ಮಕ್ಕಳು ಫಾಸ್ಟ್ ಫುಡ್ ಸೇವಿಸದೇ ತರಕಾರಿ ಹಣ್ಣು ಹಂಪಲುಗಳನ್ನು ಸೇವಿಸಬೇಕು : ಸುರೇಶ ಚಿಕ್ಕಟ್ಟಿ
ಅಥಣಿ: ಜು.16:ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ನಮ್ಮ ಶಾರೀರಿಕ ಸದೃಢತೆಗಾಗಿ ಸಮತೋಲನ ಆಹಾರ ಸೇವಿಸುವುದು ಅತಿ ಅವಶ್ಯಕವಾಗಿದೆ ಎಂದು ಶಿಕ್ಷಣ ತಜ್ಞ ಸುರೇಶ ಚಿಕ್ಕಟ್ಟಿ ಹೇಳಿದರು.
ಅವರು ಅಥಣಿ ಪಟ್ಟಣದ ಪ್ರತಿಷ್ಠಿತ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರ ಸಂತೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಕೃಷಿ ಪದ್ಧತಿಯಲ್ಲಿ ಅತಿಯಾದ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ನಾವು ಸೇವಿಸುವ ಆಹಾರಗಳು ಕೂಡ ವಿಷಪೂರಿತವಾಗುತ್ತಿವೆ. ಸಾವಯುವ ಕೃಷಿಯಿಂದ ಪರಿಶುದ್ಧವಾದ ತರಕಾರಿ ಮತ್ತು ಆಹಾರ ಧಾನ್ಯಗಳನ್ನ ಬೆಳೆಯುವದು ಇಂದಿನ ಅಗತ್ಯವಾಗಿದೆ. ಇದಲ್ಲದೆ ಇಂದಿನ ಮಕ್ಕಳು ಬೇಕರಿ ಪದಾರ್ಥಗಳನ್ನು ಮತ್ತು ಫಾಸ್ಟ್ ಫುಡ್ ಗಳನ್ನ ಸೇವಿಸದೇ ಎಲ್ಲ ತರಹದ ತರಕಾರಿಗಳನ್ನು, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗುವ ಎಲ್ಲಾ ಪೆÇೀಷಕಾಂಶಗಳನ್ನು ಪಡೆಯಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ತಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಪ್ರತಿನಿತ್ಯ ಸಮತೋಲನ ಆಹಾರವನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ ಮಾತನಾಡಿ ಶಾಲಾ ಮಕ್ಕಳಿಗೆ ಮಾರುಕಟ್ಟೆಯ ಜ್ಞಾನವನ್ನು ಕಲಿಸುವುದರ ಜೊತೆಗೆ ಪೆÇೀಷಕಾಂಶವುಳ್ಳ ಆಹಾರಗಳನ್ನು ಸೇವಿಸುವುದರಿಂದ ಸದೃಢವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ ಎಂಬುದನ್ನು ಜಾಗೃತಿ ಮೂಡಿಸಲು ಚಿಣ್ಣರ ಸಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ತರಕಾರಿ ಮಾರಿ ಖುಷಿ ಪಟ್ಟ ಮಕ್ಕಳು..!
ಅಥಣಿ ಪಟ್ಟಣದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಮುಂಜಾನೆ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಶಾಲೆಯ ಮಕ್ಕಳು ವಿವಿಧ ಬಗೆಯ ತರಕಾರಿ ಮತ್ತು ಹಣ್ಣುಗಳನ್ನು ತಂದು ಶಾಲೆಯಲ್ಲಿ ಚಿಣ್ಣರ ಸಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾವು ತಂದು ತರಕಾರಿಗಳನ್ನು ಮಾರಾಟ ಮಾಡಿದರು. ಶಾಲೆಯ ಶಿಕ್ಷಕ ಶಿಕ್ಷಕಿಯರು, ಪಾಲಕರು ಮತ್ತು ನೆರೆ ಹೊರೆಯ ನಿವಾಸಿಗಳು ಕೈಯಲ್ಲಿ ಕೈಚೀಲು ಹಿಡಿದುಕೊಂಡು ಮಕ್ಕಳು ತಂದಿದ್ದ ತರಕಾರಿಯನ್ನು ಖರೀದಿಸಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ತಾವು ತಂದಿದ್ದ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಿದ ಶಾಲಾ ಮಕ್ಕಳು ಕೂಡ ಖುಷಿಪಟ್ಟರು.