ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹೇಶ ಗೋರನಾಳಕರ್
ಬೀದರ:ಜು.16:ಎಸ್.ಸಿ.ಎಸ್.ಪಿ ಟಿ.ಎಸ್.ಪಿ (SCSP TSP) ಹಣ ಗ್ಯಾರಂಟಿ ಯೋಜನೆಗೆ ಬಳಸಲು ಮುಂದಾಗಿರುವ ಎಸ್.ಸಿ ಎಸ್ ಟಿ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಿನಾಮೆ ನೀಡಲು ಆರ್.ಪಿ.ಐ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಬೇಕು ಎಂದು ದಲಿತರು ಪ್ರಯತ್ನ ಮಾಡುವಾಗ ಸ್ವಯಂ ಘೋಷಿತ ದಲಿತರಾಗುವ ಸಿ.ಎಂ ಸಿದ್ದರಾಮಯ್ಯ ರವರು ಎಸ್.ಸಿ ಎಸ್.ಟಿ ಗಳಿಗೆ ಹಗಲು ವಂಚನೆ ಮಾಡುತ್ತಾರೆ ಎಂದು ಕರ್ನಾಟಕದ ಯಾರೊಬ್ಬರು ನಿರೀಕ್ಷೆ ಹೊಂದಿರಲಿಲ್ಲ ಎಸ್.ಸಿ. ಎಸ್.ಪಿ. ಟಿ.ಎಸ್.ಪಿ ಕಾನೂನು ತಂದಿದೆವೆ ಎಂದು ಹೇಳುವ ಇವರು ಸ್ವತಹ ಆ ಕಾನೂನಿಗೆ ಉಲ್ಲಂಘನೆ ಮಾಡಿದರೆ ಬೆಲಿಯೆ ಎದ್ದು ಹೊಲ ಮೈದಂತೆ ಆಗುವುದಿಲ್ಲವೆ?
ಎಸ್.ಸಿ.ಎಸ್.ಪಿ ಮತ್ತು ಟಿಎಸ್.ಪಿ ಕಾರ್ಯಕ್ರಮಗಳಿಗಾಗಿ ಈ ವರ್ಷ ಒಟ್ಟು 39,121.46 ಕೋಟಿ ರೂಪಾಯಿ ಮೀಸಲಿಟ್ಟು ಇದರಿಂದ 14,730.53 ಕೋಟಿ ರೂಪಾಯಿ
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ 5 ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ.ರಾಜ್ಯ ಅಭಿವೃದ್ಧಿ ಪರಿಷತ್ತು ಸಭೆಯಲ್ಲಿ ವರ್ಗಾಯಿಸಿಕೊಂಡು ಎಸ್.ಸಿ.ಎಸ್.ಟಿ ಸಮುದಾಯದ ಅಭಿವೃದ್ಧಿಗೆ ಹಿನ್ನಡೆ ಮೂಡಿಸುತ್ತಿರುವ ಸಿ.ಎಂ ಸಿದ್ದರಾಮಯ್ಯನವರು 14,730.53 ಕೋಟಿ ರೂಪಾಯಿ 5 ಗ್ಯಾರಂಟಿಗಳಿಗೆ ಉಪಯೋಗಿಸದೆ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಗೆ ಹಿಂದೂರಿಗಿಸಬೇಕೆಂದು ತಿಳಿಸಿದ ಮಹೇಶ ಗೋರನಾಳಕರ್ ಮುಂಬರುವ ಮಳೆಗಾಲ ಅಧಿವೇಶನದಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ಈ ಕೆಳಕಂಡ ಬೇಡಿಕೆಗಳು ಮಂಜುರು ಮಾಡಬೇಕೆಂದು ಆಗ್ರಹಿಸಿದ್ದಾರೆ
ಕರ್ನಾಟಕದಲ್ಲಿ ಸಂವಿಧಾನದ ಸಮಗ್ರ ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಪ್ರತಿ ಜಿಲ್ಲೆಗೊಂದು ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು, ಭೂಮಿ ಹೊಂದಿರದ ರಾಜ್ಯದ ಎಸ್.ಸಿ.ಎಸ್.ಟಿ ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿ ನೀಡಬೇಕು, ಪ್ರತಿ ಜಿಲ್ಲೆಗೊಂದು ಐ.ಎ.ಎಸ್. ಐ.ಪಿ.ಎಸ್. ತರಬೇತಿ ಕೇಂದ್ರ ಸ್ಥಾಪನೆ ಮಾಡಬೇಕು ಮತ್ತು ಜಿಲ್ಲೆಗೊಂದು ಸುಸಜ್ಜಿತ ಡಾ.ಅಂಬೇಡ್ಕರ್ ಭವನಕ್ಕೆ ,5 ಕೋಟಿ ರೂಪಾಯಿ ನೀಡಬೇಕು, ಪ್ರತಿ ಗ್ರಾಮದಲ್ಲಿ ಎಸ್.ಸಿ. ಎಸ್.ಟಿ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನಕ್ಕಾಗಿ ಎರಡೆರಡು ಎಕರೆ ಭೂಮಿ ಮಂಜೂರು ಮಾಡಬೇಕು ಮತ್ತು ಆ ಸ್ಥಳದಲ್ಲಿ ಚಿತಭಸ್ಮ ಶೇಡ್ ನಿರ್ಮಿಸಬೇಕು, ಪ್ರತಿ ಎಸ್.ಸಿ ಎಸ್.ಟಿ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ಹುದ್ದೆ ನೀಡಬೇಕು, ಮನೆ ಇಲ್ಲದ ಪ್ರತಿ ಕುಟುಂಬಗಳಿಗೆ ಮನೆ ಮಂಜೂರು ಮಾಡಬೇಕು, ಪ್ರತಿ ಜಿಲ್ಲೆಗೊಂದು ಕ್ರೀಡಾ ಶಾಲೆ ಸ್ಥಾಪನೆ ಮಾಡಬೇಕು, ಎಸ್.ಸಿ ಎಸ್.ಟಿ ಸಮುದಾಯದವರಿಗೆ ಉಚಿತ ಗುಣಮಟ್ಟದ ಶಿಕ್ಷಣ ಮತ್ತು ಉಚಿತ ಆರೋಗ್ಯ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಿ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯೋಗ ಪ್ರಾರಂಭಿಸಲು ಸಹಾಯಧನ ನೀಡಬೇಕು ಇಲ್ಲ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲದಿದ್ದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಈ ಯಾವುದೆ ಬೇಡಿಕೆಗಳು ಈಡೆರದೆ ಇದ್ದಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ