ಜು. 28 ರಂದು ಪತ್ರಿಕಾ ದಿನಾಚರಣೆ
ಬೀದರ: ಜು.16:ಜಿಲ್ಲಾ ಪತ್ರಕರ್ತರಿಂದ ಪತ್ರಿಕಾ ದಿನ ಆಚರಣೆ ಕುರಿತು ಪೂರ್ವ ಭಾವಿ ಸಭೆಯನ್ನು ಪತ್ರಿಕಾ ಭವನದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಪತ್ರಿಕಾ ದಿನಚಾರಣೆ ಸಮಿತಿ ರಚಿಸುವ ತೀರ್ಮಾನಕ್ಕೆ ಬಂದು ಸಮಿತಿಯ ಅಧ್ಯಕ್ಷರಾಗಿ ಬಾಬು ವಾಲಿ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ದೇವಪ್ಪ, ಕೋಶಾಧ್ಯಕ್ಷರಾಗಿ ಮಾಳಪ್ಪ ಅಡಸಾರೆ ಸಂಚಾಲಕರಾಗಿ ಮಲ್ಲಿಕಾರ್ಜುನ್ ಬಿರಾದರ, ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಎಲ್ಲಾ ಪತ್ರಿಕಾ ಸಂಘಗಳ ಅಧ್ಯಕ್ಷರು ಈ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ. ಜು. 28ರಂದು ಪತ್ರಿಕಾ ದಿನಚಾರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು.
ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಅವರ ನೇತೃತ್ವದಲ್ಲಿ ಸಭೆಯು ಜರುಗಿತು. ಈ ಸಂಧರ್ಭದಲ್ಲಿ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಖಾಜಿ ಅಲಿಯೋದ್ದಿನ್ (ಅಲಿಬಾಬಾ), ಅಶೋಕ ಕರಂಜಿ, ಅಪ್ಪರಾವ್ ಸೌದಿ, ಶಶಿಕುಮಾರ ಪಾಟೀಲ, ಶಶಿ ಕುಮಾರ, ಶ್ರೀನಿವಾಸ ಚೌಧರಿ, ಶಿವಕುಮಾರ ಸ್ವಾಮಿ, ಕಡ್ಯಾಳ ರಾಜು, ಅಜಯ, ಕಾಮಶೆಟ್ಟಿ ಬಸವರಾಜ, ಬಸವರಾಜ ಪವಾರ, ವಿಜಯಕುಮಾರ, ಸುನೀಲ ಕುಮಾರ ಹೊನ್ನಾಳೆ, ಮಾರುತಿ ಭಾವಿದೊಡ್ಡಿ, ಶ್ರೀಕಾಂತ ಚಿಮಕೋಡೆ, ಪ್ರದೀಪ ಬಿರಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.