೩೦ ಲಕ್ಷ ಲೂಟಿ ಮೂವರು ಖದೀಮರ ಸೆರೆ
ಬೆಂಗಳೂರು, ಜು.೧೬-ಅಡುಗೆ ಮಾಡಲು ಬಂದು ಮಾಲೀಕರ ನಂಬಿಕೆ ಗಳಿಸಿ ಅವರ ಮನೆಯಲ್ಲಿ ೩೦ ಲಕ್ಷ ಲೂಟಿ ಮಾಡಿದ್ದ ಮೂವರು ಉಂಡ ಮನೆಗೆ ಕನ್ನ ಹಾಕಿದ್ದ ಖದೀಮರನ್ನು ಸದಾಶಿವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರ ಮೂಲದ ಆನಂದ,ಸರವಣ ಹಾಗೂ ರಾಜಮಣಿ ಬಂಧಿತ ಆರೋಪಿಗಳಾಗಿದ್ದು,
ಅವರಿಂದ ೩೦ ಲಕ್ಷ ಬೆಲೆ ಬಾಳುವ ೨೬ ಕೆ.ಜಿ ೪೧೮ ಗ್ರಾಂ ಬೆಳ್ಳಿ ಪದಾರ್ಥಗಳು ೩೪ ಗ್ರಾಂ ತೂಕದ ಚಿನ್ನದ ಒಡವೆಗಳು ೫ ರೇಷ್ಮೆ ಸೀರೆಗಳು ೨ ಸ್ಮಾರ್ಟ್ ಫೋನ್‌ಗಳು ಒಂದು ಸ್ವಾಮ್‌ಸಂಗ್ ಟ್ಯಾಬ್, ಒಂದು ಕ್ಯಾಮರ, ವಿವಿಧ ಕಂಪನಿಯ ೧೦ ವಾಚ್‌ಗಳು ೬ ಕೆ.ಜಿ ಕಂಚಿನ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳನ್ನು ಸ್ಯಾಂಕಿ ರಸ್ತೆಯ ಸ್ಯಾಂಕಿ ಅಪಾರ್ಟ್ ಮೆಂಟ್ ಪ್ಲಾಟ್ ವೊಂದರಲ್ಲಿ ವಾಸವಿರುವ ಮನೆಯ ಮಾಲೀಕರು ಅಡುಗೆ ಕೆಲಸ,ಮನೆಯ ಭದ್ರತೆಗಾಗಿ ನೇಮಕ ಮಾಡಿಕೊಂಡಿದ್ದರು.
ಮಾಲೀಕರು ಊಟಗೆ ಹೊರ ಹೋಗಿದ್ದಾಗ , ಮನೆಯ ಕೀಯನ್ನು ವಾರ್ಡ್‌ನನ್ನು ನೋಡಿಕೊಳ್ಳುವ ವ್ಯಕ್ತಿಗೂ ನೀಡಿ ಮನೆಯನು ನೋಡಿಕೊಳ್ಳುವಂತೆ ತಿಳಿಸಿರುತ್ತಾರೆ.
ನಂತರ ಮನೆಯ ಮಾಲೀಕರು ಇಲ್ಲದಿರುವುದರಿಂದ ಮನೆಯ ಕೆಲಸದವನ್ನು ತನ್ನ ಸಹಚರರಾದ ಮತ್ತಿಬ್ಬರನ್ನು ಮನೆಗೆ ಕರೆಸಿಕೊಂಡು ಮನೆಯ ರೂಮ್‌ಗಳ ಡೋರ್‌ಲಾಕ್‌ಗಳನ್ನು ಮಚ್ಚಿನಿಂದ ಹೊಡೆದು ಕಬೋರ್ಡ್ ಮತ್ತು ದೇವರ ಮನೆಯಲ್ಲಿದ್ದಂತಹ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳು ಬೆಳ್ಳಿ ಪದಾರ್ಥ, ದೇವರ ವಿಗ್ರಹಗಳು ಪೂಜೆ ಸಾಮಾಗ್ರಿಗಳು ರೇಷ್ಮೆ ಸೀರೆಗಳು ಮೊಬೈಲ್ಸ್ ಫೋನ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಹಲವಾರು ಸಿಸಿ ಟಿವಿ ಕ್ಯಾಮರಾದ ದೃಶ್ಯವಳಿಗಳನ್ನು ಪರಿಶೀಲಿಸಿ ಈ ಕುರಿತು ಒಂದು ವಿಶೇಷ ತಂಡವನ್ನು ರಚಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಿಹಾರ ರಾಜ್ಯಕ್ಕೆ ಹೋಗಿ ದರ್ಭಂಗಾ ಟೌನ್ಸ್ ಬಸ್ ನಿಲ್ದಾಣದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.