ಕುಂಬಾರ ನಿಗಮದ ಕಾರ್ಯಾರಂಭಕ್ಕೆ ಆಗ್ರಹ
ಆಳಂದ:ಜು.16: ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾದ ಕುಂಬಾರ ಅಭಿವೃದ್ಧಿ ನಿಗಮ ನೆನಗುದ್ದಿ ಹಾಕದೇ ಕೂಡಲೇ ರಾಜ್ಯ ಸರ್ಕಾರವು ನಿಗಮದ ಅಧ್ಯಕ್ಷರನ್ನು ನೇಮಿಸಿಕೊಂಡು 100 ಕೋಟಿ ಅನುದಾನ ಮೀಸಲಿಡುವ ಮೂಲಕ ತುರ್ತಾಗಿ ನಿಗಮದ ಕಾರ್ಯಾರಂಭವನ್ನು ಕೈಗೊಂಡು ಬಡ ಕುಂಬಾರ ಬಾಂಧವರನ್ನು ಅನುಕೂಲ ಒದಗಿಸಬೇಕು ಎಂದು ಸಮಾಜದ ತಾಲೂಕು ಅಧ್ಯಕ್ಷ ಶರಣಬಸಪ್ಪ ಟಿ. ಕುಂಬಾರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ಶಿಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಕುಂಬಾರ ಸಮಾಜಕ್ಕೆ ಸರ್ಕಾರ ಕೇವಲ ನಿಗಮ ಸ್ಥಾಪಿಸಿ ಕಣ್ಣೊರಿಸುವ ಕೆಲಸ ಮಾಡದೇ ನಿಗಮಕ್ಕೆ ಶ್ರೀಘವೇ ಅಧ್ಯಕ್ಷರ ಮತ್ತು ಸದಸ್ಯರನ್ನು ನೇಮಕ ಮಾಡಿ, ಕನಿಷ್ಠ 100 ಕೋಟಿ ರೂಪಾಯಿ ಅನುದಾನ ಒದಗಿಸಿ ಸಮಾಜದ ಬಾಂಧವರ ಉದ್ಯೋಗಿಗಳಿಗೆ ಅನುಕೂಲ, ಶಿಕ್ಷಣಿಕ ಉದ್ದೇಶಕ್ಕೆ ಬಳಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕುಂಬಾರರ ಸಮುದಾಯ ಸಂಖ್ಯೆ ಹೆಚ್ಚಿದ್ದರು ಸಹ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಸೌಲಭ್ಯಗಳ ದೊರೆಯದೇ ಹಿಂದುಳಿಯಲು ಕಾರಣವಾಗಿದೆ. ಕೂಡಲೇ ವಿಧಾನಮಂಡಲ ಅಧೀವೇಶನದಲ್ಲಿ ಅಧ್ಯಕ್ಷರ ನೇಮಕ ಹಾಗೂ ಅನುದಾನ ಬಿಡುಗಡೆ ಕುರಿತು ಪ್ರಸ್ತಾಪಿಸಿ ಅನುಮೋದನೆ ನೀಡುವಂತಾಗಲು ರಾಜ್ಯದ ಶಾಸಕರು ಸಚಿವರುಗಳು ಸಮಾಜಕ್ಕೆ ಬೆಂಬಲಿಸಿ ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿದ್ಯಾಧರ ಡಿ. ಕುಂಬಾರ, ಹಿರಿಯ ಜಯಪ್ರಕಾಶ ಕುಂಬಾರ, ದತ್ತಾ ಕುಂಬಾರ ಚಿತಲಿ, ದಿಲೀಪ ಕುಂಬಾರ, ಗ್ರಾಪಂ ಸದಸ್ಯ ಶರಣು ಸಾಲೇಗಾಂವ, ಶಿವಾನಂದ ವಿ. ಕುಂಬಾರ, ರೇವಣಸಿದ್ಧ ಜೆ. ಕುಂಬಾರ, ಅಂಬ್ರೇಶ ಕುಂಬಾರ, ವಿಜಯಕುಮಾರ ಕುಂಬಾರ, ಸಂತೋಷ ಬಿ. ಕುಂಬಾರ ಹಳ್ಳಿಸಲಗರ ಮೊದಲಾದವರು ಉಪಸ್ಥಿತರಿದ್ದರು.