ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ
ಕೋಲಾರ,ಜು ೧೬- ವಿಜ್ಞಾನ ಇಂದು ಸಮಾಜದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನ ಇಲ್ಲದೇ ಸಮಾಜವಿಲ್ಲ. ವೈಜ್ಞಾನಿಕ ತಳಹದಿಯ ಮೇಲೆ ವಿಜ್ಞಾನ ಬೆಳೆಸಲು ಸಾರ್ವಜನಿಕರ ಸಹಕಾರ ಅಗತ್ಯ. ಮೂಡನಂಬಿಕೆಗಳನ್ನು ಬದಿಗಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಲು ಸರ್ವರ ಚಿಂತನೆ ಅಗತ್ಯ ಎಂದು ಕರ್ನಾಟಕ ರಾಜ್ಯ ಜ್ಞಾನ ಸಮಿತಿ ನೂತನ ರಾಜ್ಯ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ದಕ್ಷಿಣ ಸ್ವಾದ ಸಭಾಂಗಣದಲ್ಲಿ ಜ್ಞಾನ ವಿಜ್ಞಾನ ಸಮಿತಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಖ್ಯಾತ ಮನೋವೈದ್ಯ ಪದ್ಮಶ್ರೀ ಪುರಸ್ಕೃತ ರಾಜ್ಯಾಧ್ಯಕ್ಷ ಸಿ.ಎನ್ ಚಂದ್ರಶೇಖರ ರವರ ನೇತೃತ್ವದಲ್ಲಿ ರಾಜ್ಯಾದ್ಯಾಂತ ಜ್ಞಾನ ವಿಜ್ಞಾನ ಸಮಿತಿಗಳು ತನ್ನದೆಯಾದ ಇತಿಹಾಸ ಹೊಂದಿದ್ದು, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭೂಮಿಕೆಗಳು ಎಲ್ಲಡೆ ಬಿತ್ತಲು ಸರ್ವರ ಸಹಕಾರ ಅಗತ್ಯವಿದ್ದು,ಇದಕ್ಕಾಗಿ ಸದಸ್ಯತ್ವ ಆಂದೋಲನದಲ್ಲಿ ಮತ್ತು ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ ವೈಜ್ಞಾನಿಕ ತಳಹದಿಯನ್ನು ಸದೃಡ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷೆ ಕೆ.ಸಿ ಪದ್ಮಾವತಿ, ಕಾರ್ಯದರ್ಶಿ ಶರಣಪ್ಪ ಜಮಾದಾರ್, ಜಿಲ್ಲಾ ಸಂಚಾಲಕ ಡಿ.ಎನ್ ಮುಕುಂದ, ಖಜಾಂಚಿ ಕೆ.ವಿ ಜಗನ್ನಾಥ, ಸಂಘಟನಾ ಕಾರ್ಯದರ್ಶಿ ಅಮರೇಶ ಬಾಬು, ಸಹಕಾರ್ಯದರ್ಶಿ ಸುರೇಶ್ ಕುಮಾರ್ ತಾಲ್ಲೂಕು ಅಧ್ಯಕ್ಷ ಮಯೂನ್, ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ಜಿಲ್ಲಾ ಮುಖ್ಯೋಪಾಧ್ಯಾಯರವಘದ ಜಿಲ್ಲಾ ಕಾರ್ಯದರ್ಶಿ ಬಿ.ಎಂ ನಾರಾಯಣಸ್ವಾಮು ಖಜಾಂಚಿ ಮುನೇಗೌಡ, ಚು.ಸಾ.ಪ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಕಾರ್ಯದರ್ಶಿ ಶರಣಪ್ಪ ಗಬ್ಬೂರ, ಎಸ್ಸಿ.ಎಸ್ಟಿ ನೌಕರರ ಘದ ಜಿಲ್ಲಾಧ್ಯಕ್ಷ ರಾಮಾಂಜನೆಯ, ಮುಖಂಡ ಮುನಿರಾಜು, ನಾಗರಾಜ್, ಕೋಟೇಶ್ವರ ರಾವ್ ಮತ್ತಿತರರು ಉಪಸ್ತಿತರಿದ್ದರು.