ಖಾಸ್ಗತ ಭಕ್ತವೃಂದದಿಂದ ಭೀಮನಭಾವಿ ಸ್ವಚ್ಚತಾ ಕಾರ್ಯ
ತಾಳಿಕೋಟೆ:ಜು.17: ಶ್ರೀ ಖಾಸ್ಗತೇಶ್ವರ ಮಠದ ಗಂಗಸ್ಥಳದ ಮೂಲಸ್ಥಾನವಾಗಿರುವ ರಾಜವಾಡೆಯಲ್ಲಿಯ ಪುರಾತನ ಭೀಮನಭಾವಿ ಸ್ವಚ್ಚತಾ ಕಾರ್ಯವು ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಸಮ್ಮುಖದಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಬ್ರಿಲಿಯಂಟ್ ಶಾಲಾ ವಿದ್ಯಾರ್ಥಿಗಳು ಮತ್ತು ನೂರಾರು ಜನ ಭಕ್ತವೃಂದವು ಯಶಸ್ವಿಯಾಗಿ ಶ್ರಮದಾನ ವಹಿಸಿ ಸ್ವಚ್ಚಗೊಳಿಸಿದರು.
ಕಳೆದ ತಿಂಗಳು ಸುರಿದ ಮಳೆಯಿಂದ ಭಾವಿಯ ಸುತ್ತಲಿನ ಗೋಡೆಗಳು ಕುಸಿದು ಬಿದ್ದು ಭಾವಿಯೊಳಗೆ ಕಲ್ಲು ಚಿಪ್ಪಡಿ ಕಸ ಕಪ್ಪಿಜೊಂಡು ಅಲ್ಲದೇ ಕಟ್ಟಿಗೆ ಇನ್ನಿತರಗಳಿಂದ ಹೂಳುತುಂಬಿಕೊಂಡಿತ್ತು.
ಇದನ್ನು ಗಮನಿಸಿದ ಶ್ರೀ ಖಾಸ್ಗತ ಭಕ್ತವೃಂದ ಹಾಗೂ ಸಾಮಾಜಿಕ ಕಾರ್ಯಕರ್ತರ ಪಡೆ ರವಿವಾರರಂದು ಬೆಳಿಗ್ಗೆ 7 ಗಂಟೆಯಿಂದ ಭಾವಿಸ್ವಚ್ಚತಾ ಕಾರ್ಯದ ಶ್ರಮದಾನವನ್ನು ಇಟ್ಟುಕೊಂಡು ಕಾರ್ಯನ್ಮೋಖರಾಗಿ ಭಾವಿಯಲ್ಲಿಯ ಶೇ.90 ರಷ್ಟು ಸ್ವಚ್ಚತೆಗೊಳಿಸುವದರೊಂದಿಗೆ ಭಾವಿಗೆ ಪುನಶ್ಚೇತನ ನೀಡುವಂತಹ ಕಾರ್ಯವನ್ನು ಮಾಡಿರುವದು ಜನರ ಪ್ರಶಂಶೆಗೆ ಕಾರಣವಾಗಿದೆ.
ಸುಮಾರು ನೂರಾರು ವರ್ಷಗಳ ಪುರಾತನ ಭಾವಿಯಾದ ಭೀಮನಭಾವಿ ಸ್ವಚ್ಚಂದವಾಗಿ ಮತ್ತು ಜನರ ಉಪಯೋಗಕ್ಕೆ ಬರುವಂತೆ ಸ್ವಚ್ಚಗೊಳಿಸಲಾಯಿತು. ಈ ಭಾವಿಯಲ್ಲಿ ಕೇವಲ ಜಾತ್ರಾ ಉತ್ಸವಗಳ ಗಂಗಸ್ಥಳ ಅಷ್ಟೇ ಅಲ್ಲದೇ ಪಟ್ಟಣದಲ್ಲಿ ವಿವಿಧ ವೈಯಕ್ತಿಕ ಮಧುವೆ, ಮುಂಜುವಿ ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿರುವ ಪುರಾತನ ಭೀಮನಭಾವಿಯು ಒಂದೇ ಆಗಿರುವದರಿಂದ ಇದನ್ನು ಗಮನಿಸಿದ ಭಕ್ತವೃಂದವು ನಮ್ಮೂರಿನ ಹೇಮ್ಮೆಯ ಭೀಮನಭಾವಿಯನ್ನು ಸ್ವಚ್ಚತೆಗೊಳಿಸಲು ವಿವಿಧ ರೀತಿಯ ತಂಡಗಳನ್ನು ರಚಿಸಿಕೊಂಡು ಸಂಪೂರ್ಣ ಸ್ವಚ್ಚತೆಗೊಳಿಸಲು ಮುಂದಾಗಿರುವದು ಶ್ಲಾಘನಿಯವಾಗಿದೆ.