ಯಕ್ಷ ರ. ನರಸಿಂಹಮೂರ್ತಿ ವಿತರಿಸಿದರು.
ವಿಜಯ್ ಫೌಂಡೇಷನ್ ಸದಸ್ಯರಾದ ಕಾಂತರಾಜು, ಶ್ರೀಧರ್, ಲಕ್ಷ್ಮೀ ನಾರಾಯಣ, ಕೃಷ್ಣಮೂರ್ತಿ, ಕಿರಣ್, ಶಿಕ್ಷಕರಾದ ಚಿನ್ನರಾಜು, ಮಹಾದೇವ್, ಮಹಾಲಕ್ಷ್ಮೀ, ಸುಜಾತಾ, ಗಿರೀಶ್, ಶಾಲಾ ಮಕ್ಕಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.