ಉಚಿತ ಸಮವಸ್ತ್ರ ವಿತರಿಸಿದ ದಾನಿಗಳಿಗೆ ಸನ್ಮಾನ
ಕೋಲಾರ,ಜು,೧೫- ಸಮಾಜ ಸೇವಕರು, ದಾನಿಗಳು ಹಾಗೂ ಬೆಂಗಳೂರಿನ ಖ್ಯಾತ ವಕೀಲರಾದ ರಿಯಾಜ್ ಉಲ್ಲಾ ಷರೀಪ್‌ಖಾನ್ ಮತ್ತು ಸಾಯಿ ವಾಟರ್ ಫಿಲ್ಟರ್ ಮಾಲೀಕರಾದ ಮಿಂಡಹಳ್ಳಿ ಮಂಜುನಾಥ್ ರವರು ಹಾಗೂ ಶಿಕ್ಷಕರಾದ ನಾರಾಯಣಸ್ವಾಮಿ ರವರ ಸಹಕಾರದಲ್ಲಿ ದಿನ್ನೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬೦ ವಿದ್ಯಾರ್ಥಿಗಳಿಗೆ ಸುಮಾರು ೪೦ ಸಾವಿರ ಬೆಲೆಬಾಳುವ ಬಣ್ಣದ ಉಚಿತ ಸಮವಸ್ತ್ರ ಹಾಗೂ ಟೈ ಮತ್ತು ಬೆಲ್ಟ್ಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಿ.ಆರ್.ಪ್ರಭಾಕರ್ ವಹಿಸಿದ್ದು, ಸಮಾರಂಭವನ್ನು ನರಸಾಪುರ ಸಿಆರ್‌ಪಿ ಗೊವಿಂದು ರವರು ಉದ್ಘಾಟಿಸಿದರು. ದಾನಿಗಳ ಸೇವೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಹೃದಯ ಪೂರ್ವಕವಾಗಿ ಶ್ಲಾಘಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಆಂಜನಪ್ಪ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಎಂ.ರಮೇಶ್, ಮುಖ್ಯ ಶಿಕ್ಷಕರಾದ ಕೆ.ಟಿ.ನಾಗರಾಜ್, ಎಸ್.ಡಿ.ಎಂ.ಸಿ. ಸದಸ್ಯರಾದ ವಿ.ಮುನಿರಾಜು, ಡಿ.ಎಂ.ಬೈರೇಗೌಡ, ಸಹ ಶಿಕ್ಷಕರಾದ ಎಂ.ಕೊಳ್ಳಪ್ಪ, ಯಲ್ಲಪ್ಪ, ಅತಿಥಿ ಶಿಕ್ಷಕರಾದ ಜೆ.ರಜನಿ ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆ ಕೆ.ರಾಧ, ಆಶಾ ಕಾರ್ಯಕರ್ತೆ ಮುನಿರತ್ನಮ್ಮ, ಜಲಗಾರ ವಾಟರ್‌ಮೆನ್ ಮುನಿರಾಜು, ಅಕ್ಷರ ದಾಸೋಹ ಸಿಬ್ಬಂದಿ ಕೆ.ಪಿ.ಪುಷ, ಬಿ.ಎಂ.ಪ್ರೇಮ ಮುಂತಾದವರು ಉಪಸ್ಥಿತದಿದ್ದರು.