ಜಿಲ್ಲಾ ವಿಪತ್ತು ನಿರ್ವಹಣಾ ಸಭೆ:ಡೆಂಗ್ಯೂ ನಿಯಂತ್ರಣಕ್ಕೆ ಲಾರ್ವಾ ಸರ್ವೆ ತೀವ್ರಗೊಳಿಸಬೇಕು:ಜನಪ್ರತಿನಿಧಿಗಳ ಸಹಕಾರ ಪಡೆದು ಸಾರ್ವಜನಿಕರಿಗೆ ಅರಿವು ಮೂಡಿಸಿ
ಕಲಬುರಗಿ:ಜು.16: ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅರಿವೆ ಮದ್ದಾಗಿದ್ದು, ಆಶಾ ಮತ್ತು ಆರೋಗ್ಯ ಕಾರ್ಯರ್ತೆಯರು ಮನೆ-ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೆ ಮಾಡಿ ಮನೆ ಸುತ್ತಮುತ್ತ ಪರಿಸರ ಸ್ವಚ್ಛತೆ ಮತ್ತು ಸೊಳ್ಳೆ ಇರದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮನೆ-ಮನೆಗೆ ಹೋಗಿ ತಿಳುವಳಿಕೆ ಮೂಡಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಪೆÇೀಸ್ಟರ್ ಅಂಟಿಸಬೇಕು. ಸ್ಬಚ್ಛತಾ ವಾಹಿನಿಗಳ ಮೂಲಕ ಜಿಂಗಲ್ಸ್ ಮೂಲಕ ಪ್ರಚಾರ ಮಾಡುವ ಮೂಲಕ ಐ.ಇ.ಸಿ. ಚಟುವಟಿಕೆ ತೀವ್ರಗೊಳಿಸಬೇಕು ಎಂದ ಅವರು, ಆರೋಗ್ಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳು ನೈರ್ಮಲ್ಯ ಕುರಿತು ಅಗತ್ಯ ಸಹಕಾರ ನೀಡಬೇಕೆಂದರು.
ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರು ಟಾಸ್ಕ್ ಫೆÇೀರ್ಸ್ ಕಮಿತಿ ಸಭೆ ಕರೆದು ಡೆಂಗ್ಯೂ, ಚಿಕನ್ ಗುನ್ಯಾ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಬೇಕು. ಪ್ರತಿ ಶಾಲೆ-ಅಂಗನವಾಡಿಯಲ್ಲಿ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡಬೇಕೆಂದು ಡಿ.ಡಿ.ಪಿ.ಐ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಡಿಸ್ ಸೊಳ್ಳೆ ದಿನದಲ್ಲಿ ಕಚ್ಚುವುದರಿಂದ ಶಾಲೆ-ಕಾಲೇಜು, ಕಚೇರಿ, ಕೈಗಾರಿಕೆ ಘಟಕಗಳು, ಧಾರ್ಮಿಕ ಸ್ಥಾನ, ಸಾರ್ವಜನಿಕ ಸ್ಥಳದಲ್ಲಿ ಸೊಳ್ಳೆ ಮುಲ ತಾಣಗಳ ನಾಶಪಡಿಸುವ ಅಗತ್ಯವಿದೆ. ಇದರ ಜೊತೆಗೆ ಸ್ವಚ್ಚತಾ ಕಾರ್ಯ ಸಹ ನಡೆಸಿ ಎಂದು ತಾಲೂಕಾ ಪಂಚಾಯತ್ ಇ.ಓ ಮತ್ತು ಪೌರ ಸಂಸ್ಥೆಗಳ ಮುಖ್ಯಸüರಿಗೆ ಸೂಚನೆ ನೀಡಿದರು.
ಡೆಂಗ್ಯೂ ತಪಾಸಣೆಗೆ ಹೆಚ್ಚಿನ ದರ ಪಡೆಯುವಂತಿಲ್ಲ: ಡೆಂಗ್ಯೂ ಪತ್ತೆಗೆ ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಉಚಿತ ಎಲಿಸಾ ವಿಧಾನದ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಖಾಸಗಿ ಪ್ರಯೋಗಾಲಯದಲ್ಲಿ ರಾಪಿಡ್ ಕಾರ್ಡ್ ವಿಧಾನದ ಟೆಸ್ಟ್ ಗೆ 250 ರೂ. ನಿಗದಿ ಮಾಡಿದ್ದು, ಇದಕ್ಕೂ ಮೀರಿ ಹೆಚ್ಚಿನ ದರ ಪಡೆಯಬಾರದೆಂದು ಪ್ರಯೋಗಾಲಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಡಿ.ಎಚ್.ಓ ಅವರಿಗೆ ಡಿ.ಸಿ. ಸೂಚನೆ ನೀಡಿದರು.
ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಮಾತನಾಡಿ ಕಳೆದ 2022, 2023 ವರ್ಷದ ಮೇ ಮತ್ತು ಜೂನ್ ಮಾಹೆಯ ಅಂಕಿ ಸಂಖ್ಯೆಗಳನ್ನು ಈ ವರ್ಷದ ಮೇ ಮತ್ತು ಜೂನ್ ಮಾಹೆಗೆ ಹೋಲಿಸಿದಾಗ ಅμÉ್ಟೀನೂ ಪಾಸಿಟಿವ್ ಸಂಖ್ಯೆ ಪ್ರಕರಣ ಹೆಚ್ಚಿಲ್ಲ. ಜುಲೈ ಮಾಹೆಯಲ್ಲಿ ಕ್ರಮೇಣ ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ವಿಶೇಷವಾಗಿ 15-29 ವಯೋಮಾನದವರಲ್ಲಿಯೆ ಡೆಂಗ್ಯೂ ಕಂಡು ಬಂದಿದೆ. ಇದುವರೆಗೆ 832 ಟೆಸ್ಟ್ ಮಾಡಿದ್ದು, 84 ಪಾಸಿಟಿವ್ ಪತ್ತೆಯಾಗಿದೆ. ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಗುಣಮುಖರಾಗಿದ್ದಾರೆ. ಪ್ರತಿ ಪಿ.ಎಚ್.ಸಿಯಲ್ಲಿ 2, ಸಿ.ಹೆಚ್.ಸಿ ಯಲ್ಲಿ 5, ತಾಲೂಕಾ ಆಸ್ಪತ್ರೆಯಲ್ಲಿ 10 ಹಾಗೂ ಜಿಮ್ಸ್-ಇ.ಎಸ್.ಐ ಆಸ್ಪತ್ರೆಯಲ್ಲಿ ತಲಾ 20 ಹಾಸಿಗೆ ಮೀಸಲಿರಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರೋಗ್ಯ ಸಮಿತಿ ಕರೆದು ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಸ್ವಚ್ಛತಾ ಕಾರ್ಯ ಪೆÇೀಟೋ ಫೆÇೀಸ್ ಗೆ ಸೀಮಿತವಾಗಬಾರದು. ಕೆರೆ, ಬಾವಿ, ಗಣಿ, ಕ್ವಾರಿ ಹೀಗೆ ನೀರು ನಿಲ್ಲುವ ಪ್ರದೇಶದಲ್ಲಿ ಗಪ್ಪೆ ಮೀನು ಬಿಡಬೇಕು ಎಂದರು.
ವಾರದಲ್ಲಿ ದುರಸ್ತಿ ಮಾಡಿ: ಅತಿವೃಷ್ಟಿಯಿಂದ ಹಾನಿಯಾದ ರಸ್ತೆ, ಸೇತುವೆ, ಅಂಗನವಾಡಿ-ಶಾಲಾ ಕಟ್ಟಡ, ಗ್ರಾಮ ಪಂಚಾಯತ ಕಚೇರಿ, ಆಸ್ಪತ್ರೆ ದುರಸ್ತಿ, ವಿದ್ಯುತ್ ಕಂಬ, ಟಿ.ಸಿ. ಅಳವಡಿಕೆಗಳಿದಲ್ಲಿ ಇವುಗಳನ್ನು ಒಂದು ವಾರದಲ್ಲಿ ದುರಸ್ತಿಪಡಿಸಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಬೇಕು. ವಿನಾಕಾರಣ 2-3 ತಿಂಗಳ ನಂತರ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲ ಎಂದರು.
ಕೆರೆ ಬಂಡಿಂಗ್ ಸರಿಪಡಿಸಿ: ಮುಂದಿನ ದಿನದಲ್ಲಿ ಮಳೆ ಹೆಚ್ಚಿರುವ ಮುನ್ಸೂಚನೆ ಇರುವ ಕಾರಣ ಕೆರೆ, ಕಟ್ಟೆಗಳು ಒಡೆದು ಹೊಲಕ್ಕೆ ನೀರು ನುಗ್ಗುವುದನ್ನು ತಪ್ಪಿಸಲು ಕೂಡಲೆ ಸಣ್ಣ ನೀರಾವರಿಯ 169 ಮತ್ತು ಪಿ.ಆರ್.ಇ.ಡಿ ಇಲಾಖೆಯ 33 ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಈ ಪೈಕಿ ದುರಸ್ತಿಗಳಿದ್ದಲ್ಲಿ ಕೂಡಲೆ ಸರಿಪಡಿಸಬೇಕು. ಕೆರೆ ಸುತ್ತ ಬಂಡಿಂಗ್ ಸರಿಯಾಗಿದೆಯೆ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
ಬೆಳೆ ವಿಮೆಯಲ್ಲಿ ಕಳೆದ ವರ್ಷ ನಮ್ಮ ಜಿಲ್ಲೆಯ ರೈತರಿಗೆ ದಾಖಲೆ ಪ್ರಮಾಣದಲ್ಲಿ ಪರಿಹಾರ ದೊರಕಿದ್ದು, ಪ್ರಸಕ್ತ ಸಾಲಿನಲ್ಲಿ 3 ಲಕ್ಷ ರೈತರ ನೋಂದಣಿ ಮಾಡಿಸಬೇಕು. ಬೆಳೆ ಹಾನಿ ಕುರಿತು ಜಿಲ್ಲೆಯ 929 ಪೈಕಿ 894 ಗ್ರಾಮ ಪಂಚಾಯತಿಯಲ್ಲಿ ಕ್ರಾಪ್ ಸರ್ವೆ ಮುಗಿದಿದ್ದು, ಉಳಿದ 35 ಗ್ರಾಮಗಳಲ್ಲಿ ಬುಧವಾರದೊಳಗೆ ಮುಗಿಸಬೇಕೆಂದರು. ಜಂಟಿ ಕೃಷಿ ನಿರ್ದೇಶಕ ಸಮದ್ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಶೇ.85ರಷ್ಟು ಬಿತ್ತನೆಯಾಗಿದೆ. ಬೀಜ, ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು.
ಬರಗಾಲ ಮತ್ತು ಅತಿವೃಷ್ಟಿ ಸಂದರ್ಭದಲ್ಲಿ ಜಾನುವಾರುಗಳು, ಕುರಿ-ಮೇಕೆ ಮೃತಪಟ್ಟಿದಲ್ಲಿ ಕಾಮಧೇನು, ಅನುಗ್ರಹ ಯೋಜನೆಯಡಿ ಪರಿಹಾರ ನೀಡಲು ಕಡತ ಮಂಡಿಸಿ ಎಂದು ಪಶುಸಂಗೋಪನೆ ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಟಿ.ಅವಟಿ ಅವರಿಗೆ ಡಿ.ಸಿ. ನಿರ್ದೇಶನ ನೀಡಿದ ಅವರು, ಮಾನವ ಹಾನಿ, ಮನೆ ಹಾನಿಯಾದಲ್ಲಿ ತಕ್ಷಣವೇ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಜಿಲ್ಲೆಯ 64 ಗ್ರಾಮ ಪಂಚಾಯತಿಗಳಲ್ಲಿ ನೆರೆ ಹಾವಳಿ ಉಂಟಾಗುವ ಸಾಧ್ಯತೆ ಇದ್ದು, ಕೂಡಲೆ ಜಿಲ್ಲಾ ಮತ್ತು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅವಶ್ಯವಿದ್ದಲ್ಲಿ ಕಾಳಜಿ ಕೇಂದ್ರ, ಜಾನುವಾರಗಳ ಕ್ಯಾಂಪ್ ತೆರೆಯುವ ಸಂಬಂಧ ಸ್ಥಳೀಯರು, ಚುನಾಯಿತ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪೂರ್ವ ಸಿದ್ಧತೆ ಮಾಡಿಟ್ಟುಕೊಳ್ಳಬೇಕು ಎಂದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಅಯುಕ್ತೆ ರೂಪಿಂದರ್ ಸಿಂಗ್ ಕೌರ್, ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ, ಟಿ.ಎಚ್.ಓ, ಅರೋಗ್ಯ ಕಾರ್ಯಕ್ರಮಾಧಿಕಾರಿಗಳು, ಪೌರ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಪ್ರಾಧಿಕಾರದ ಸಮಿತಿ ಸದಸ್ಯರು ಇದ್ದರು.