ಏಳನೇ ವೇತನ ಜಾರಿಗೆ ಸಿಂಪಿ ಸಂತಸ
ಕಲಬುರಗಿ,ಜು.16-ರಾಜ್ಯ ಸರ್ಕಾರ ಏಳನೇ ವೇತನ ಜಾರಿಮಾಡಿದ್ದಕ್ಕೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದಿನ ವೇತನಗಳ ಜಾರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೆ ಆದೇಶಿಸಿದಂತೆ ಸ್ಥಳಿಯ ಸಂಸ್ಥೆಗಳ ಸೇರಿಸದೆ ಪ್ರತ್ಯಕ ಆದೇಶ ಹೊರಡಿಸಿ ವರ್ಷಾನುಗಟ್ಟಲೆ ವಿಳಂಭಗೊಳಿಸಲಾಗುತಿತ್ತು. ಸಂಘವು ಈ ತಾರತಮ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಬೈರತಿ ಸುರೇಶ, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲರ ಗಮನಕ್ಕೆ ತಂದು ಹಿಂದಿನಂತಾಗದೆ 7ನೇ ವೇತನ ಜಾರಿಯಲ್ಲಿ ಸ್ಥಳಿಯ ಸಂಸ್ಥೆಗಳನ್ನು ಸೇರಿಸಬೇಕೆಂದು ಮನವಿ ಸಲ್ಲಿಸಿ ಮನವರಿಕೆ ಮಾಡಿತ್ತು. ಇದಕ್ಕೆ ಸ್ಪಂದಿಸಿದ್ದ ಸಚಿವರು ಅಗಷ್ಟ ತಿಂಗಳಿಂದ ಜಾರಿಗೆ ಬರಲಿರುವ 7ನೇ ವೇತನದ ಆದೇಶದಲ್ಲಿ ಸ್ಥಳಿಯ ಸಂಸ್ಥೆಗಳನ್ನು ಸೇರಿಸಿರುವುದರಿಂದ ರಾಜ್ಯದ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ನೌಕರರಿಗೆ ಅನುಕೂಲವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಸಚಿವರನ್ನು ಅವರು ಅಭಿನಂದಿಸಿದ್ದಾರೆ.