ಅದ್ಧೂರಿ ಜಗನ್ನಾಥ ರಥಯಾತ್ರೆ
ಕೆ.ಆರ್.ಪುರ, ಜು.೧೬- ಇಸ್ಕಾನ್ ಶ್ರೀ ನರಸಿಂಹ ಗಿರಿಧಾರಿ ಮಂದಿರ ಎಚ್ ಬಿ ಆರ್ ಬಡಾವಣೆ ವತಿಯಿಂದ ಬೆಂಗಳೂರು ಕೇಂದ್ರ , ಉತ್ತರ ಹಾಗೂ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ವಿಶ್ವಪ್ರಸಿದ್ಧ ಜಗನ್ನಾಥಸ್ವಾಮಿ ರಥಯಾತ್ರೆ ಅದ್ಧೂರಿಯಿಂದ ನಡೆಯತು.
ಬಾಣಸವಾಡಿಯ ಮುಕ್ಕುಂಟಮ್ಮ ದೇವಸ್ಥಾನದಿಂದ ಎಚ್ ಬಿಆರ್ ಲೇಔಟ್ ನ ಇಸ್ಕಾನ್ ಮಂದಿರದವರಿಗೂ ಸಾವಿರಾರು ಭಕ್ತರು ರಥವನ್ನು ಎಳೆಯುತ್ತಾ ನೃತ್ಯ ನಾಟ್ಯ ವಾದ್ಯಗೋಷ್ಠಿಗಳೊಂದಿಗೆ ಹರಿನಾಮಸ್ಮರಣೆ ಸಂಕೀರ್ತನೆ ನಡೆಸುತ್ತಾ ಪ್ರಸಾದ ವಿತರಿಸುತ ಮೆರವಣಿಗೆ ಸಾಗಿದೆ. ಇನ್ನೂ ರಥಯಾತ್ರೆಯಲ್ಲಿ ಶ್ರೀಮಾನ್ ಋಷಿಕುಮಾರ ದಾಸರು, ಉತ್ತರ ಭಾರತದ ಇಸ್ಕಾನ್ ಪರಿಷತ್ ನ ಅಧ್ಯಕ್ಷರು ಹಾಗೂ ಶ್ರೀಮಾನ್ ಸತ್ಯ ಗೋಪಿನಾಥ್ ದಾಸರು ಆಶೀರ್ವಚನ ನೀಡಿದ್ದು ರಥಯಾತ್ರೆಗೆ ಮತ್ತಷ್ಟು ಮೆರಿಗು ನೀಡಿತು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಎಂ.ಸಿ.ಶ್ರೀನಿವಾಸ್, ಭೂನ್ಯಾಯಮಂಡಳಿ ಸದಸ್ಯ ಸಿ.ವೆಂಕಟೇಶ್, ಮುಖಂಡರಾದ ಅಗರ ಆರ್.ಪ್ರಕಾಶ್,ಡಾ.ಮಂಜುನಾಥ ಇದ್ದರು.