ಸೇವೆ ಬದುಕಿನ ಅವಿಭಾಜ್ಯ ಅಂಗ: ಸಂಸದ ಡಾ. ಮಂಜುನಾಥ್
ಬೆಂಗಳೂರು.ಜು.೧೫- ಸೇವೆ ಬದುಕಿನ ಅವಿಭಾಜ್ಯ ಅಂಗ. ಸಮಾಜದ ಉನ್ನತಿಯೇ ನಮ್ಮ ಬದುಕಿನ ಗುರಿಯಾಗಬೇಕು ಎಂದು “ಹೃದಯವಂತ” ಪದ್ಮಶ್ರೀ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.
ನಗರದ ಕೆಂಗೇರಿಯ ಬೆಂಗಳೂರು ಹಾಸ್ಪಿಟಲ್ಸ್ ನ “ಸೇವಾಪಯಣದ” ಮೊದಲ ವಾರ್ಷಿಕೋತ್ಸವದ ಅಂಗಾವಾಗಿ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
“ವೈದ್ಯರಿಗೆ ಸಮಾಜದಲ್ಲಿ ಬಹಳ ಉನ್ನತ ಸ್ಥಾನವಿದೆ. ಈ ಸ್ಥಾನಮಾನಕ್ಕೆ ಕುಂದುಂಟಾಗದಂತೆ ನಾವು ಸೇವೆ ಸಲ್ಲಿಸಬೇಕು. ಬಡವರ, ಮಧ್ಯಮ ವರ್ಗದವರ ಕಣ್ಣಿರುವ ಒರೆಸುವ ಕೆಲಸವನ್ನು ನಾವು, ಆಸ್ಪತ್ರೆಗಳು ಮಾಡಬೇಕು,” ಎಂದು ಅವರು ತಿಳಿಸಿದರು.
ತಮ್ಮ ವೈದ್ಯಕೀಯ ಬದುಕಿನ ಹಲವಾರು ದೃಷ್ಟಾಂತಗಳನ್ನು ಹಂಚಿಕೊಂಡ ಅವರು, ಜನರ ಪ್ರೀತಿಯಷ್ಟು ಅಮೂಲ್ಯ ಸಂಗತಿ ಇನ್ನೊಂದಿಲ್ಲ ಎಂದು ತಿಳಿಸಿದರು.
ಬೆಂಗಳೂರು ಹಾಸ್ಪಿಟಲ್ಸ್, ಕೆಂಗೇರಿ, ಅತ್ಯಾಧುನಿಕ ಚಿಕಿತ್ಸೆ ದೊರೆಯುವಂತೆ ಮಾಡಲು ಒಂದು ವಿಶಿಷ್ಟ ಎಂದರಿಯನ್ನು ಅನುಸರಿಸುತ್ತಿದೆ. ಹೆಸರಾಂತ ಹೃದ್ರೋಗ ತಜ್ಞ ಮತ್ತು ಸಂಸದ “ಹೃದಯವಂತ” ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಮಾರ್ಗದರ್ಶನದಂತೆ ಆಸ್ಪತ್ರೆ ಉತ್ತಮ ಗುಣಮಟ್ಟದ ಹೃದಯ ಆರೈಕೆಯನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೇ, ಈ ಆಸ್ಪತ್ರೆಯಲ್ಲಿ ಆಯಾ ವಿಭಾಗದ ವಿಶೇಷ ತಜ್ಞರೇ ತಮ್ಮ ವಿಭಾಗದ ನೇತೃತ್ವ ವಹಿಸಿಕೊಂಡು, ರೋಗಿಗಳಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದ್ದಾರೆ. ಸುಮಾರು ೩೫ ತಜ್ಞ ವೈದ್ಯರ ತಂಡ ಇಲ್ಲಿ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖಾತರಿ ಪಡಿಸುತ್ತಾರೆ. ಇಲ್ಲಿ ಲಭ್ಯವಿರುವ ೨೦೦ ಹಾಸಿಗೆಗಳಲ್ಲಿ, ೨೦ ಹಾಸಿಗೆಗಳನ್ನು ಬಡ ರೋಗಿಗಳಿಗೆ ಮೀಸಲಿಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಅಮೇರಿಕಾದಲ್ಲಿ ಕಾಸ್ಮೆಟಿಕ್ಸ್ ಸರ್ಜನ್ ಆಗಿರುವ ಈ ಆಸ್ಪತ್ರೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಸುರಪಾನೇನಿ, ಆಸ್ಪತ್ರೆಯ ಸಿಇಒ ಡಾ. ಲಹರಿ ಸುರಪಾನೇನಿ (ಎಂ ಎಸ್ ಎಂ ಸಿ ಎಚ್) ಮತ್ತು ಆಸ್ಪತ್ರೆಯ
ವೈದ್ಯಕೀಯ ನಿರ್ದೇಶಕ ಡಾ. ಅಭಿಷೇಕ್ ಮನ್ನೆಮ್, (ಎಂಎಸ್, ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ), ನಗರದ ಸಿಟಿ ಇನ್ಸ್ಟಿಟ್ಯೂಟ್ ಉಪಾಧ್ಯಕ್ಷ ಚಂದ್ರಶೇಖರ್ ಹಾಗು ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಆಸ್ಪತ್ರೆಯಲ್ಲಿ ಇಡೀ ದೇಶದಲ್ಲೇ ಮೊದಲು ಎನ್ನಬಹುದಾದ ೬೪೦ ಸ್ಲೈಸ್ ಸಿಟಿ ಸ್ಕ್ಯಾನರ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಹೃದಯಾಘಾತಗಳನ್ನು ಬಹಳ ಮೊದಲೇ ಪತ್ತೆಹಚ್ಚಲು ಇದರಿಂದ ಸಾಧ್ಯವಿದೆ.
ನ್ನಡಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಮೊಬೈಲ್: ೯೯೦೦೦೦೨೯೯೭