ಪವನ ವಿದ್ಯುತ್ ಜಾಲ; ಜಗಳೂರು ತಾಲೂಕಿನ ತುಂಡು ಭೂಮಿ. ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಸ್ವಾಹ.!
ಜಗಳೂರು.ಜು.೧೬; ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ನೋಡು ನೋಡುತ್ತಿದ್ದಂತಲೇ ರಾತ್ರೋರಾತ್ರಿ ವಿಂಡ್ ಫ್ಯಾನ್ ಒಂದು ತಲೆಯೆತ್ತಿ ನಿಂತಿದೆ ಹೌದು ನಿಜ ಅಕ್ರಮವೋ ಸಕ್ರಮವೋ ಗೊತ್ತಿಲ್ಲ ರಾಷ್ಟ್ರೀಯ ಹೆದ್ದಾರಿ 50 ದೊಣ್ಣೆಹಳ್ಳಿ ಸಮೀಪದ ಬೆಂಗಳೂರು ಕಡೆ ಹೋಗುವ ರಸ್ತೆ ಎಡಭಾಗದಲ್ಲಿ ಆಕಾಶದ ಎತ್ತರ ಕ್ಕೂ ಗೋಪುರದಂತೆ ನಿಂತಿದೆ.ಸರ್ವೆ ನಂಬರ್ 92 ಜಮೀನಿನಿಂದ ರಾಷ್ಟ್ರೀಯ ಹೆದ್ದಾರಿಗೆ ಸರಿ ಸುಮಾರು ಸ್ವಲ್ಪ ದೂರದ ಅಂತರ ಇರಬಹುದು ಕ್ಲೀನ್ ಮ್ಯಾಕ್ಸ್ ಕಂಪನಿಯವರು ಯಾವ ನಿಯಮ ನಿಬಂಧನೆಗಳಿಗೆ ಕೇರ್ ಮಾಡದೆ ವಿಂಡ್  ಫ್ಯಾನ್ ಅಳವಡಿಸಿದ್ದಾರೆ ಉದಾಹರಣೆಗೆ ಇತ್ತೀಚಿಗೆ ಕೂಡ್ಲಿಗಿ ತಾಲೂಕಿನಲ್ಲಿ ಜೆ.ಎಸ್.ಡಬ್ಲ್ಯೂ ಎಂಬ ಕಂಪನಿಗೆ ಸೇರಿದ ಬೃಹತ್ ಗಾತ್ರದ ವಿಂಡ್ ಫ್ಯಾನ್ ಒಂದು ಖುಷಿದು ನೆಲಕ್ಕೆ ಬಿದ್ದು ಅಕ್ಕ ಪಕ್ಕದ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆ ಹಾಳಾಗುವುದಲ್ಲದೆ ರೈತರಿಗೆ ತೊಂದರೆಯಾಗು ತ್ತಿದೆ ಇದೆಲ್ಲ ಗಮನಿಸಿದರೆ ಅಂತ ಘಟನೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಏನಾದರೂ ನಡೆದರೆ ವಾಹನರ ಮತ್ತು ವಾಹನ ಮಾಲೀಕರ ಗತಿ ಏನಾಗಬಹುದು.ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಗರ್ರ್ ಬರ್ರ್ ಶಬ್ದಕ್ಕೆ ಅತ್ತ ನೋಡುತ್ತಾ ಮುಂದೆ ಸಾಗುತ್ತಿದ್ದಾರೆ ಇದರಿಂದ ಅಪಘಾತ ಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಇತ್ತ ತಹಶೀಲ್ದಾರ್ ಸೈಯದ್ ಕಲೀಮ್ ಉಲ್ಲಾ ಈ ಬಗ್ಗೆ ಕೇಳಿದರೆ ಗರಂ ಆಗುತ್ತಿದ್ದಾರೆ ಮಾತಿನ ಭರಟೆಯಲ್ಲಿ ಏನೋ ತಡಬಡಿಸುತ್ತಿದ್ದಾರೆ ಇವರ ಈ ನಡವಳಿಕೆಯನ್ನು ಗಮನಿಸಿದರೆ ಎಲ್ಲೋ ಏನೋ ಎಡವಟ್ಟಾದಂತೆ ಕಾಣುತ್ತದೆ ಪ್ರಭಾವಿಗಳು ಇವರನ್ನು ಗಟ್ಟಿಯಾಗಿ ಹಿಡಿದಿಟ್ಟಂತೆ ಕಾಣುತ್ತದೆ ಅದಕ್ಕಾಗಿಯೇ ಮಾಧ್ಯಮದವರು ಇವರು ಮುಂದೆ ವಿಂಡ್ ಫ್ಯಾನ್ ವಿಚಾರವನ್ನು ಎತ್ತುವಂತಿಲ್ಲ ಬೆಂಗಳೂರಿಗೆ ಹೋಗಿ ವಿಚಾರಿಸಿ ನನಗೇನು ಗೊತ್ತು ಎಂದು ಹಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ ಬೆಂಗಳೂರಿಗೆ ಹೋಗುವುದೇನು ಮಹಾ ದೊಡ್ಡದಲ್ಲ ಸ್ಥಳೀಯ ತಾಲೂಕು ಆಡಳಿತ ಇರುವಾಗ ನವೀಕರಿಸಬಹುದಾದ ಇಂಧನ ನಿಗಮ ನಿಯಮಿತ ಕ್ಕೆ ದಾರಿ ತೋರಿಸುವ ತಹಶೀಲ್ದಾರ್ ಅವರ ಈ ಕ್ರಮ ಅಸನೀಯವಾಗಿದೆ ನವೀಕರಿಸ ಬಹುದಾದ ಇಂಧನ ನಿಗಮ ನಿಯಮಿತ ಇಂತಿಷ್ಟು ವಿದ್ಯುತ್ ಉತ್ಪಾದನೆ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಂಜೂರಾತಿ ಕೊಡುವುದು ಅಷ್ಟೇ ಅದರ ಜವಾಬ್ದಾರಿ ಆದರೆ ಭೂಮಿಖರೀದಿ.ಭೂ ಪರಿವರ್ತನೆ. ವಿಚಾರದಲ್ಲಿ ಅದಕ್ಕೆ ಯಾವುದೇ ಅಧಿಕಾರವಿಲ್ಲ ವಿಂಡ್ ಫ್ಯಾನ್ ಮಾಲೀಕನು ಭೂಮಿಯನ್ನು ರೈತರಿಂದಾಗಲಿ ಅಥವಾ ಜಿಲ್ಲಾಧಿಕಾರಿಗಳಿಂದಾಗಲಿ ಭೂಮಿಯನ್ನು ಖರೀದಿ ಮಾಡ ಬೇಕು ಮತ್ತು ಕಂದಾಯ ಇಲಾಖೆ ಮತ್ತು ಆರ್.ಡಿ.ಪಿ.ಆರ್ ಏರುವ ಶರತ್ತುಗಳನ್ನು ಪಾಲಿಸಬೇಕು ಆದರೆ ಇಲ್ಲಿ ನಡೆಯುತ್ತಿ ರುವುದು ಎಲ್ಲಾ ಗೋಲ್ ಮಾಲ್ ರೈತರಿಂದ ಜಮೀನನ್ನು ಖರೀದಿಸಿ ಜಿಪಿಎಸ್ ಪಡೆದ ಕೂಡಲೆ ಆ ಜಾಗವನ್ನು ತನ್ನ ವಶಕ್ಕೆ ಪಡೆದು ಕಂಪನಿಯವರು ರಾತ್ರೋ ರಾತ್ರಿ ವಿಂಡ್ ಫ್ಯಾನ್ ಅಳ ವಡಿಸುತ್ತಿದ್ದಾರೆ.ಆದರೆ ಕಂದಾಯ ಇಲಾಖೆಗೆ ರೈತರ ಜಮೀನು ನೋಂದಣಿ ಆಗುತ್ತಿದ್ದಂತೆ ಜೆ ಸ್ಲಿಪ್ ಕಂದಾಯ ಇಲಾಖೆ ಕೈ ಸೇರುತ್ತಿದೆ ಅದನ್ನಾದರೂ ಕಂದಾಯ ಅಧಿಕಾರಿಗಳು ಗಮನಿಸುತ್ತಿಲ್ಲ ಯಾವ ಉದ್ದೇಶಕ್ಕೆ ಭೂಮಿ ಖರೀದಿಸಲಾಗುತ್ತಿದೆ ಯಾರು ಖರೀದಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು ಆದರೆ ನಮಗೇನು ಗೊತ್ತಿಲ್ಲ ದೂರು ಕೊಡಿ ನಮಗೆ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎ.ಸಿ ಯವರಿಗೆ ಪ್ರಸ್ತಾವನೆಯನ್ನು ಕಳಿಸಿಕೊಡು ತ್ತೇವೆ ಎಂಬ ಜಾಣತನದಿಂದ ಜಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.