ಮಕ್ಕಳಿಗೆ ಬ್ಯಾಗ್, ಸಲಕರಣೆಗಳ ವಿತರಣೆ
ಕಲಬುರಗಿ:ಜು.15: ಸಮಾಜ ಸೇವಕ ದಂಪತಿ ರಶ್ಮಿ ಮಹಾಂತೇಶ ಸಾಲಿಮಠ ವತಿಯಿಂದ ಮುಗಳನಾಗಾಂವ ಸಂಸ್ಥಾನ ಹಿರೇಮಠ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಸೇರಿದಂತೆ ಇನ್ನಿತರ ಸಲಕರಣೆಗಳ ವಿತರಣೆಗೆ ಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚನ್ನಮಲ್ಲಯ್ಯ ಹಿರೇಮಠ, ರಶ್ಮಿ ಎಂ.ಸಾಲಿಮಠ, ಮಹಾಂತೇಶ ಸಾಲಿಮಠ, ಅಥರ್ವ ಎಂ.ಸಾಲಿಮಠ ಸೇರಿದಂತೆ ಇನ್ನಿತರರಿದ್ದರು.