ಅ.ಭಾ.ಲಿಂ.ಪ ಸಮಾಜ ಟ್ರಸ್ಟ್ ಸಭೆ
ಹುಬ್ಬಳ್ಳಿ, ಸೆ 28: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಆಶ್ರಯದಲ್ಲಿ ಪಂಚಮಸಾಲಿ ಸಮಾಜದ ಗಣ್ಯರು ಹಾಗೂ ಪ್ರಮುಖರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಮಾಜದ ಉದ್ಯಮಿಗಳು ಹಾಗೂ ಹಿರಿಯ ಮುಖಂಡರುಗಳು ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಸಂಘಟನೆಯನ್ನು ಪ್ರಬಲವಾಗಿ ಬಲಪಡಿಸುವುದು ಸೇರಿದಂತೆ ಇತ್ತೀಚೆಗೆ ಸಹಕಾರಿ ರಂಗದ ವಿವಿಧ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ನಮ್ಮ ಸಮಾಜದ ಮುಖಂಡರುಗಳಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ವಾರ ಪ್ರತಿಭಾ ಪುರಸ್ಕಾರ ಆಯೋಜನೆ ಹಾಗೂ ಮುಂಬರುವ ನವೆಂಬರ್‍ನಲ್ಲಿ ರಾಜ್ಯಮಟ್ಟದ ಚೆನ್ನಮ್ಮನ ಜಯಂತಿಯನ್ನು ಈ ಬಾರಿ ಹುಬ್ಬಳ್ಳಿಯಲ್ಲಿ ಆಯೋಜಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ನಂದಕುಮಾರ್ ಪಾಟೀಲ್, ರಮೇಶ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಡಾ. ಬೆಳಗಲಿ, ಡಾ. ಮಹೇಶ ಹೊರಕೇರಿ, ಪ್ರಶಾಂತ ಹಾವಣಗಿ, ಲಿಂಗರಾಜ ಕಂಬಳಿ, ಜಿ.ಜಿ. ದ್ಯಾವನಗೌಡರ, ಗಿರೀಶ ಸುಂಕದ, ಕುಮಾರ ಕುಂದನಹಳ್ಳಿ, ಸಿ.ವಿ. ಹೊಂಬಳ, ಬಾಪೂಗೌಡ ಶಾಬಳದ, ರವಿರಾಜ ಕೊಡ್ಲಿ, ಉಳವಪ್ಪನ್ನ ಬೆಳಗೇರಿ, ಪಾಯಣನವರ, ರಾಜು ಕಪ್ಲಿ, ಸಂತೋಷ ಕಮತರ್, ಸಮಾಜ ಬಾಂಧವರು ಪಾಲ್ಗೊಂಡಿದ್ದರು.