ಕೋಡ್ಲಿ ವಸತಿ ಶಾಲೆಯಲ್ಲಿ ಪಾಲಕರ ಸಭೆಶಾಲಾ ಅಭಿವೃದ್ದಿಗೆ ಪೋಷಕರ ಸಹಕಾರ ಅಗತ್ಯ : ಪ್ರಾಂಶುಪಾಲ ಡಾ.ಮಾಂಗ್
ಕಾಳಗಿ,ಜು.16-ಯಾವದೇ ಒಂದು ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಶಾಲಾ ಆಡಳಿತದ ಜೊತೆಗೆ ಪೆÇೀಷಕರ ಸಹಕಾರ ಕೂಡ ಮುಖ್ಯವೆಂದು ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್ ಹೇಳಿದರು.
ತಾಲ್ಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ನಡೆದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ಗ್ರಾಮೀಣ ಭಾಗದ ಬಡ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ.ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ನೀಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಶಿಸ್ತು, ಸ್ವಚ್ಚತೆ,ಸುರಕ್ಷತೆ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ ಯಲ್ಲಿ ನಿರಂತರವಾಗಿ ಉತ್ತಮ ಫಲಿತಾಂಶ ದಾಖಲಿಸಲಾಗುತ್ತಿದೆ ಎಂದ ಅವರು ಪೆÇೀಷಕರು ಕೂಡ ಮಕ್ಕಳ ಪ್ರಗತಿಯ ಬಗ್ಗೆ ಆಗಾಗ ಭೇಟಿ ಮಾಡಿ ಚರ್ಚಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಲಕ ಪ್ರತಿನಿಧಿ ನಾಗೇಂದ್ರ ಪೂಜಾರಿ ಮಕ್ಕಳನ್ನು ವಸತಿ ಶಾಲೆಯಲ್ಲಿ ಬಿಟ್ಟು ಹೋದರೆ ಸಾಲದು ಅವರ ಕಲಿಕೆಯ ಬಗ್ಗೆ ಮೇಲಿಂದ ಮೇಲೆ ಶಿಕ್ಷಕರ ಜೊತೆಗೆ ಚರ್ಚಿಸಬೇಕು ಎಂದ ಅವರು ಶಾಲೆಯಲ್ಲಿ ಉತ್ತಮವಾದ ಊಟೋಪಚಾರ ,ಶಿಕ್ಷಣ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪೆÇೀಷಕರಾದ ಈಶ್ವರಮ್ಮ ಬಾಳಿ,ನರೇಂದ್ರ ಶಿಕ್ಷಕರಾದ ಶಿವಾನಂದ ಬೀಳಗಿ,ತುಕಾರಾಮ,ಮಹಾನಂದ,ರೇಖಾ, ಸಾಲೇಹ ಫರೀನ್, ವಾರ್ಡನ್ ಶಿವಕುಮಾರ ಹಿರೇಮಠ,ಬಸವರಾಜ, ಭಾಗ್ಯ ಜ್ಯೋತಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು
ಶಿಕ್ಷಕ ನಾಗಶೆಟ್ಟಿ ನಿರೂಪಿಸಿದರು. ಮಹೇಶ ಜಿ. ಸ್ವಾಗತಿಸಿದರು .ಅಶೋಕ ಹಡಪದ ವಂದಿಸಿದರು.