ಶಿಕ್ಷಕಿ ಪರವಿನ್ ಸುಲ್ತಾನಾಗೆ ಪಿಎಚ್.ಡಿ
ಕಲಬುರಗಿ, ಜು.16- ತಾಲೂಕಿನ ಖಣದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಹಾಗೂ ಸಾಹಿತಿ ಪರವಿನ್ ಸುಲ್ತಾನಾ ಅವರು, ಮಂಡಿಸಿದ “ಗುಲ್ಬರ್ಗ ಜಿಲ್ಲೆಯ ಸೂಫಿ ಪರಂಪರೆ : ಒಂದು ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ.
ಹಿರಿಯ ಸಾಹಿತಿ ಹಾಗೂ ಲೇಖಕಿ ಡಾ.ಮೀನಾಕ್ಷಿ ಬಾಳಿ ಅವರ ಮಾರ್ಗದರ್ಶನದಲ್ಲಿ, ಪರವಿನ್ ಸುಲ್ತಾನಾ ಅವರು, ಮಂಡಿಸಿರುವ ಈ ಸಂಶೋಧನ ಮಹಾಪ್ರಬಂದಕ್ಕೆ ದ್ರಾವಿಡಿಯನ್ ವಿಶ್ವವಿದ್ಯಾಲಯ ಡಾಕ್ಟರೇಟ ಪದವಿ ಪ್ರಕಟಿಸಿದೆ.
ಸಾಹಿತಿ ಮತ್ತು ಶಿಕ್ಷಕಿ ಪರವಿನ್ ಸುಲ್ತಾನಾ ಅವರ ಈ ಸಾಧನೆಗೆ ಖಣದಾಳ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಗೂ ಕಲಬುರಗಿ ಸಾಹಿತಿ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.