ಸ್ವಪಕ್ಷೀಯರಿಂದಲೇ ಮರಿಗೌಡರಿಗೆ ಘೇರಾವ್
ಸಂಜೆವಾಣಿ ನ್ಯೂಸ್
ಮೈಸೂರು:ಸೆ.28:– ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧÀ್ಯಕ್ಷ ಕೆ. ಮರಿಗೌಡ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ, ಸ್ಥಳದಿಂದ ವಾಪಾಸ್ ಕಳಿಸಿದ ಘಟನೆ ನಡೆಯಿತು.
ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿವ ಹಿನ್ನೆಲೆ, ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದ ಮುಡಾ ಅಧÀ್ಯಕ್ಷ ಕೆ.ಮರೀಗೌಡ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಸುತ್ತುವರಿದು, ಸಿದ್ದರಾಮಯ್ಯ ಅವರ ಇಂದಿನ ಸ್ಥಿತಿಗೆ ನೀನೆ ಕಾರಣ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಈ ವೇಳೆ ನೂರಕ್ಕೂ ಹೆಚ್ಚು ಮಂದಿ ಮರಿಗೌಡರನ್ನು ಸುತ್ತುವರಿದು ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಒಂದಿಬ್ಬರು ಮರಿಗೌಡರನ್ನು ಹಿಡಿದು ಎಳೆದಾಡಿದ ಪ್ರಸಂಗವೂ ನಡೆಯಿತು. ಕೊನೆಗೆ ಸಮಜಾಯಿಷಿ ನೀಡಲು ಮುಂದಾದರೂ ಕೇಳದ ಕಾರ್ಯಕರ್ತರು ನಿನ್ನ ಬಾಷಣ ಬೇಡ ಹೊರಡು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಧÀ್ಯ ಪ್ರವೇಶಿಸಿದ ಪೆÇಲೀಸರು ಮರಿಗೌಡರನ್ನು ಕಾರು ಹತ್ತಿಸಿ ಸ್ಥಳದಿಂದ ವಾಪಾಸ್ ಕಳಿಸಿದರು.
ಕೆ.ಮರಿಗೌಡ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, 6 ತಿಂಗಳ ಹಿಂದೆಯಷ್ಟೇ ಮುಡಾ ಅಧÀ್ಯಕ್ಷರಾಗಿ ನೇಮಕವಾಗಿದ್ದರು. ಇವರು ಅಧÀ್ಯಕ್ಷರಾದ ಬಳಿಕ ಮುಡಾ ಹಗರಣ ಬೆಳಕಿಗೆ ಬಂದಿದ್ದಲ್ಲದೇ, ಹಲವು ದಾಖಲೆಗಳು ಸೋರಿಕೆಯಾಗಿದ್ದವು. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇದೇ ಮರಿಗೌಡ ಆಗಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧÀಮ್ಕಿ ಹಾಕಿದ್ದರು. ಇದರಿಂದ ಸಿಎಂ ಮುಜುಗರ ಅನುಭÀವಿಸುವಂತಾಗಿತ್ತು. ಈಗ ಮುಡಾ ಹಗರಣ ಸಂಬಂಧÀ ಸಿಎಂ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಪ್ಲೇ ಕಾರ್ಡ್ ಪ್ರದರ್ಶನ: ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದ ಹಿನ್ನೆಲೆ ಪಕ್ಷದ ಕಾರ್ಯಕರ್ತರು ನಿಮ್ಮೊಂದಿಗೆ ನಾವಿz್ದÉೀವೆ ಎಂಬ ಪ್ಲೇ ಕಾರ್ಡ್ ಪ್ರದರ್ಶಿಸುವ ಮೂಲಕ ನೈತಿಕ ಬೆಂಬಲ ನೀಡಿದರು. ವಿವಿಧÀ ಕಾರ್ಯಕ್ರಮ ನಿಮಿತ್ತ 3 ದಿನಗಳ ಕಾಲ ಮೈಸೂರು ಪ್ರವಾಸ ಹಮ್ಮಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಿಮ್ಮೊಂದಿಗೆ ನಾವಿz್ದÉೀವೆ, ನಾವು ನಿಮ್ಮೊಂದಿಗೆ ಎಂಬ ಪ್ಲೇ ಕಾರ್ಡ್ ಪ್ರದರ್ಶಿಸಿದರು.
ವಿಮಾನ ನಿಲ್ದಾಣ ಸೇರಿದಂತೆ ಸಿಎಂ ಸಂಚರಿಸುವ ಮಾರ್ಗದ ಹಲವೆಡೆ ಪಕ್ಷದ ನೂರಾರು ಕಾರ್ಯಕರ್ತರು ಈ ತೀತಿಯ ಪ್ಲೇ ಕಾರ್ಡ್ ಪ್ರದರ್ಶಿಸುವ ಮೂಲಕ ನೈತಿಕ ಬೆಂಬಲ ನೀಡಿದರು.