ಕ್ರೇನ್ ಬೆಳೆಸಿ ಹೂವಿನ ಹಾರ, ಹಣ್ಣಿನ ಹಾರ ಹಾಕುವಾಗ ಎಚ್ಚರಿಕೆ ಅಗತ್ಯ.

ಚಿತ್ರದುರ್ಗ. ಜು.೧೬; ಕ್ರೇನ್ ಬಳಸಿ ಅಗಾಧವಾದ ಹೂವಿನ ಹಾರ, ಹಣ್ಣಿನ ಹಾರ, ತರಕಾರಿ ಹಾರ, ತೆಂಗಿನಕಾಯಿಯ ಹಾರ ಮಾಡಿ, ವ್ಯಕ್ತಿಗಳನ್ನ ಗೌರವಿಸುವಂತಹ ಪದ್ಧತಿಯಲ್ಲಿ, ಕ್ರೇನ್‌ಗಳನ್ನ ದುರ್ಬಳಕೆ ಮಾಡಿಕೊಂಡು, ಅಜಾಗರೂಕತೆಯಿಂದ ಬಳಸಿ, ಅವುಗಳಿಂದ ಆಗುವ ಅನಾಹುತಗಳನ್ನ ತಪ್ಪಿಸುವ ಬಗ್ಗೆ ಈಗಿನಿಂದಲೇ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿನಂತಿಸಿಕೊಂಡಿದ್ದಾರೆ.ರಾಜಕೀಯ ಕಾರ್ಯಕ್ರಮಗಳಲ್ಲಿ, ದೊಡ್ಡ ದೊಡ್ಡ ಮೆರವಣಿಗೆಗಳಲ್ಲಿ, ಜಾತ್ರೆಗಳಲ್ಲಿ, ಮಹೋತ್ಸವಗಳಲ್ಲಿ, ವಿಜೃಂಭಣೆಯಿAದ ಅಲಂಕಾರಗೊAಡ ವಿಗ್ರಹಗಳಿಗೆ, ಕ್ರೇನ್ಗಳನ್ನ ಬಳಸಿ ಹೂವಿನ ಹಾರ, ಹಣ್ಣಿನ ಹಾರ, ತರಕಾರಿಗಳ ಹಾರ ಹಾಕುವ ಪ್ರವೃತ್ತಿ ಈ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅಭಿಮಾನಿಗಳು ಇದರ ಮೇಲೆ ಹತ್ತಿಕೊಂಡು ಹೋಗಿ, ಹಾರ ಹಾಕುವ ದೃಶ್ಯ ಅಸುರಕ್ಷಿತವಾಗಿರುತ್ತದೆ, ಕ್ರೇನಿನ ಸಮತೋಲನವನ್ನು ಹೆಚ್ಚು ಕಮ್ಮಿ ಮಾಡಿದಂತಹ ಅಭಿಮಾನಿಗಳು, ಟ್ರೆöÊನ್‌ಗಳನ್ನ ಕೆಳಗೆ ಬಿಳಿಸಿ, ಕೆಳಗಿರುವ ವ್ಯಕ್ತಿಗಳಿಗೆ ಅನಾಹುತಗಳಾಗಿರುವ, ಸಾವು ನೋವು ಆಗಿರುವ ಉದಾಹರಣೆಗಳು ಬೇಕಾದಷ್ಟಿವೆ. ದೊಡ್ಡ ದೊಡ್ಡ ಫ್ಲೆಕ್ಸ್ಗಳನ್ನ ಕಟ್ಟಲು ಹೋಗಿ, ವಿದ್ಯುತ್ ಕಂಬಗಳಿAದ ಕರೆಂಟ್ ಶಾಕ್ ಹೊಡೆಸಿಕೊಂಡು, ಯುವಕರು ಸಾವನ್ನಪ್ಪಿರುವುದನ್ನು ನಾವು ಮರೆಯಬಾರದು. ದೇಶದಲ್ಲಿ ಅಲ್ಲಲ್ಲಿ ಸಂಭವಿಸುತ್ತಿರುವುದು ಇಂತಹ ಘಟನೆಗಳು ಉತ್ತಮವಾದ ಬೆಳವಣಿಗೆಯಲ್ಲ ಎಂದಿದ್ದಾರೆ.ಕಟ್ಟಡ ನಿರ್ಮಾಣದಲ್ಲಿ, ರಸ್ತೆ ನಿರ್ಮಾಣದಲ್ಲಿ, ಚರಂಡಿ ನಿರ್ಮಾಣಗಳಲ್ಲಿ, ಕೈಗಾರಿಕೆಗಳಲ್ಲಿ, ಮರಮಟ್ಟುಗಳನ್ನ ಸಾಗಾಣಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ, ವೈಜ್ಞಾನಿಕವಾಗಿ ಕಂಡುಹಿಡಿದAತ ಈ ಯಂತ್ರವನ್ನು, ಇಂದು ಸಮಾಜದಲ್ಲಿ ವ್ಯಕ್ತಿಗಳ, ವಿಗ್ರಹಗಳ, ಗೌರವವನ್ನು ಹೆಚ್ಚಿಸಲು, ಹಾರ ಹಾಕಲು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಯಂತ್ರಗಳನ್ನ ಉತ್ತಮ ರೀತಿಯಲ್ಲಿ ಬಳಸಿಕೊಳ್ಳದೆ, ಕೆಲವೊಮ್ಮೆ ಅಭಿಮಾನ ಹೆಚ್ಚಾಗಿ, ನಿಯಂತ್ರಣವನ್ನು ಕಳೆದುಕೊಂಡಾಗ, ಜನರು ಕ್ರೆöÊನುಗಳ ಮೇಲೆ ಹತ್ತಿ, ಕೂಗಾಡಿ, ಕಿರಿಚಾಡಿ, ನಿಯಂತ್ರಣ ತಪ್ಪಿ, ಕೆಳಗೆ ಬಿದ್ದಂತಹ ಉದಾಹರಣೆಗಳು ಸಾಕಷ್ಟಿವೆ. ಯಂತ್ರಗಳನ್ನ ಯಾವುದಕ್ಕೆ ಬಳಕೆ ಮಾಡಬೇಕೆಂದು ಉತ್ಪಾದನೆಯಾಗಿರುತ್ತದಯೋ ಆ ವಸ್ತುವನ್ನು ಇನ್ಯಾವುದಕ್ಕೂ ಬಳಕೆ ಮಾಡುವಷ್ಟು ಮಾನವ ಪ್ರಬುದ್ಧನಾದಾಗಿನಿಂದ, ಈ ತರದ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಕೈಯಲ್ಲಿ ಹಾಕಬೇಕಾದ ಹೂವಿನ ಹಾರವನ್ನು, ಕ್ರೇನ್ ಮುಖಾಂತರ ಹಾಕಿಸುವಷ್ಟು ಮಟ್ಟಿಗೆ ನಾವು ಬೆಳೆದು ನಿಂತಿದ್ದೇವೆ. ಪರಿಸರದ ನಿಯಮಗಳನ್ನ ಉಲ್ಲಂಘಿಸಲು ಪ್ರಾರಂಬಿಸಿದ್ದೇವೆ. ಮುಂದೊAದು ದಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಸಹ ಕ್ರೇನ್ ಮುಖಾಂತರ ಹೂವಿನ ಹಾರ ಅರ್ಪಿಸುವಂತ ಪ್ರವೃತ್ತಿ ಬೆಳೆದರೆ ಅತಿಶಯೋಕ್ತಿಯಲ್ಲ ಎಂದಿದ್ದಾರೆ.ಲಕ್ಷಾAತರ ರೂಪಾಯಿಯ ಸೇಬಿನ ಹಾರ, ಹಣ್ಣಿನ ಹಾರ, ತರಕಾರಿ ಹಾರ, ಇವುಗಳನ್ನೇ ಒಂದು ಪ್ರತಿಷ್ಠೆಯ ಸಂಕೇತವಾಗಿ ಉತ್ಪಾದನೆ ಮಾಡಿ, ಹಾರ ಹಾಕಿದ ತಕ್ಷಣ, ಜನರು ಹಸಿವಿ ವಿನಿಂದ ಹಣ್ಣಿಗಾಗಿ, ತರಕಾರಿಗಾಗಿ, ಕಿತ್ತಾಡಿ, ಜಗಳವಾಡಿ, ಅಲ್ಲಿರುವ ಕಾರ್ಯಕ್ರಮಗಳನ್ನೇ ಕೆಡಿಸಿರುವಂತಹ ಉದಾಹರಣೆಗಳು ಇವೆ. ಹಾಗಾಗಿ ರಾಜಕೀಯ ವ್ಯಕ್ತಿಗಳು, ಮುಕ್ಸದ್ದಿಗಳು, ಸಿನಿಮಾ ನಟರು, ತಮ್ಮ ಅಭಿಮಾನಿಗಳಿಗೆ ಸರಳತೆಯಿಂದ, ಸರಳವಾದ ಹಾರ ಹಾಕಿ, ಸನ್ಮಾನ ಮಾಡುವಂತ ವಿಚಾರವನ್ನು ತಿಳಿಸಿಕೊಡಬೇಕು ಎಂದಿದ್ದಾರೆ. ಅದೇ ಹೂವಿಗಾಗಿ, ತರಕಾರಿಗಾಗಿ, ಹಣ್ಣಿಗಾಗಿ ಖರ್ಚು ಮಾಡುವ ಲಕ್ಷಾಂತರ ರೂಪಾಯಿಗಳನ್ನ, ಸಮಾಜ ಸುಧಾರಣೆಗೆ, ಬಡತನ ನಿವಾರಣೆಗೆ, ಪರಿಸರ ಸಂರಕ್ಷಣೆಗಾಗಿ ಬಳಕೆ ಮಾಡಿ, ಇನ್ನೊಬ್ಬರಿಗೆ ಒಳ್ಳೆಯ ಮಾದರಿಯಾಗಲಿ ಎಂದು ವಿನಂತಿಸಿಕೊAಡಿದ್ದಾರೆ. ಖರ್ಚು ವೆಚ್ಚಗಳÀನ್ನೇ ಹೆಚ್ಚು ಮಾಡಿಕೊಳ್ಳುತ್ತಾ ಹೋಗಿ, ಮುಂದಿನ ಜನಾಂಗಕ್ಕೆ ನಾವು ಕೆಟ್ಟ ಮಾದರಿಗಳಾಗುತ್ತಿದ್ದೇವೆ ಎಂದಿದ್ದಾರೆ