ರೈತರ ಜಮೀನುಗಳಿಗೆ ನೀರು ಹರಿಸಲು ನಾಲೆಗಳನ್ನು ಅಭಿವೃದ್ಧಿಪಡಿಸಿ
ಸಂಜೆವಾಣಿ ವಾರ್ತೆ
ಹನೂರು ಜು 16 :- ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗುಡ್ಡೆ ಬಳಿ ಬರುವ ನಾಲೆಗಳು ಸೇರಿದಂತೆ ಅಜ್ಜಿಪುರ ಬಳಿ ಬರುವ ಉಡುತೊರೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ತೆರಳಿ ಪರಿಶೀಲನೆ ನಡೆಸಿದರು.
ಬಹುತೇಕ ತಾಲೂಕಿನಲ್ಲಿರುವ ಜಲಾಶಯದ ಕಾಲುವೆಗಳು ರಾಡಿ ಹಾಗೂ ಗಿಡ ಗಂಟೆಗಳು ಬೆಳಗು ನಿಂತಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳುವ ನಾಲೆಗಳನ್ನು ಸ್ವಚ್ಛಗೊಳಿಸಲು ಕ್ರಿಯಾಯೋಜನೆ ತಯಾರಿಸಿ ತಕ್ಷಣ ದುರಸ್ತಿಯಾಗಿರುವ ನಾಲೆಗಳನ್ನು ಸರಿಪಡಿಸಿ ರೈತರ ಜಮೀನುಗಳಿಗೆ ನೀರನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಜೊತೆಗೆ ನಾಳೆಗಳಲ್ಲಿ ಬರುವ ರೈತರ ಜಮೀನಿಗೆ ತೆರಳುವ ಕಿರು ಸೇತುವೆಗಳು ಸಹ ದುರಸ್ತಿಗೆ ಒಳಗಾಗಿ ರಾಡಿ ಮತ್ತು ಮಣ್ಣು ಮುಚ್ಚಿದ್ದು ಕೂಡಲೇ ಅದನ್ನು ಸರಿಪಡಿಸಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಡಿ ಮತ್ತು ಮಣ್ಣನ್ನು ತೆಗೆದು ಕಿತ್ತು ಬಂದಿರುವ ನಾಲೆಗಳನ್ನು ದುರಸ್ತಿಪಡಿಸಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮನ ಗುಡ್ಡೆ ಹಾಗೂ ಉಡುತೊರೆ ಜಲಾಶಯದ ರೈತರ ಜಮೀನಿಗೆ ತೆರಳುವ ನಾಲೆಗಳನ್ನು ಪರಿಶೀಲಿಸಲು ಬಸಪ್ಪನ ದೊಡ್ಡಿ ಅಜ್ಜಿಪುರ ಗಂಗನದೊಡ್ಡಿ ಕೆ.ಗುಂಡಾಪುರ ಮಂಚಾಪುರ ಕಿರೇಪತಿ ಹಳ್ಳ, ಯಾರಂಬಾಡಿ, ಸೇರಿದಂತೆ ರಾಮಪುರ ಇನ್ನಿತರ ಗ್ರಾಮಗಳಲ್ಲಿ ಶಾಸಕ ಮಂಜುನಾಥ್ ಅಧಿಕಾರಿಗಳ ಜೊತೆ ತೆರಳಿ ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಎಇಇ ನಿರಂಜನ್, ಎಇ ಅಭಿಲಾಷ್ ಹಾಗೂ ಲ್ಯಾಂಡರ್ಮಿ ಎಇಇ ಚಿಕ್ಕವೀರಯ್ಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚಿನ್ನಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.