ನಗರದಲ್ಲಿ ಚಿನ್ನಾಭರಣ ಅಂಗಡಿ ಕಳ್ಳತನ
ಹುಬ್ಬಳ್ಳಿ,ಜು.16: ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕೀಲಿ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಕೇಶ್ವಾಪುರದಲ್ಲಿ ನಡೆದಿದೆ.
ನಗರದ ಕೇಶ್ವಾಪುರದಲ್ಲಿರುವ ಜಗದೀಶ್ ದೈವಜ್ಞ ಎಂಬುವರಿಗೆ ಸೇರಿದ ಭುವನೇಶ್ವರಿ ಜ್ಯುವೆಲರಿಯ ಕೀಲಿಯನ್ನು ಗ್ಯಾಸ್ ಕಟ್ಟರ್ ನಿಂದ ತುಂಡು ಮಾಡಿ, ನಂತರ ಗ್ಲಾಸ್ ಒಡೆದು ಒಳನುಗ್ಗಿದ ಕಳ್ಳರು 800 ಗ್ರಾಮ್ ಚಿನ್ನ ಮತ್ತು 50 ಕೆ.ಜಿ ಬೆಳ್ಳಿ ಕಳ್ಳತನ ಮಾಡಿದ್ದಾರೆ.
ಬೆಳಗಿನ ಜಾವ 2 ಗಂಟೆ ವೇಳೆಗೆ ಕಳ್ಳತನ ನಡೆದಿರುವ ಸಾಧ್ಯತೆ ಇದೆ. ಮೊದಲು ಸಿಸಿ ಕ್ಯಾಮೆರಾಕ್ಕೆ ಸ್ಪ್ರೇ ಮಾಡಿ ನಂತರ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹು-ಧಾ ಪೆÇಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಬ್ಬರು ವ್ಯಕ್ತಿಗಳಿಂದ ಕಳ್ಳತನ ನಡೆದಿರುವ ಸಾಧ್ಯತೆಗಳಿವೆ. ಒಂದು ಸಿಸಿ ಕ್ಯಾಮೆರಾದಲ್ಲಿ ಇಬ್ಬರು ವ್ಯಕ್ತಿಗಳ ದೃಶ್ಯಗಳು ಸೆರೆಯಾಗಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೆÇಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.