ಹಂದಿ ಕಾಟಕ್ಕೆ ಹೈರಾಣದ ಸಾರ್ವಜನಿಕರು
ಸಂಜೆವಾಣಿ ವಾರ್ತೆ
ನಂಜಗೂಡು: ಸೆ.28:- ಪಟ್ಟಣದಲ್ಲಿ ಭಾರಿ ಗಾತ್ರದ ಹಂದಿಗಳು ಓಡಾಟ ಬೆಚ್ಚಗಿದ್ದ ಮಕ್ಕಳು ನಂಜನಗೂಡು ಪಟ್ಟಣದಲ್ಲಿ ಇತ್ತೀಚೆಗೆ ಬಾರಿ ಗಾತ್ರದ ಹಂದಿಗಳು ವಿಪರೀತವಾಗಿ ಓಡಾಡುತ್ತಿದ್ದು ಮಕ್ಕಳು ವೃದ್ಧರು ಮಹಿಳೆಯರು ರಸ್ತೆಯಲ್ಲಿ ಓಡಾಡುವುದಕ್ಕೆ ಎದುರುತ್ತಿದ್ದಾರೆ ಇಷ್ಟಾದರೂ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಗೊತ್ತಿದ್ದರೂ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಇದರಿಂದ ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನು ಕಂಡು ಇಡೀ ಶಾಪ ಹಾಕುತ್ತಿದ್ದಾರೆ
ಸರ್ಕಾರದ ಆದೇಶದಂತೆ ಹಂದಿಗಳನ್ನು ಊರಿನ ಹೊರಗಡೆ ಸಾಕಬೇಕು ಎಂಬ ಆದೇಶವಿದ್ದರೂ ಕೂಡ ಕಾನೂನಿಗೆ ಹೆದರದ ಇನ್ನು ಕೂಡ ಬೀದಿಗಳಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ ಬೆಳಗಿನ ಜಾವನೆ ಹಂದಿಗಳನ್ನು ಬಿಡುತ್ತಾರೆ ಹಂದಿಗಳು ರಸ್ತೆಯಲ್ಲಿ ಓಡಾಡುತ್ತಿರುವ ಸಣ್ಣ ಸಣ್ಣ ಮಕ್ಕಳಿಗೆ ಏನಾದರೂ ತೊಂದರೆ ಉಂಟು ಮಾಡಿದರೆ ಗತಿ ಏನು ಎಂಬುದೇ ಕುಟುಂಬಸ್ಥರು ಕೆಲವು ತಿಂಗಳ ಹಿಂದೆ ಹಂದಿಗಳಿಂದ ಮಕ್ಕಳಿಗೆ ತೊಂದರೆ ಉಂಟಾಗಿದೆ.
ಆ ಸಮಯದಲ್ಲಿ ಅವರಿಗೆ ಎಚ್ಚರಿಕೆ ನೀಡಿದ್ದರು ನಗರ ಸಭೆ ವತಿಯಿಂದ ಆದರೆ ಅದು ಕೇವಲ ಎರಡು ದಿನಕ್ಕೆ ಸೀಮಿತವಾಗಿ ಮತ್ತೆ ಎಂದಿನಂತೆ ಬೀದಿಯಲ್ಲಿ ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಹಂದಿಗಳ ಕಾಟ ತಡೆಯಲಾಗದೆ ನಗರಸಭೆ ಅಧಿಕಾರಿ ಗಳಿಗೆ ಇಡೀ ಶಾಪಾಗುತ್ತಿದ್ದಾರೆ ಸಾರ್ವಜನಿಕರು ಇದರ ಜೊತೆಗೆ ಬೀಡಾಡಿ ದನಗಳು ಮತ್ತು ಕೋತಿಗಳ ಕಾಟ ವಿಪರೀತ ರಸ್ತೆಯಲ್ಲಿ ಬಿಡಾಡಿ ದನಗಳು ಓಡಾಡಿ ವಾಹನಗಳ ಚಾಲಕರಿಗೆ ತೊಂದರೆ ಉಂಟಾಗಿದೆ ಕೋತಿಗಳು ಕೂಡ ಮನೆಗಳ ಮೇಲೆ ಕುಣಿದು ಕುಪ್ಪಳಿಸಿ ಹಂಚುಗಳನ್ನು ಸೀಟುಗಳನ್ನು ಒಡೆದು ಹಾಕಿ ನೀರಿನ ನಲ್ಲಿಗಳನ್ನು ಮುರಿದು ಹಾಕುತ್ತಿವೆ.
ಒಟ್ಟಾರೆ ನಂಜನಗೂಡು ಪಟ್ಟಣ ದಲ್ಲಿ ಹಂದಿಗಳು ದೀದಾಡಿ ದನಗಳು ಕೋತಿಗಳ ಅವಳಿ ಮಿತಿಮೀರಿದೆ ಇದಕ್ಕೆ ನಗರಸಭೆಯಿಂದ ಕಡಿವಾಣ ಎಂದು ಎಂಬುದು ಪ್ರಶ್ನೆಯಾಗಿದೆ ಮುಂದಾದರೂ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ದಂಡ ಹಾಕಿಸಬೇಕು ಇವುಗಳನ್ನು ಊರಿನ ಹೊರಗಡೆ ಬಿಡಲು ನಗರಸಭೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರೆ ಇಲ್ಲದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡಲು ಎಚ್ಚರಿಕೆ ನೀಡಿದ್ದಾರೆ