ಮೋಬೈಲ್ ಕಂಬದAತೆ ಏತ್ತರಕ್ಕೆ ಏರುತ್ತಿರುವ ಇಂಟರ್ನೆಟ್ ದರ. ನಿಯಂತ್ರಣ ಬೇಕು.

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೬: ಸಾಮಾನ್ಯ ವಸ್ತುಗಳು, ದಿನಸಿ ವಸ್ತುಗಳು, ತರಕಾರಿಗಳು, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯಾದಂತೆ, ಇಂಟರ್ನೆಟ್ ದರವು ಸಹ ಮೋಬೈಲ್ ಕಂಬದAತೆ ಏತ್ತರಕ್ಕೆ ಏರುತ್ತಿದೆ. ಶ್ರೀಸಾಮಾನ್ಯನಿಗೆ, ಮಧ್ಯಮ ವರ್ಗದವರಿಗೆ, ಇತ್ತ ಇಂಟರ್ನೆಟ್ ಬಳಕೆ ನಿಲ್ಲಿಸಲು ಆಗದೆ, ಅತ್ತ ಕೊಂಡುಕೊಳ್ಳಲು ಆಗದೆ, ಅತಂತ್ರ ಸ್ಥಿತಿಗೆ ಬಂದು ತಲುಪಿದ್ದಾರೆ. ಇಂಟರ್ನೆಟ್ ಡಾಟಾ ಬೆಲೆ ಗಗನಕ್ಕೆ ತಲುಪುತ್ತಿದ್ದು, ಅದರ ನಿಯಂತ್ರಣ ಅಗತ್ಯವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ, ಎಚ್.ಕೆ. ಎಸ್. ಸ್ವಾಮಿಯವರು ಸರ್ಕಾರಕ್ಕೆ ವಿನಂತಿಸಿಕೊAಡಿದ್ದಾರೆ.ಸಾಮಾನ್ಯ ಜನರಿಗೆ ಹೊರೆಯಾಗುತ್ತಿರುವ ಇಂಟರ್ನೆಟು ಬೆಲೆ, ಬಳಕೆದಾರರಿಗೆ ಬಿಸಿ ತಟ್ಟುತ್ತಿದ್ದು, 100 ರೂಪಾಯಿಗೆ ದೊರಕುತ್ತಿದ್ದಂತ ಇಂಟರ್ನೆಟ್ ಸೌಲಭ್ಯಗಳು, ಈಗ 3ಂA ರೂಗೆ ಬಂದು ತಲುಪಿವೆ. ಮೂರು ತಿಂಗಳಿಗೆ 9ಂA ತನಕ ಬಿಲ್ ನೀಡಿ. ಇಂಟರ್ನೆಟ್ ಸಂಪರ್ಕ ಪಡೆಯಲು ಜನಸಾಮಾನ್ಯರು, ಮಾಧ್ಯಮ ವರ್ಗದವರು ಹರಸಾಹಸ ಪಡುತ್ತಿದ್ದಾರೆ ಮತ್ತು ಬಡವರಿಗಂತೂ ಅಸಾಧ್ಯದ ಮಾತಾಗಿದೆ. ಇದರ ಬೆಲೆ ಕಡಿಮೆಗೊಳಿಸಲು ಡಾ. ಸ್ವಾಮಿಯವರು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.ಮುಗಿಲೆತ್ತರ ಏರುತ್ತಿರುವ ಡಾಟಾ ವೆಚ್ಚ ನಿಯಂತ್ರಿಸಲು ಸರ್ಕಾರ ಪ್ರಯತ್ನಿಸಬೇಕಾಗಿದೆ. ಬೆಲೆ ಏರಿಕೆಯಿಂದ, ಇಂಟರ್ನೆಟ್ ಡಾಟಾ ಪ್ಯಾಕೇಜ್ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗುತ್ತಾ ಬರುತ್ತಿದೆ, ದಿನನಿತ್ಯ ತರಕಾರಿ, ದಿನಸಿ, ಗ್ಯಾಸ್, ಪ್ರಯಾಣ ವೆಚ್ಚ ಏರಿದಂತೆ, ಈ ಇಂಟರ್ನೆಟ್ ಡಾಟಾ ಸಹ ಹೆಚ್ಚಾಗುತ್ತಿದ್ದು, ಯಾರ ಗಮನಕ್ಕೂ ಬಂದAತೆ ಕಾಣುತ್ತಿಲ್ಲ. ದೇಶದಲ್ಲಿ ಇರುವ ಒಂದೆರಡು ಕಂಪನಿಗಳು, ತಮ್ಮ ಮನಸಾ ಇಚ್ಛೆ ಬಂದAತೆ, ಇವುಗಳ ಬೆಲೆಯನ್ನು ಏರಿಕೆ ಮಾಡಿಕೊಂಡು, ಸಾಮಾನ್ಯ ಜನರಿಗೆ ತೊಂದರೆ ಉಂಟು ಮಾಡುತ್ತಿವೆ. ಸರ್ಕಾರ ಸಹ ಇದರ ನಿಯಂತ್ರಣದ ಬಗ್ಗೆ ಕ್ರಮ ಜರುಗಿಸಬೇಕು ಎಂದು ವಿನಂತಿಸಿಕೊAಡಿದ್ದಾರೆ .