ನದಿಗೆ ಜಿಗಿದು ಯುವಕ-ಯುವತಿ ಆತ್ಮಹತ್ಯೆ
ಕಲಬುರಗಿ,ಜು.15-ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕುರಿಕೋಟಾ ಸೇತುವೆಯಿಂದ ಬೆಣ್ಣೆತೋರಾ ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಯುವಕನ ಶವ ಪತ್ತೆಯಾಗಿದ್ದು, ಆತನನ್ನು ಆಳಂದ ತಾಲ್ಲೂಕಿನ ಕುಣಿ ಸಂಗಾವಿ ಗ್ರಾಮದ ಅನೀಲಕುಮಾರ ರೇವಣಸಿದ್ದಪ್ಪ ಮುಲಗೆ (27) ಎಂದು ಗುರುತಿಸಲಾಗಿದೆ.
ಯುವತಿಯ ಪತ್ತೆಗಾಗಿ ಮಹಾಗಾಂವ ಪೊಲೀಸರು ಮತ್ತು ಈಜು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.