ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು:ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ
ಕಲಬುರಗಿ:ಜು.16: ಬಾಲ ಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆ ಕೈಗೊಳ್ಳಬೇಕು ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ ಶ್ರೀನಿವಾಸ ನವಲೆ ಅವರು ಹೇಳಿದರು.
ಮಂಗಳವಾರದಂದು ಅಪ್ಪಾ ಪಬ್ಲಿಕ್ ಶಾಲೆಯ ಅವರಣದಲ್ಲಿರುವ ಪೂಜ್ಯ ಬಸವರಾಜ ಅಪ್ಪಾ ಸಭಾಗೃಹದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಪೆÇಲೀಸ್ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಮಕ್ಕಳ ಸಹಾಯವಾಣಿ-1098/112,ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ,ಅಪ್ಪಾ ಪಬ್ಲಿಕ ಶಾಲೆ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 3ನೇ ಹಂತದ ಮಿಷನ್ “ಸುರಕ್ಷಾ” ಗ್ರಾಮ ಮಟ್ಟದ ಅಧಿಕಾರಿಗಳಿಗೆ ಪೆÇೀಕ್ಸೋ ಕಾಯ್ದೆ,ಬಾಲ್ಯ ವಿವಾಹ ನಿμÉೀಧ ಕಾಯ್ದೆ,ಕಿಶೋರಾವಸ್ಥೆ ಮತ್ತು ಬಾಲ ಕಾರ್ಮಿಕ ನಿμÉೀಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ತರಬೇತಿ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಜ್ಯೋತಿ ಬೆಳಗಿಸುವ ಮೂಲಕ ಶ್ರೀ ಶ್ರೀನಿವಾಸ ನವಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕನಿಷ್ಠ 7 ವರ್ಷ ಶಿಕ್ಷೆ ಕೊಡಬೇಕಾದ ಪೆÇೀಕ್ಸೋ ಕಾಯ್ದೆಯಲ್ಲಿ ಕೊಡಬೇಕಾಗುತ್ತದೆ ಇಂತಹ ಒಂದು ಪರಿಸ್ಥಿತಿಯ ಬರದ ಹಾಗೆ ತಡೆಗಟ್ಟುವಂತಹದ್ದು ಕೆಲಸವಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ ಶ್ರೀನಿವಾಸ ನವಲೆ ಅವರು ಪ್ರತಿಜ್ಞೆ ವಿಧಿ ಭೋಧಿಸಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ. ಮಾತನಾಡಿ, ಬಾಲ್ಯವಿವಾಹ ಸಮಾಜದಲ್ಲಿ ದೊಡ್ಡ ಪೀಡುಗಾಗಿದೆ ಪ್ರತಿಯೊಂದು ಪದವಿ ಹಾಗೂ ಪದವಿ ಪೂರ್ವ ಕಾಲೇಜಿಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿ ಮಾಡಬೇಕು ಸರ್ಕಾರದ ಕೆಲಸಕ್ಕೆ ಬರುವವರು ಸಮಾಜ ಸೇವೆಯನ್ನ ಮಾಡಲು ಬಂದಹಾಗೆ ನಮ್ಮ ಮುಂದೆ ಅನ್ಯಾಯ ಆಗುತ್ತಿದ್ದಾಗ ನಾವು ಸಮ್ಮನೆ ಕೊತಕೊಳ್ಳಬಾರದು ಯಾವುದೇ ರೀತಿಯಾಗಿ ಗೊಂದಲ ಉಂಟಾದರೆ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳು ಕಲಬುರಗಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಮಹಿಳ ಮತ್ತು ಮಕ್ಕಳು ಯಾವುದೇ ಕೆಲಸವಿದ್ದರೆ ಅದಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ ಜಿಲ್ಲೆಯಲ್ಲಿ ಪೆÇೀಕ್ಸೋ ಕಾಯ್ದೆಯಲ್ಲಿ ಶಿಕ್ಷೆಗಳಾಗಿವೆ ಮಿಸಿಂಗ್ ಕೇಸ್‍ಗಳು ಜಾಸ್ತಿಯಾಗಿವೆ ಮತ್ತು ಅವುಗಳನ್ನು ಪತ್ತೆ ಮಾಡುವಂತಹ ಕೆಲಸ ನಡೆದಿದೆ ಎಂದರು.
ಮಕ್ಕಳು ಮತ್ತು ಮಹಿಳಾ ಮೇಲೆ ಯಾವುದೇ ರೀತಿಯಾದ ಕೇಸ್ ಬಂದಲ್ಲಿ ಅವುಗಳನ್ನು ತಡಮಾಡದೆ ವರಧಿಯನ್ನು ಸಲ್ಲಿಸಬೇಕೆಂದು ಆದೇಶಿಸಿದ್ದೇವೆ ಮತ್ತು ಎಲ್ಲಾ ಇಲಾಖೆಗಳು ಜೊತೆ ಕೂಡಿ ಕೆಲಸ ಮಾಡಿದ್ದಲ್ಲಿ ಪ್ರಕರಣಗಳನ್ನ ತಡೆಗಟ್ಟಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ. ಈ ರೀತಿಯಾದ ಕಳೆದ ಹೋದ ಮಕ್ಕಳ ವಿವಾಹವಾಗುವ ಸಾಧ್ಯತೆ ಹೆಚ್ಚಿದೆ ಜನರಿಗೆ ಜನಪ್ರತಿನಿಧಿಗಳ ಮುಖಾಂತರವೇ ಮಾಹಿತಿ ಹೋಗುತ್ತೆ. ಸಮಾಜದಲ್ಲಿ ಬದಲಾವಣೆ ತರುವಂತಹ ಕೆಲಸ ಮಾಡಬೇಕು. ಬಾಲ್ಯ ವಿವಾಹ ತಡೆಗಟ್ಟುವಂತಹ ಕೆಲಸ ಜಾಸ್ತಿಯಾಗಬೇಕು ಈ ಒಂದು ವೇದಿಕೆಯಲ್ಲಿ ಎಲ್ಲಾ ಅಧಿಕಾರಿಗಳಿದ್ದಾರೆ ನಾವೆಲ್ಲೆರೂ ಒಂದು ಟೀಮ್ ತರಹ ಕೆಲಸ ನಿರ್ವಹಿಸಬೇಕುಎಂದರು.
ಈ ಒಂದು ಕಾರ್ಯಕ್ರಮದಲ್ಲಿ ಯುನಿಸೆಫ್,ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕರು ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳ,ಯುನಿಸೆಫ್, ಮಕ್ಕಳ ಸಂರಕ್ಷಣಾ ಯೋಜನೆ ಕಾರ್ಯಕ್ರಮ ವ್ಯವಸ್ಥಾಪಕರು ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಉಪ ನಿರ್ದೇಶಕರು ನವೀನ ಕುಮಾರ ಯು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ ಮಂಜುಳಾ.ವಿ.ಪಾಟೀಲ್,ಶ್ರೀ ಶರಣಬಸವೇಶ್ವರ ಮಹಾ ಸಂಸ್ಥಾನ ಕಲಬುರಗಿ .ಶರಣಬಸವ ವಿದ್ಯಾವರ್ಧಕ ಸಂಘದ ಪ್ರಾಂಶುಪಾಲರಾದ ಶಂಕರ ಗೌಡ ಹೊಸಮನಿ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.