ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರÀ ಸಂರಕ್ಷಣೆ ಮಾಡೋಣ
ಕಲಬುರಗಿ:ಜು.16: ಪರಿಸರ ಸಮತೋಲನಕ್ಕೆ ಶೇ.33ರಷ್ಟು ಅರಣ್ಯ ಪ್ರದೇಶಅವಶ್ಯಕತೆಯಿದ್ದು, ಇದರ ಪ್ರಮಾಣಕಡಿಮೆಯಿರುವುದುರಿಂದ ಪರಿಸರಅಸಮತೋಲನವಾಗುತ್ತಿದೆ. ಆದ್ದರಿಂದಎಲ್ಲರು ಗಿಡಗಳನ್ನು ನೆಟ್ಟು ಅವುಗಳನ್ನು ಮಗುವಿನಂತೆ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವಕಾರ್ಯ ಸಾಮೂಹಿಕವಾಗಿ ಮಾಡೋಣಎಂದುಪ್ರಾಚಾರ್ಯರಾದರವೀಂದ್ರಕುಮಾರಸಿ.ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯುಕಾಲೇಜಿನಲ್ಲಿಎನ್.ಎಸ್.ಎಸ್‍ಘಟಕದ ವತಿಯಿಂದಜರುಗಿದವನಮಹೋತ್ಸವಕಾರ್ಯಕ್ರಮದಲ್ಲಿಗಿಡಗಳನ್ನು ನೆಟ್ಟು ನೀರುಣಿಸುವಕಾಯಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ಎನ್.ಎಸ್.ಎಸ್‍ಅಧಿಕಾರಿಎಚ್.ಬಿ.ಪಾಟೀಲ ಮಾತನಾಡುತ್ತಾ, ಪರಿಸರ ಸಮತೋಲನವಾಗಿಯೇ ಹುಟ್ಟಿದೆ. ಆದರೆಅದರ ಮೇಲೆ ಮಾನವತನ್ನ ದಬ್ಬಾಳಿಕೆಯನ್ನು ಮಾಡಿ, ತನಗಿಷ್ಟದಂತೆ ಬದಲಾಯಿಸಬೇಕೆಂಬ ಪ್ರಯತ್ನಕ್ಕೆಕೈಹಾಕಿರುವುದರ ಪರಿಣಾಮವಾಗಿ ಪರಿಸರದಲ್ಲಿಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಆದ್ದರಿಂದ ವಾಸ್ತವಿಕತೆಯನ್ನುಅರ್ಥ ಮಾಡಿಕೊಂಡು ಪರಿಸರ ಮೂಲ ಸ್ಥಿತಿಯನ್ನು ಕಾಪಾಡುವುದು ಪ್ರಸ್ತುತಅಗತ್ಯವಾಗಿದೆಎಂದರು.
ಕಾರ್ಯಕ್ರಮದಲ್ಲಿಜೀವಶಾಸ್ತ್ರಉಪನ್ಯಾಸಕಿ ಶರಣಮ್ಮ ಭಾವಿಕಟ್ಟಿ, ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ, ಉಪನ್ಯಾಸಕರಾದ ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ಸೇವಕ ಭಾಗಣ್ಣ ಹನ್ನೂರ್ ಹಾಗೂ ಸ್ವಯಂ ಸೇವಕರುಭಾಗವಹಿಸಿದ್ದರು.