ಮೌಲ್ಯಯುತ ಬದುಕು ರೂಪಿಸಿಕೊಳ್ಳಿ
ಬೀದರ್:ಜು.16:ಸಮಾಜದಲ್ಲಿಗೌರವಯುತ ಬದುಕು ನಡೆಸಬೇಕೆಂದರೆವಿದ್ಯಾರ್ಥಿಗಳು ಮೊದಲುತಮ್ಮಜ್ಞಾನಸಂಪತ್ತನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಮೌಲ್ಯಯುತ ಬದುಕುರೂಪಿಸಿಕೊಳ್ಳಬೇಕು’ ಎಂದುಕೇಂದ್ರ ಸರ್ಕಾರದ ಮಾಜಿ ಸಚಿವರಾದ ಭಗವಂತಖೂಬಾ ಅವರು ಸಲಹೆ ನೀಡಿದರು.
ನಗರದ ಮಾಮನಕೇರದಲ್ಲಿರುವಜ್ಞಾನಸುಧಾ ವಿದ್ಯಾಲಯದಜ್ಞಾನರಂಗ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಲಂಡನ್ ಸ್ಕೂಲ್‍ಆಫ್‍ಎಕನಾಮಿಕ್ಸ್‍ನಲ್ಲಿ ಪ್ರವೇಶಕ್ಕೆಅರ್ಹತೆ ಪಡೆದಜ್ಞಾನಸುಧಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿ ವಸುಂಧರಾ ಭಗವಂತ ಖೂಬಾ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
‘ವಿದ್ಯಾರ್ಥಿಜೀವನದಲ್ಲಿಉತ್ತಮರೀತಿಯಲ್ಲಿ ವ್ಯಾಸಂಗ ಮಾಡಿ ಬೌದ್ಧಿಕ ಮಟ್ಟ ವೃದ್ಧಿಸಿಕೊಳ್ಳುವುದು ಎಷ್ಟು ಮುಖ್ಯವೋ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವಕ್ಷೇತ್ರದಲ್ಲಿಉನ್ನತವಾದಗುರಿಯನ್ನುಇಟ್ಟುಕೊಂಡುಅದನ್ನು ಸಾಧಿಸಲುನಿರಂತರವಾಗಿ ಶ್ರಮಿಸಬೇಕು.ಆ ಗುರಿಯ ಮೂಲಕ ದೇಶಕ್ಕೆತಮ್ಮದೇಆದಅಮೂಲ್ಯವಾದಕೊಡುಗೆಯನ್ನು ನೀಡಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.
‘ಇಂದಿನ ಯುವಪೀಳಿಗೆಯಲ್ಲಿ ಸದ್ವಿಚಾರಗಳು ಅಡಗಿವೆ.ಆಂತಹ ವಿಚಾರಗಳಿಗೆ ತಿರಸ್ಕಾರ ಮಾಡದೆ ಪ್ರೋತ್ಸಾಹ ನೀಡಬೇಕಾಗಿದೆ.ಈ ಕಾರ್ಯ ಪರಿಣಾಮಕಾರಿಯಾಗಿನಡೆದಾಗ ಮಾತ್ರ ಪ್ರತಿಭಾವಂತಯುವಕರಿಗೆಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.ಪಾಲಕರು ಮನೆಯಲ್ಲಿತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮೊದಲ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದಡಾ. ಪೂರ್ಣಿಮಾ ಜಿ., ಅವರು ಮಾತನಾಡಿ, ‘ನಮ್ಮಜ್ಞಾನಸುಧಾ ವಿದ್ಯಾಲಯದಲ್ಲಿಎಲ್‍ಕೆಜಿ ಯಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿ ವಸುಂಧರಾ ಖೂಬಾ ಅವರುತಮ್ಮ ಮುಂದಿನ ವಿದ್ಯಾಭ್ಯಾಸವುಲಂಡನ್ ಸ್ಕೂಲ್‍ಆಫ್‍ಎಕನಾಮಿಕ್ಸ್‍ನಲ್ಲಿ ಮಾಡಲುಅರ್ಹತೆ ಪಡೆದಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ’ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
‘ವಸುಂಧರಾಅವರುಕ್ರಮನಿಷ್ಠೆಯಿಂದ ವ್ಯಾಸಂಗ ಮಾಡಿಅರ್ಥಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದುದೇಶದಆರ್ಥಿಕ ಏಳಿಗೆಗೆ ತಮ್ಮದೇಆದಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಲಿ’ ಎಂದು ಶುಭ ಹಾರೈಸಿದರು.
ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದಡಾ. ಮುನೇಶ್ವರ ಲಾಖಾ ಅವರು ಮಾತನಾಡಿ,’ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಬಹಷ್ಟಳು ಶ್ರಮಪಡುತ್ತಾರೆ.ಆ ಶ್ರಮ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮರೀತಿಯಲ್ಲಿ ವಿದ್ಯಾಭ್ಯಾಸವನ್ನುಮಾಡಿಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಸುಂಧರಾ ಖೂಬಾ ಅವರು,’ಪರಿಶ್ರಮವಿಲ್ಲದೆಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಜೀವನದಿಂದಲೇ ವೈಯಕ್ತಿಕಅಭ್ಯಾಸಕ್ಕೆ ಹೆಚ್ಚಿನಒತ್ತು ನೀಡಬೇಕು.ತರಗತಿಯಲ್ಲಿ ಶಿಕ್ಷಕರು ಬೋಧನೆ ಮಾಡುವ ವಿಷಯವನ್ನು ಸರಿಯಾಗಿ ಆಲಿಸಿಕೊಂಡು ನಂತರಆಸಕ್ತಿಯಿಂದಅಭ್ಯಾಸ ಮಾಡಬೇಕು’ ಎಂದು ತಿಳಿಸಿದರು.
‘ನಾನು ಜ್ಞಾನಸುಧಾ ವಿದ್ಯಾಲಯದಲ್ಲಿಒಟ್ಟು 12 ವರ್ಷ ವ್ಯಾಸಂಗ ಮಾಡಿದ್ದೇನೆ. ಈ ವಿದ್ಯಾಲಯದಲ್ಲಿಉತ್ತಮವಾದ ಶೈಕ್ಷಣಿಕ ವಾತಾವರಣವಿದೆ.ಇಲ್ಲಿ ನಡೆಯುವ ಪ್ರತಿಯೊಂದು ಶೈಕ್ಷಣಿಕಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡುಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದ ಅವರು ವಿದ್ಯಾಲಯದಲ್ಲಿತನ್ನ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಎಲ್ಲ ಶಿಕ್ಷಕರಿಗೆ ಧನ್ಯವಾದಗಳು ತಿಳಿಸಿದರು.
ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದಕಲ್ಪನಾ, ಮೇಲ್ವಿಚಾರಕರಾದರಜನಿ, ಸಾಯಿಗೀತಾ, ವಸಿಮಾ ಉಪಸ್ಥಿತರಿದ್ದರು.9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಸ್ವಾಗತಿಸಿದರು.ಶೃಷ್ಟಿ ವಂದಿಸಿದರು.ಪ್ರತಿಕ್ಷಾ ನಿರೂಪಿಸಿದರು.