ಮೋಹರಂ ಹಬ್ಬ : ಭಾವೈಕ್ಯತೆಯೊಂದಿಗೆ ಮೇರೆದ ಮುಸ್ಲಿಂ ಬಾಂದವರು
ತಾಳಿಕೋಟೆ:ಜು.17: ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಖಾಸ್ಗತ ಶಿವಯೋಗಿಗಳ ಕಾಲದಿಂದಲೂ ಶ್ರೀ ಖಾಸ್ಗತ ಮಠದೊಂದಿಗೆ ಇಟ್ಟ ಮುಸ್ಲಿಂ ಬಾಂದವರ ಒಡನಾಟ ಇನ್ನೂ ಸರಪಳಿ ಕೊಂಡಿಯಂತೆ ಮುಂದುವರೆದಿದೆ.
ಶ್ರೀ ಖಾಸ್ಗತ ಜಾತ್ರೋತ್ಸವ ಹಾಗೂ ಮೋಹರಂ ಹಬ್ಬ ಈ ಎರಡೂ ಉತ್ಸವಗಳು ಏಕಕಾಲಕ್ಕೆ ಆಗಮಿಸಿದ್ದರಿಂದ ಈ ಉತ್ಸವಗಳಲ್ಲಿ ಯಾವುದೇ ತರಹದ ತೊಂದರೆಯಾಗದಂತೆ ಪೊಲೀಸ್ ಠಾಣೆಯಲ್ಲಿ ಜರುಗಿದ ಶಾಂತಿಪಾಲನಾ ಸಭೆಯಲ್ಲಿ ಹಿಂದೂ ಮುಸ್ಲಿಂ ಬಾಂದವರು ಕೈಕೊಂಡ ನಿರ್ಣಯದಂತೆ ಇದರಲ್ಲಿ ಹೆಚ್ಚಿಗೆ ಒಪ್ಪಿಗೆ ಸೂಚಿಸಿದ ಮುಸ್ಲಿಂ ಬಾಂದವರ ಭಾವೈಕ್ಯತೆಯ ಒಡನಾಟ ಎತ್ತಿ ತೋರಿಸಿತು ಎಂಬುದು ಮೋಹರಂ ಹಬ್ಬ ಜರುಗಿದ ಧಪನ್ ದಿನದಂದು ಕಂಡುಬಂದಿತು.
ಇತ್ತೀಚಗೆ ಈ ಎರಡೂ ಹಬ್ಬಗಳ ಉತ್ಸವಗಳ ಕುರಿತು ಪೊಲೀಸ್ ಠಾಣೆಯಲ್ಲಿ ಕರೆಯಲಾದ ಎರಡೂ ಕೋಮಿನ ಜನತೆಯೊಂದಿಗೆ ಡಿಎಸ್‍ಪಿ ಹಾಗೂ ಪಿಎಸ್‍ಐ ಅವರು ಚರ್ಚೆಗೆ ಇಳಿದಾಗ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ದಿ.17 ರಂದು ಶ್ರೀ ಖಾಸ್ಗತೇಶ್ವರ ಮಠಕ್ಕೆ ಅಸಂಖ್ಯಾತ ಭಕ್ತರು ಈ ಹಿಂದಿನ ಪರಿಪಾಠದಂತೆ ದೀಡ ನಮಸ್ಕಾರ ಹಾಕುವ ಕಾರ್ಯ ನಡೆಯುತ್ತದೆ ಕಾರಣ ದಿ.17 ರಂದು ಮೋಹರಂ ಹಬ್ಬವು ಜರುಗುವ ಕಾರಣದಿಂದ ಹೆಚ್ಚಿಗೆ ಜನದಟ್ಟನೆಯಾಗುವ ಸಾದ್ಯತೆ ಇದೆ ಈ ಕಾರಣದಿಂದ ಮುಸ್ಲಿಂ ಬಾಂದವರು ಸಹಕರಿಸಿ 17 ರಂದು ಜರುಗಬೇಕಾದ ಮೋಹರಂ ಹಬ್ಬವನ್ನು ದಿ.16ರಂದೇ ಆಚರಿಸಿದರೆ ಒಳಿತಾಗುತ್ತದೆ ಎಂಬ ಮಾತನ್ನಾಡಿದನ್ನು ಲಕ್ಷೀಸಿದ ಪೊಲೀಸ್ ಇಲಾಖೆಯವರೂ ಸಹ ಈ ವಿಷಯಕ್ಕೆ ಸಹಮತಿಸಿದ್ದ ಕಾರಣದಿಂದ ಮುಸ್ಲಿಂ ಬಾಂದವರೂ ಸಹ ಶ್ರೀ ಖಾಸ್ಗತೇಶ್ವರ ಮಠದೊಂದಿಗೆ ಈ ಹಿಂದಿನಿಂದ ಸಾಗಿಬಂದ ಬಾಂದವ್ಯ ಕುರಿತು ಪ್ರೀತಿ ಪ್ರೆಮದ ಒಡನಾಟ ಕುರಿತು ಮಾತನಾಡಿದ ಕಾರಣದಿಂದಲೇ ದಿ.16 ರಂದು ಮೋಹರಂ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂದವರು ಈ ಹಿಂದಿನಿಂದ ಸಾಗಿಬಂದಂತಹ ಭಾವೈಕ್ಯತೆಗೆ ಮೇರಗು ನೀಡಿದಂತಾಯಿತು.
ಕಾಳಗಿ ದೇವರಿಗೆ ಹಾಗೂ ಶ್ರೀ ಖಾಸ್ಗತಮಠದ ಒಡನಾಟ : ಶ್ರೀ ಖಾಸ್ಗತ ಶಿವಯೋಗಿಗಳ ಕಾಲದಿಂದಲೂ ಮಹಾಲ್‍ಗಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಕಾಳಗಿ ಫೀರಾ ಎಂಬ ಮೋಹರಂ ಹಬ್ಬದ ದೇವರ ಪ್ರತಿಷ್ಠಾಪನೆಯು ಕಳೆದ ಮೂರು ತಲೆಮಾರಿನಿಂದಲೂ ಶ್ರೀಮಠದೊಂದಿಗೆ ಭಾವೈಕ್ಯತೆಯೊಂದಿಗೆ ಸಾಗಿಬಂದಿದೆ ಎಂಬ ಮಾತು ಮುಸ್ಲಿಂ ಬಾಂದವರ ಹಿರಿಯರ ಮಾತಾಗಿದೆ. ಕಾಳಗಿ ದೇವರು ಅಂದರೆ ಮೋಹರಂ ಹಬ್ಬದಲ್ಲಿ ಈ ಹಬ್ಬಕ್ಕೆ ಆಗಮಿಸಿದ ಜನತೆ ಭಕ್ತ ಸಮೂಹ ನೋಡಬೇಕೆಂಬ ಆಸೆ ಆತೂರತೆಯೂ ಈ ಹಿಂದಿನಿಂದಲೂ ಹೆಚ್ಚುತ್ತಾ ಸಾಗಿದೆ ಈ ಕಾಳಗಿ ದೇವರು ವರ್ಷದ ವರೆಗೆ ಜರುಗುತ್ತಿರುವ ಆಗು ಹೋಗುಗಳ ಕುರಿತು ಹೇಳಿಕೆ ನೀಡುತ್ತಿರುವ ಈ ಹಿಂದಿನಿಂದಲೂ ಮುಂದುವರೆದಿದೆ. ಕಾಳಗಿ ದೇವರು ಹೇಳಿಕೆ ನೀಡುವಾಗ ಬಾಯಿಮಾತಿನಿಂದ ಹೇಳಿಕೆ ನೀಡದೇ ಕೇವಲ ಕೈ ತೋರುವ ಮುಖಾಂತರ ಬೆರಳು ತೋರಿಸುವ ಮುಖಾಂತರ ಹೇಳಿಕೆ ಹೊರಬರಲಿದೆ ಆ ಹೇಳಿಕೆ ಎಂತಹದ್ದು ಎಂಬುದು ಆ ದೇವರೊಂದಿಗೆ ಇರುವ ಆ ಜನತೆಯು ತಿರ್ಮಾನಿಸಿ ಹೊರ ಹಾಕುತ್ತಿರುವದು ಇಂದಿನವರೆಗೂ ನಡೆದೇ ಇದೆ.
ಇದು ಅಲ್ಲದೇ ಕಾಳಗಿ ದೇವರು ಮೋಹರಂ ದಿನದಂದು ನೇರವಾಗಿ ಮಹಲ್‍ಗಲ್ಲಿಯಿಂದ ಶ್ರೀ ಖಾಸ್ಗತೇಶ್ವರ ಮಠಕ್ಕೆ ಈ ಹಿಂದಿನಂತೆ ಆಗಮಿಸಿ ಶ್ರೀಗಳೊಂದಿಗೆ ಕೈಸೊನ್ನೆಯಿಂದ ಮಾತುಕತೆ ನಡೆಸಿದ ನಂತರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿಯೂ ಅಧಿಕಾರಿವರ್ಗದವರಿಂದ ಪುಷ್ಪಹಾರ ಹಾಕಿಕೊಂಡು ಗೌರವಿಸಿಕೊಂಡು ಬರುವ ಪರಿಪಾಠವೂ ಮುಂದುವರೆದಿದೆ ಒಟ್ಟಿನಲ್ಲಿ ತಾಳಿಕೋಟೆ ಪಟ್ಟಣದಲ್ಲಿ ಕಾಳಗಿ ದೇವರ ಹೇಳಿಕೆಯನ್ನು ಅರೀಯಲು ಅಸಂಖ್ಯಾತ ಜನರು ಆಗಮಿಸಿ ಪಂಚೆಸೈಯದ ದರ್ಗಾದ ಹತ್ತಿರ ಆಗಮಿಸಿ ಎಂದಿನಂತೆ ಕೇಳಿಬರುತ್ತಾ ಸಾಗಿದಂತೆ ಈ ಸಲವೂ ಕೂಡಾ ನೇರೆದು ಕೈಸೊನ್ನೆಯಿಂದ ಹೇಳಿದ ಹೇಳಿಕೆಯನ್ನು ಅರಿತು ಹೋಗಿದ್ದೇನು ಕಡಿಮೇನಿಲ್ಲಾ.
ಒಟ್ಟಿನಲ್ಲಿ ತಾಳಿಕೋಟೆ ಪಟ್ಟಣದಲ್ಲಿ ಜರುಗಿದ ಮೋಹರಂ ಹಬ್ಬವನ್ನು ಮುಸ್ಲಿಂ ಬಾಂದವರು ಭಾವೈಕ್ಯತೆಯೊಂದಿಗೆ ಜರುಗಿಸಲು ಕಾರಣರಾಗಿದ್ದು ಅವರ ತಿರ್ಮಾನದಂತೆ ಪಟ್ಟಣದಲ್ಲಿ ಸುಮಾರು 10 ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಎಲ್ಲ ಮೋಹರಂ ಹಬ್ಬದ ದೇವರುಗಳ ದಫನ್ ಕಾರ್ಯವೂ ದಿ.16 ರಂದೇ ನೇರವೇರಿತಲ್ಲದೇ ಈ ಕಾರ್ಯದಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಈ ಹಿಂದಿನಿಂದಲೂ ಬೆಸೆದುಬಂದಿರುವದು ಮುಂದುವರೆಯತಲ್ಲಾ ಎಂಬ ಮಾತು ಪ್ರಜ್ಞಾವಂತ ನಾಗರಿಕರದ್ದಾಗಿದೆ.
ಈ ಉತ್ಸವದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಪಿಎಸ್‍ಆಯ್ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿಎಸ್‍ಐ ಆರ್.ಎಸ್.ಭಂಗಿ, ಸಿಬ್ಬಂದಿಗಳಲ್ಲದೇ ಡಿಆರ್ ತುಕಡಿ ಪೊಲೀಸ್ ಸಿಬ್ಬಂದಿಗಳನ್ನೋಳಗೊಂಡು ಯೋಗ್ಯ ಬಂದೋಬಸ್ತ ಏರ್ಪಡಿಸಿದ್ದರು.