ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೬; ನಮ್ಮ ಭಾಷೆಯನ್ನು ನಾವು  ಪ್ರೀತಿಯಿಂದ ಮಾತನಾಡಿದಾಗ ಮಾತ್ರ ನಮ್ಮ ಭಾಷೆಗೆ ನಾವು ಗೌರವ ಕೊಟ್ಟಂತಾಗುತ್ತದೆಎಂದು ಪೋಲೀಸ್ ಉಪ‌ಅಧೀಕ್ಷಕರಾದ ಪಿ.ಬಿ ಪ್ರಕಾಶ್ ಹೇಳಿದರು.ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ  ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಾವಣಗೆರೆ ದಕ್ಷಿಣ ವಿಭಾಗದಿಂದ  ನಡೆಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಬಮಾತನಾಡಿದ ಅವರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ  ಪರೀಕ್ಷೆಗಳನ್ನು ಬರೆಯುತ್ತಿರಬೇಕು ಎಂದು ತಿಳಿಸಿದರು ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಣಿಜ್ಯ ತೆರಿಗೆ ಉಪ ಆಯುಕ್ತರಾದ ಎಚ್.ಎಸ್. ಮಂಜುನಾಥ್ ಮಾತನಾಡುತ್ತಾ ಕನ್ನಡವನ್ನು ಹೃದಯದಿಂದ ಪ್ರೀತಿಸಿದಾಗ ಮಾತ್ರ ಕನ್ನಡ ಬೆಳೆಯಲಿಕ್ಕೆ ಮತ್ತು ಉಚ್ಚಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮತ್ತು ಕನ್ನಡವನ್ನ ಸಾಹಿತಿಗಳಿಂದ ಕನ್ನಡವನ್ನು ಬೆಳೆಸಲಿಕ್ಕೆ ಒಂದು ಪ್ರೇರಣೆ & ಅವರ ಕೊಡುಗೆ ಬಹಳಷ್ಟಿದೆ ಎಂದರು ಕನ್ನಡವನ್ನು ಬೆಳೆಸೋಣ ಉಳಿಸೋಣ ಎಂದು ಹೇಳಿದರು. ಕನ್ನಡ ಸೇವೆಗೆ ನಾವು ಸದಾ ಸಿದ್ಧ ಇಂತಹ ಕಾರ್ಯಕ್ರಮಗಳನ್ನು ಮಾಡಿದಾಗ ಕನ್ನಡವನ್ನ ಕಂಪನ್ನು ಉಳಿಸಲು ಹಾಗೂ ಬೆಳಸಲು  ಸಾಧ್ಯವಾಗುತ್ತದೆ ಎಂದು ಪೋಷಕರು ಹಾಗೂ ಉದ್ಯಮಿಗಳು ಆದಂತಹ  ಶಿವನಹಳ್ಳಿ ರಮೇಶ್ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಡಾ. ರವಿಕುಮಾರ್ ಎ.ಜೆ ಮಾತನಾಡುತ್ತಾ ವಿದ್ಯಾರ್ಥಿಗಳು ಸಾಧನೆ ಮಾಡುವುದು ಇನ್ನೂ  ಬಹಳಷ್ಟಿದೆ  ಈ ಗೌರವ ಸನ್ಮಾನ ತಾವು ಪಡೆಯುತ್ತಿರುವುದು ತುಂಬಾ ಸಂತಸ ತಂದಿದೆ ಎಂದರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಗುರಿ ಮುಟ್ಟಿ ಒಳ್ಳೆಯ ಸೇವೆ ಮಾಡಿ ಎಂದು ತಿಳಿಸಿದರು ಹಾಗೂ ಇಂತಹ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ವಿಷಯವನ್ನು ಅರ್ಥ ಮಾಡಿಕೊಂಡಾಗ ಇನ್ನು ಹೆಚ್ಚಿನ ಫಲಿತಾಂಶ ಪಡೆಯಲು ಸಹ ಸಾಧ್ಯವಾಗುತ್ತದೆ ಎಂದು ತಿಳಿಸಿದರು ಸಮಯದಲ್ಲಿ ಸುಮಾರು 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ಮೂವರು ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಸೌಭಾಗ್ಯ ಹಿರೇಮಠ ಸ್ವಾಗತವನ್ನು ಶ್ರೀಮತಿ ಮಂಜುಳಾ ಕರ್ಜಗಿ ಹಾಗೂ ನೃತ್ಯರೂಪಕವನ್ನ  ವಿದ್ಯಾರ್ಥಿಗಳು ನಡೆಸಿಕೊಟ್ಟರು ನಿರೂಪಣೆಯನ್ನು ತೆಲಗಿ ವೀರಭದ್ರಪ್ಪನವರು ಹಾಗೂ ಶ್ರೀಮತಿ   ರೇಖಾ ಏನ್. ಆರ್.ಶ್ರೀಮತಿ ಎಂ ದೀಪಾ ಶ್ರೀಮತಿ ಶ್ವೇತಾ ಬಿ. ಎಂ. ಮತ್ತು  ಕುಮಾರ್ ಎಂ  ಶ್ವೇತಾ ಮತ್ತು ಪ್ರಾಸ್ತಾವಿಕ ನುಡಿಯನ್ನ   ಹರೀಶ್ ನಡೆಸಿಕೊಟ್ಟರು  ಮಾಜಿ ಸೈನಿಕರಾದ ಬೀರಪ್ಪ  ಕೇಶವ್ ಶೇಟ್ ಸದಸ್ಯರುಗಳಾದ  ಮಾರುತಿ, ಪ್ರವೀಣ್ ಇತರರು ಇದ್ದರು