ಶ್ರದ್ಧಾಂಜಲಿ ಸಭೆ
ಗುಳೇದಗುಡ್ಡ,ಜು16: ಕನ್ನಡ ಚಲನಚಿತ್ರ ಹಾಗೂ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಪರ್ಣಾ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಪರ್ಣಾ ನಿಧನಕ್ಕೆ ಪಟ್ಟಣದ ಪ್ರವಾಸಿ ಮಂದಿರಲ್ಲಿ ಜರುಗಿದ ಅವರ ಶೃದ್ದಾಂಜಲಿ ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಡಾ. ಎಚ್.ಎಸ್. ಘಂಟಿ ಮಾತನಾಡಿ, ಅಪರ್ಣಾ ಅಚ್ಚ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆಗೆ ಹೆಸರಾಗಿದ್ದರು. ಅವರ ನಿರೂಪಣಾ ಶೈಲಿ ಸಭೀಕರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಮಸಣದ ಹೂ, ಸಾಹಸವೀರ, ಡಾಕ್ಟರ್ ಕೃಷ್ಣಾ, ಒಲವಿನ ಆಸರೆ ಸೇರಿದಂತೆ ಹಲವಾರು ಕನ್ನಡ ಚಲನ ಚಿತ್ರಗಳಲ್ಲಿಯೂ ನಟಿಸಿದ ನಟಿ ಅಪರ್ಣಾ ಬಹುಮುಖ ಪ್ರತಿಭಾವಂತರಾಗಿದ್ದರು ಎಂದು ಹೇಳಿದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ ಮಾತನಾಡಿ, ಕಲಾವಿದೆ, ನಿರೂಪಕಿ ಅಪರ್ಣಾ ಅವರ ಅಗಲಿಕೆಯಿಂದ ನಿರೂಪಣಾ ಕ್ಷೇತ್ರ ಅಪೂರ್ಣವಾಗಿದೆ. ಮೆಟ್ರೋಗೆ ಅವರು ಧ್ವನಿ ಕೂಡ ನೀಡಿದ್ದರು. ಅವರ ಕನ್ನಡದ ಪ್ರೇಮ, ಅಭಿಮಾನ ಹೇಳತೀರದು. ನಿರೂಪಣೆಯಲ್ಲಿ ದಾಖಲೆ ಬರೆದಿದ್ದ ಕನ್ನಡದ ಕಂಚಿನ ಕಂಠದ ಮಜಾ ಟಾಕೀಜ ಕಲಾವಿದೆಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಈರಣ್ಣ ಅಲದಿ, ಯಲ್ಲಪ್ಪ ಮನ್ನಿಕಟ್ಟಿ, ಕೋಶಾಧ್ಯಕ್ಷ ವಿಠ್ಠಲಸಾ ಬದಿ, ಪರಶು ಮಾದರ, ಎ.ಐ.ಅಪಘಾನ, ಸಂಗಮೇಶ ಚಿಕ್ಕಾಡಿ, ಗುಂಡಪ್ಪ ಕೋಟಿ, ದೇವಾನಾಯಕ ನಾಯ್ಕರ ಇದ್ದರು.