ಜಗಳೂರು: ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 522 ಪ್ರಕರಣ ಇತ್ಯರ್ಥ
ಸಂಜೆವಾಣಿ ವಾರ್ತೆ
ಜಗಳೂರು.ಜು.೧೪:ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ದಲ್ಲಿ ಶನಿವಾರ ನಡೆದ  ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಕ್ರಿಮಿನಲ್ , ಸಿವಿಲ್ ಸೆರಿದಂತೆ ವಿವಿಧ ಸ್ವರೂಪದ 522 ಪ್ರಕರಣಗಳು ಇತ್ಯರ್ಥವಾಗಿದ್ದು, ರೂ.97.12 ಲಕ್ಷ ವಸೂಲಿಯಾಗಿದೆ.3 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ತಾಲ್ಲೂಕಿನ ದೇವಿಕೆರೆ ಗ್ರಾಮದ ದಂಪತಿಗೆ, ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಜೀವನ ದೊಡ್ಡದು, ಅಮೂಲ್ಯವಾದದ್ದು. ನಿಮ್ಮ ಹಾಗೂ ನಿಮ್ಮ ಪುಟ್ಟ ಕಂದನ ಭವಿಷ್ಯದ ದೃಷ್ಟಿಯಿಂದ  ಒಂದಾಗಿ ಹೋಗಿ ಎಂಬ ನ್ಯಾಯಾಧೀಶ ಆರ್. ಚೇತನ್ ಅವರ  ಸಲಹೆಗೆ ಸಮ್ಮತಿಸಿದ ಗಂಡ ಮತ್ತು ಹೆಂಡತಿ ರಾಜೀಸಂಧಾನದ ನಂತರ ಒಂದಾಗಿ ಮನೆಗೆ ಮರಳಿದ್ದು ಅದಾಲತ್ ನವಿಶೆಷವಾಗಿತ್ತು.26 ಚೆಕ್ ಬೌನ್ಸ್ ಪ್ರಕರಣಗಳು, 11 ಸಾಲ ಮರುಪಾವತಿ, 326 ಲಘು ಪ್ರಕರಣಗಳು, 74 ತಪ್ಪೊಪ್ಪಿಗೆ, ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ 62 ಪ್ರಕರಣಗಳು, 8 ಸಿವಿಲ್ ಸ್ವರೂಪದ ವ್ಯಾಜ್ಯಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣದ ಸೇರಿದಂತೆ ಒಟ್ಟು 522 ಪ್ರಕರಣಗಳು ಇತ್ಯರ್ಥವಾಗಿವೆ.ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಲೋಕ್ ಅದಲಾತ್ ನಲ್ಲಿ ಕಕ್ಷಿದಾರರು , ವಕೀಲರು , ಬ್ಯಾಂಕ್ ಅಧಿಕಾರಿಗಳು ಮತ್ತು ವಿವಿದ  ಇಲಾಖೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಕಿಕ್ಕಿರಿದು ನೆರೆದಿದ್ದರು.ಹಲವು ವರ್ಷಗಳಿಂದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಕಕ್ಷಿದಾರರು  ಲೋಕ್ ಅದಲಾತ್  ಮೂಲಕ ರಾಜೀ ಸಂಧಾನ ಮಾಡಿಕೊಂಡು ನಿರಾಳರಾದರು.ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ವಕೀಲರಾದ ಮಂಜುನಾಥ್ .,ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಕಾರ್ಯದರ್ಶಿ ಎ.ಕೆ. ಪರಶುರಾಮ್, ವಕೀಲರಾದ ಡಿ. ಶ್ರೀನಿವಾಸ್, ಸಣ್ಣೋಬಯ್ಯ, ವೈ. ಹನುಮಂತಪ್ಪ, ಕೆ.ವಿ. ರುದ್ರೇಶ್, ಕೆನರಾಬ್ಯಾಂಕ್ ವ್ಯವಸ್ಥಾಪಕ ರಾದ ಹಣಮಂತ ಬೈರಗೊಂಡ, ಸುರೇಶ ನಾಯ್ಕ ಹಾಗೂ ಅಧಿಕಾರಿ ತೇಜಸ್ವಿನಿ ಮತ್ತು ಇತರರು ಭಾಗವಹಿಸಿದ್ದರು.