ಹಲ ವರ್ಷಗಳಿಂದ ವಿದ್ಯುತ ಇಲ್ಲದ ಕುಟುಂಬದವರಿಗೆ ವಿದ್ಯುತ ಸಂಪರ್ಕ ಕಲ್ಪಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ
ಬೀದರ್:ಜು.16: ದಕ್ಷಿಣ ಕ್ಷೇತ್ರದಲ್ಲಿ ಪ್ರತಿಯೊಂದು ಸಾರ್ವಜನಿಕ ಕುಟುಂಬದವರಿಗೆ ವಿಧ್ಯುತ, ನೀರು, ಇನ್ನೀತರ ಮೂಲ ಸೌಕರ್ಯ ಒದಗಿಸುವುದು ನನ್ನ ಆಧ್ಯ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಶ್ರಮಿಸುತ್ತಿರುವೆ ಇದಕ್ಕೆ ಅಧಿಕಾರಿಗಳು ಸಹ ಸಹಕಾರ ನೀಡುತ್ತಿದ್ದಾರೆ ಮುಂದೆಯೂ ಸಹಕಾರದ ಅಗತ್ಯವಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಔರಾದ್ ಎಸ್ ಗ್ರಾಮದ ಹೊರವಲಯದಲ್ಲಿರುವ ಒಂದು ಓಣಿಯಲ್ಲಿ ನೂತನವಾಗಿ ಸ್ಥಾಪಿಸಿರುವ ವಿದ್ಯುತ್ ಪರಿವರ್ತಕ ಘಟಕಕ್ಕೆ (ಟಿಸಿ) ಚಾಲನೆ ನೀಡಿ ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಔರಾದ್ ಎಸ್ ಗ್ರಾಮದಲ್ಲಿರುವ ಒಂದು ಓಣಿಯಲ್ಲಿ ಸುಮಾರು 8 ವರ್ಷ ದಿಂದ ವಿಧ್ಯುತ ಸಂಪರ್ಕ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿರುವ ದೂರು ನೀಡಿದ್ದ ಹಿನ್ನೆಲೆಯಲ್ಲಿ ಜೆಸ್ಕಾಂ ಮೇಲಧಿಕಾರಿಗಳ ಗಮನಕ್ಕೆ ತಂದು ಜೆಸ್ಕಾಂ ವತಿಯಿಂದ ಅಲ್ಲಿನ ಮನೆಗಳಿಗಾಗಿ ವಿಧ್ಯುತ ಪರಿವರ್ತಕ ಘಟಕ ಸ್ಥಾಪಿಸಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ವಿಧ್ಯುತ ಸಂಪರ್ಕ ಚಾಲನೆ ನೀಡಲಾಗಿದೆ ಎಂದು ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಅವರು ತಿಳಿಸಿದರು.
ರೈತರಿಗೆ ಜಮೀನಿನಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಜನರಿಗೆ ಮನೆಗಳಲ್ಲಿ ವಿಧ್ಯುತ ಸಂಪರ್ಕದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಇದಕ್ಕೆ ಜೆಸ್ಕಾಂ ಅಧಿಕಾರಿಗಳು ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ
ಇದರಿಂದ ಕ್ಷೇತ್ರದ ರೈತರ ಐಪಿ ಸೆಟ್ಟುಗಳಿಗೆ ಸರಬರಾಜು ಆಗುವ ವಿದ್ಯುತ್ ಸುಧಾರಣಾಯಾಗಿದೆ. ಸ್ಥಳದಲ್ಲೇ ಸುಟ್ಟ ಟಿಸಿಗಳನ್ನು ದುರಸ್ತಿ ಪಡಿಸುವುದರಿಂದ ರೈತರ ಬೇಡಿಕೆಯಷ್ಟು ಟಿಸಿಗಳು ಸಮಯಕ್ಕೆ ಸರಿಯಾಗಿ ದೊರೆಯುವ ಮೂಲಕ ಜನರು ಸಹ ಸಂತೋಷ ವ್ಯಕ್ತಪಡಿಸುತಿದ್ದಾರೆ.
ಈ ಸಂದರ್ಭದಲ್ಲಿ ಜೆಸ್ಕಾಂ ಇಇ ರಮೇಶ ಪಾಟೀಲ್, ಎಇಇ ವಿಜಯಕುಮಾರ ಪಾಂಚಾಳ, ಎಸ್ ಒ ಪ್ರದೀಪ, ಗುತ್ತಿಗೆದಾರರಾದ ರಾಜಕುಮಾರ ಪಾಟೀಲ. ಗ್ರಾಮದ ಗ್ರಾಪಂ ಅಧ್ಯಕ್ಷ ಜಗನ್ನಾಥ ರೆಡ್ಡಿ, ಮುಖಂಡರಾದ ರಾಜರೆಡ್ಡಿ ಶಾಬಾದ, ನರಸಿಂಹರೆಡ್ಡಿ ಗಂಗವ್ವಾರ, ಸೂರ್ಯಕಾಂತ ಸೇಡಂ, ನಾಗಶೆಟ್ಟಿ ಚಟ್ಟನಳ್ಳಿ, ವೆಂಕಟರೆಡ್ಡಿ ಪೆÇೀಗಲ್, ವೆಂಕಟರೆಡ್ಡಿ ಗಂಗ್ವಾರ, ವೀರಶೆಟ್ಟಿ ಸೇಡಂ, ರಾಜು ಜಾದವ್, ವೀರಶೆಟ್ಟಿ ಚಿಟ್ಟಗುಪ್ಪ, ಅಶೋಕ ಕೋಳಿ, ಗ್ರಾಮಪಂಚಾಯಿತಿ ಪಿಡಿಒ ಗ್ರಾಮಸ್ಥರು, ಜೆಸ್ಕಾಂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.