ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯಿಂದ ಬಸ್ ಓಡಿಸಲು ಮನವಿ
ಇಂಡಿ : ಜು.16: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿ ಕೊಳ್ಳಲು ವಿದ್ಯಾ ಅಭ್ಯಾಸಕ್ಕಾಗಿ ಪಟ್ಟಣಕ್ಕೆ ಹೋಗುವುದು ಅನಿವಾರ್ಯ ವಾಗಿದ್ದು ಸಮಯಕ್ಕೆ ಸರಿಯಾಗಿ ಬಸ್ ಗಳು ಬಾರದೆ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ದ ಮೇಲೆ ಮಾರಕ ವಾಗುವ ಸಾಧ್ಯತೆ ಇದೆ ಎಂದು ತಿಳಿದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯಿಂದ ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು,ತಾಲೂಕಿನ ಕೊನೆಯ ಹಳ್ಳಿ ತೆಗ್ಗ ಹಳ್ಳಿ ಗ್ರಾಮದಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ವರ್ಷ್ ಗಳಿಂದ ಬೆಳೆಗೆ 7ಘಂಟೆಗೆ ಓಡುತ್ತಿರುವ ಬಸ್ ಸ್ಥಗಿತ ಗೊಂಡಿತುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಅದೇ ಸಮಯಕ್ಕೆ ಅರ್ಜುನಗಿ ತೆಗ್ಗೆ ಹಳ್ಳಿ ಮಾರ್ಗವಾಗಿ ಬಸ್ ಓಡಿಸಲು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಓಡಿಸುವುದಾಗಿ ಘಟಕ ವ್ಯವಸ್ಥಾಪಕರು ಭರವಸೆ ಕೊಟ್ಟಿದ್ದಾರೆ.ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಓಡಿಸುವುದಿದ್ದರೆ ನಾದ್ ಕ್ರಾಸ್ ಬಳಿ ಬಸು ಗಳು ತಡೆದು ಧರಣಿ ಕೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿರುಪಾಕ್ಷಿ ಕಾಳೆ, ಬಾಬು ಕಾಂಬಳೆ, ರಮೇಶ ಎಂಟಮನ್, ಸಂಜು ಕಟ್ಟಿಮನಿ, ಹುಚಪ್ಪ ಕಾಳೆ ಸೇರಿದಂತೆ ಇನ್ನೂ ಹಲವಾರು ಜನ ಇದ್ದರು.