ಇಂದಿಗೂ ರೈತರ ಜೀವನಮಟ್ಟ ಸುಧಾರಿಸಿಲ್ಲ: ಅಶೋಕ್
ಸಂಜೆವಾಣಿ ನ್ಯೂಸ್
ಮೈಸೂರು: ಜು.16:- ಆಹಾರ ಉತ್ಪಾದನೆಯಲ್ಲಿ ದೇಶ ಸಾಕಷ್ಟು ಸಾಧನೆ ಮಾಡಿದೆ. ಆದರೆ, ಇಂದಿಗೂ ರೈತರ ಆದಾಯ ಮತ್ತು ಜೀವನ ಮಟ್ಟ ಸುಧಾರಣೆ ಆಗಿಲ್ಲ ಎಂದು ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಅಭಿಪ್ರಾಯಪಟ್ಟರು.
ಸೋಮವಾರ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಕಾಶವಾಣಿ ಮೈಸೂರು, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‍ಟಿಆರ್‍ಐ) ಮೈಸೂರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ವಿಕಸನ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ಮಂಡ್ಯ ಇವರ ಆಶ್ರಯದಲ್ಲಿ ನಮ್ ಕಂಪನಿ ರೈತನ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಜನಸಂಖ್ಯೆ 140 ಕೋಟಿ ಇದೆ. ಆದರೂ ನಾವು ಆಹಾರ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಆದರೆ, ಇಂದಿಗೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕಿಲ್ಲ. ಸರಕಾರದ ಜತೆ ಹೋರಾಟ ನಡೆಯುತ್ತಲೇ ಇದೆ. ರೈತರ ಮೂಲಭೂತ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಜತೆಗೆ ಆಹಾರದ ಗುಣಮಟ್ಟ ಹಾಗೂ ಪೆÇೀಷಕಾಂಶಗಳ ಬಗ್ಗೆಯೂ ಹೆಚ್ಚು ನಿಗಾ ವಹಿಸಬೇಕಿದೆ. ರೈತರಿಗೆ ಕಡಿಮೆ ಬೆಲೆಗೆ ಕೃಷಿ ಪರಿಕರಗಳನ್ನು ನೀಡಬೇಕಿದೆ ಎಂದು ತಿಳಿಸಿದರು.
ಆಕಾಶವಾಣಿ ಮೈಸೂರು ಉಪ ನಿರ್ದೇಶಕ ಎಸ್.ಎಸ್.ಉಮೇಶ್ ಮಾತನಾಡಿ, ಮೈಸೂರು ಆಕಾಶವಾಣಿ ಸಾಕಷ್ಟು ಪ್ರಯೋಗ ಮಾಡುತ್ತಿದೆ. ನಾಗನಹಳ್ಳಿ ಕೃಷಿ ಕೇಂದ್ರದಿಂದ ನಮ್ ಕಂಪನಿ ವಿಶೇಷ ಬಾನುಲಿ ಸರಣಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ರೈತನ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿ 52 ವಾರಗಳ ಕಾಲ ಪ್ರಸಾರವಾಗಲಿದೆ. ರೈತರಿಗೆ ತುಂಬಾ ಬೆಲೆ ಸಿಗಬೇಕಾದರೆ ಕನಿಷ್ಠ ತಿಂಗಳಿಗೆ ಮೂರು ಬಾರಿ ಮಾರಾಟ ಮೇಳ ಆಯೋಜನೆ ಮಾಡಬೇಕು. ಎಲ್ಲ ಉತ್ಪನ್ನಗಳನ್ನು ಅಲ್ಲಿ ಮಾರಾಟ ಮಾಡಬೇಕು. ರಿಯಾಯಿತಿ ಕೊಟ್ಟರೆ ಕಾಯಂ ಗ್ರಾಹಕರು ರೈತರಿಗೆ ಸಿಗುತ್ತಾರೆ ಎಂದರು.
ಆನ್‍ಲೈನ್ ಮೂಲಕ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಆಲೂರು ಆಶಯ ಭಾಷಣ ಮಾಡಿದರು. ಸಿಎಫ್‍ಟಿಆರ್‍ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪೆÇ್ರಘಿ.ಎಂ.ಎಸ್.ಸಪ್ನ, ನಬಾರ್ಡ್ ಮಂಡ್ಯ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹರ್ಷಿತಾ ಬಿ.ವಿ., ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ ಎನ್., ವಿಕಸನ ಸಂಸ್ಥೆ ಗೌರವ ಅಧ್ಯಕ್ಷ ಪೆÇ್ರಘಿ.ಆರ್.ಎಲ್.ಜಗದೀಶ್, ಪುಷ್ಪಾದೇವಿ, ಕುಮಾರ್, ಸುಭದ್ರ ಸೇರಿದಂತೆ ಇತರರು ಇದ್ದರು.