ಶೌಚಾಲಯ ನಿರ್ಮಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕಾಶ ಡೋಣೂರಮಠ
ದೇವರ ಹಿಪ್ಪರಗಿ :ಜು.16: ಸಾಮಾನ್ಯವಾಗಿ ಎಲ್ಲರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಮನೆಯಲ್ಲಿ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಿಹಿ ಹಂಚುವ ಮೂಲಕ ಹಾಗೂ ದೊಡ್ಡ ದೊಡ್ಡ ಹೋಟೆಲಗಳಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರೆ ಇನ್ನು ಕೆಲವರು ಸರಾಯಿ ಮೋಜ ಮಸ್ತಿ ಅಂತ ಆಚರಿಸಿ ಕೊಳ್ಳುತ್ತಾರೆ.ಆದರೆ ಇಲ್ಲೊಬ್ಬ ಯುವಕ ಶೌಚಾಲಯ ನಿರ್ಮಾಣ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹೌದು ಇದು ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಸೋಮವಾರ ಬಸ್ ನಿಲ್ದಾಣದ ಪಕ್ಕದಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಪ್ರಕಾಶ ಡೋಣೂರಮಠ ರವರು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.
ಗ್ರಾಮೀಣ ಜನರ ಜೀವನ, ಆರೋಗ್ಯ ಕಾಪಾಡುವ ಉದ್ದೇಶದಿಂದ ಹಳ್ಳಿಯ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಯಲು ಶೌಚಾಲಯ, ಕೊಳಕು, ಗಲೀಜು ವಾಸನೆಯಂತಹ ಅನೈರ್ಮಲ್ಯ ಗ್ರಾಮದಲ್ಲಿ ರಾರಾಜಿಸಬಾರದು. ಗ್ರಾಮದಲ್ಲಿ ಸ್ವಚ್ಛತೆ ಇರಬೇಕು ಅನಾರೋಗ್ಯ ಮುಕ್ತ ಗ್ರಾಮವನ್ನಾಗಿಸುವ ಕನಸು ನನಸುಮಾಡಲು ಹೊರಟಿರುವ ಯುವ ಮುಖಂಡ ಪ್ರಕಾಶ ಡೋಣೂರಮಠ ರವರು ಬಸ್ ನಿಲ್ದಾಣದ ಪಕ್ಕದಲ್ಲಿ ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಾಣ ಮಾಡಿ ವಿನುತನ ರೀತಿಯಲ್ಲಿ ಹುಟು ಹಬ್ಬ ಆಚರಿಸುತ್ತಿರುವುದು ಮಾದರಿಯಾಗಿದೆ.
ಗ್ರಾಮೀಣ ಭಾಗದ ಮಹಿಳೆಯರ ಕಲ್ಯಾಣಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಮಹಿಳಾ ಶೌಚಾಲಯ ನಿರ್ಮಿಸಿ ಉದ್ಘಾಟನೆ ಮಾಡಿ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡ ಪ್ರಕಾಶ ಡೋಣೂರಮಠ ಇಂತಹ ಯುವಕರು ಸಾಮಾಜಿಕ ಕಳಕಳಿಯ ನಡೆಗೆ ಸಮಾಜ ಮುಖಿಯ ಕಾರ್ಯಕ್ರಮಗಳಿಗೆ ಇನ್ನಷ್ಟು ಬಲ ತುಂಬಿದಂತಾಗಿದೆ.ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರು ವಿಜಯಪುರ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಭುಗೌಡ ಲಿಂಗದಳ್ಳಿ ರವರು ಈ ಹುಟ್ಟು ಹಬ್ಬದಲ್ಲಿ ಬಾಗಿಯಾಗಿ ಶುಭಹಾರಿಸಿದ್ದಾರೆ.
ಈ ಸಂದರ್ಭದಲ್ಲಿ ಜಂಗಮ ಸಮಾಜದ ತಾಲೂಕ್ ಅಧ್ಯಕ್ಷರಾದ ಸೋಮು ಹಿರೇಮಠ,ಬಾಬು ಅವಟಿ, ಬಿರು ದೇವೂರು, ಅವಿನಾಶ ಡೋಣೂರಮಠ, ಚೇತನ್ ಸಾಸಟ್ಟಿ, ಶರಣು ಬಡಗೇರ,ಸಿದ್ದು ಮಾಗಿ, ರಾಜು ಮಾವಿನಗಿಡದ, ಆನಂದ ಹಾದಿಮನಿ,ಗ್ರಾಮಸ್ಥರು ಇದ್ದರು.