ಮಕ್ಕಳಿಗೆ ಆಟ ಪಾಠದ ಜೊತೆಗೆ ವ್ಯಾಪಾರ ವಹಿವಾಟಿನ ಜ್ಞಾನ ಅವಶ್ಯಕ : ಅರುಣ ಮಾಳಿ
ಅಥಣಿ: ಜು.16:ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಆಟ ಪಾಠದ ಜೊತೆಗೆ ವ್ಯಾಪಾರ ವಹಿವಾಟಿನ ಬಗ್ಗೆಯು ಜ್ಞಾನ ಅವಶ್ಯಕವಾಗಿದೆ ಎಂದು ತುಳಜಾ ಶಂಕರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅರುಣ ಮಾಳಿ ಹೇಳಿದರು.
ಅವರು ಪಟ್ಟಣದ ಹೊರ ವಲಯದಲ್ಲಿರುವ ತುಳಜಾ ಶಂಕರ ಶಾಲೆಯ ಆವರಣದಲ್ಲಿ ಆಯೋಜಿಸಿದ ಮಕ್ಕಳ ಸಂತೆ ತರಕಾರಿ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ವ್ಯಾಪಾರ ವಹಿವಾಟದ ಬಗ್ಗೆ ಭೋದನೆ ನೀಡಿದರೆ. ಮುಂದೆ ಅವರವರ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಉಪಯೋಗವಾಗಬಹುದು ಎಂಬ ಉದ್ದೇಶದಿಂದ ಒಂದು ದಿನದ ತರಕಾರಿ ಮಾರುಕಟ್ಟೆ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳು ವಿವಿಧ ತರಹದ ತರಕಾರಿಗಳು, ಹೂವು, ಹಣ್ಣು, ವಿವಿಧ ಸಿಹಿ ತಿಂಡಿಯ ಪದಾರ್ಥಗಳು, ಮತ್ತು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳನ್ನು ವಿದ್ಯಾರ್ಥಿಗಳು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಶಿಕ್ಷಕರು ಹಾಗೂ ಪಾಲಕರು ಗ್ರಾಹಕರಾಗಿ ಬಂದು ವಿದ್ಯಾರ್ಥಿಗಳ ಕಡೆಯಿಂದ ತಮಗೆ ಬೇಕಾದ ವಸ್ತುಗಳನ್ನ, ತರಕಾರಿಯನ್ನು ಖರೀದಿಸಿ ತಮ್ಮ ಮನೆಗೆ ತೆಗೆದುಕೊಂಡು ಹೋಗುವುದು ಮಕ್ಕಳಲ್ಲಿ ವ್ಯಾಪಾರ ವ್ಯವಹಾರದ ಬಗ್ಗೆ ಮತ್ತಷ್ಟು ಪೆÇ್ರತ್ಸಾಹ ನೀಡಿದಂತಾಯಿತು.
ಒಟ್ಟಾರೆ ಶಾಲಾ ಆವರಣವು ಸಂತೆ ಮಾರುಕಟ್ಟೆ ಯಾಗಿ ಮಾರ್ಪಟ್ಟಿದ್ದು ವಿಶೇಷವಾಗಿತ್ತು. ಇದನ್ನು ವೀಕ್ಷಿಸಲು ಸಾರ್ವಜನಿಕರು ಹಾಗೂ ಪಾಲಕರು ಬಂದಿದ್ದರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾಲಿ ಮಾಳಿ, ಶಿಕ್ಷಕಿಯರಾದ ಸವಿತಾ ಶಿಂದೆ, ಕೀರ್ತಿ ಅಪರಾಜ, ಗೌರಿ ಮಾಳಿ, ರೂಪಾ ನಿಂಬರಗಿ, ಸುಜಾತಾ ಸಂಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.