ಮುಂದಿನ ಶೈಕ್ಷಣಿಕ ವರ್ಷಕ್ಕೆ ವಸತಿ ನಿಲಯ ಪೂರ್ಣ ಗೊಳಿಸಲು ಸೂಚನೆ

ಸಂಜೆವಾಣಿ ವಾರ್ತೆ
ಜಗಳೂರು.ಜು.16; ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ವಸತಿ ನಿಲಯ ಕಟ್ಟಡ ಪೂರ್ಣಗೊಳಿಸಬೇಕು ಎಂದು ಶಾಸಕ ಬಿ ದೇವೇಂದ್ರಪ್ಪ ತಿಳಿಸಿದರು. ಜಗಳೂರು ಪಟ್ಟಣದಲ್ಲಿ ಎಸ್ ಎಸ್ ಲೇಔಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಕಟ್ಟಡ ನಿರ್ಮಾಣ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಡಾ ಬಾಬು ಜಗಜೀವನ್ ರಾಂ ಛತ್ರವಾಸ್ ಯೋಜನೆಯಲ್ಲಿ 4 ಕೋಟಿ 33 ಲಕ್ಷಗಳಲ್ಲಿ ಕಾಮಗಾರಿ ನಡೆಯಲಿದ್ದು ಅಪ್ಪಾಜಿ ಬಿಲ್ರ‍್ಸ್ ಬೆಂಗ ಳೂರು ಇವರು ಮುಂದಿನ ವರ್ಷಕ್ಕೆ ವಸತಿ ನಿಲಯ ಪೂರ್ಣ ಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಅಲ್ಲದೆ ಶೀಘ್ರವೇ ಕಟ್ಟಡ ನಿರ್ಮಾಣ ಮಾಡಬೇಕೆಂದು ಕಳಪೆ ಕಾಮ ಗಾರಿ ಮಾಡದೆ ಗುಣಮಟ್ಟ ಕಟ್ಟಡವನ್ನು ಇಲಾಖೆ ನೀಡ ಬೇಕೆಂದು ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಹಲವು ಸಮಸ್ಯೆಗಳು ಇರುವುದು ಪತ್ರಕರ್ತರು ಗಮನಕ್ಕೆ ತಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸರಿಯಾಗಿ ಎಲ್ಲಾ ಸಮಸ್ಯೆಗಳ ನ್ನು ನಿವಾರಿಸಬೇಕು ಅಲ್ಲದೇ ವಿದ್ಯಾರ್ಥಿಗಳಿಗೆ ಉತ್ತಮ ಊಟ ತಿಂಡಿ ಹಾಗೂ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ರವರು ಕಚೇರಿಯ ಕೆಲಸಕ್ಕೆ ಸರಿಯಾಗಿ ಬರುವುದಿಲ್ಲ ಹಾಸ್ಟೆಲ್ ಗಳಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ ಕರ್ತವ್ಯ ನಿರ್ವಹಿಸುವ ಕೆಲಸಗಾರರನ್ನು ಕೆಲಸದಿಂದ ಏಕಏಕಿ ತೆಗೆದಾಕಿದ್ದಾರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಸಾರ್ವಜನಿಕರು ಗಮನಕ್ಕೆ ತಂದರು ಫೋನ್ ರಿಸೀವ್ ಮಾಡುವುದಿಲ್ಲ ಸೌಜನ್ಯಕ್ಕಾದರೂ ಸ್ಪಂದನೆ ಕೂಡ ಮಾಡುವು ದಿಲ್ಲ ಎಂದು ಪತ್ರಕರ್ತರು ಶಾಸಕರಿಗೆ ದೂರು ನೀಡಿದರು ಆಗ ಶಾಸಕರು ಮಾತನಾಡಿ ಏಕಾಏಕಿ ಗುತ್ತಿಗೆ ಆಧಾರಿತ ಕೆಲಸ ಮಾಡುವ ಸಿಬ್ಬಂದಿಗಳನ್ನು ತೆಗೆದುಹಾಕುವಂತಿಲ್ಲ. ಸೋಮ ವಾರ ದಿಂದ ಇವರನ್ನು ಕೆಲಸಕ್ಕೆ ನೇಮಿಸಿಕೊಳ್ಳಿ ಮಂಜುನಾಥ್ ರವರೆ ನೀವು ಶಿಸ್ತಿನಿಂದ ತಾಲೂಕಿನಲ್ಲಿ ಕೆಲಸ ಮಾಡಿ ಎಂದು ಕಡಕ್ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರಮೇಶ್ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಪಪಂ ಮುಖ್ಯಾಧಿಕಾರಿ ಲೋಕ ನ್ಯಾಯ್ಕ್, ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ್ ರೆಡ್ಡಿ. ಲಲಿತಮ್ಮ ಶಿವಣ್ಣ. ಮಂಜುನಾಥ್. ಮಹಮ್ಮದ್ ಆಲಿ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ.ಸಣ್ಣ ಸೂರಯ್ಯ. ಪಲ್ಲಾಗಟ್ಟೆ ಶೇಖರಪ್ಪ.ಕ್ರೈಸ್ ಎ.ಇ.ಇ ರಾಮು.ಗುತ್ತಿಗೆದಾರ ರಾಮಕೃಷ್ಣಪ್ಪ.ಹಟ್ಟಿ ತಿಪ್ಪೇಸ್ವಾಮಿ.ಮಾಜಿ ಪ.ಪಂ  ಪಂಚಾ ಯತಿ ಸದಸ್ಯ ಮಂಜುನಾಥ್.ಇಕ್ಬಾಲ್ ಅಹಮದ್. ಕುಬೇಂದ್ರಪ್ಪ.ನಿಲಯಪಾಲಕರಾದ ಸೋಮಣ್ಣ. ಮಹಾಬಲೇಶ್,ದೇವೇಂದ್ರಪ್ಪ ಸೇರಿದಂತೆ ಹಲವರಿದ್ದರು