ಕಿಶೋರಿ ಕಲಬುರಗಿ ಓಲಂಪಿಕ್ ಕ್ರೀಡಾಕೂಟ
ಕಲಬುರಗಿ,ಜು.15-ಮಾರ್ಗದರ್ಶಿ ಸಂಸ್ಥೆ, ಜಿಲ್ಲಾ ಆಡಳಿತ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಯುಕ್ತ ಆಶ್ರಯದಲ್ಲಿ ಕಿಶೋರಿ ಕಲಬುರಗಿ ಓಲಂಪಿಕ್ ಕ್ರೀಡಾಕೂಟ ನಗರದ ಚಂದ್ರಕಾಂತ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು.
ದಕ್ಷಿಣ ವಲಯದ ಬಿಇಒ ವಿಜಯಕುಮಾರ್ ಜಮಖಂಡಿ, ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ್ ಗೋನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಂತೋಷ್ ಎಂ.ಡಿಗ್ಗಿ, ದೈಹಿಕ ಶಿಕ್ಷಣ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜು ಎಂ.ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕ್ರೀಡಾಕೂಟದಲ್ಲಿ ಎರಡು ನೂರಕ್ಕೂ ಹೆಚ್ಚು ಕಿಶೋರಿಯರು ಭಾಗವಹಿಸಿದ್ದರು.ಕಿಶೋರಿಯರು ಖೋ ಖೋ, ರಿಲೇ, 100 ಮೀಟರ್ ಓಟ, ಹಗ್ಗದ ಆಟ, ಗುಂಡೆಸೆತ, ಕುರ್ಚಿಯಾಟ ಸೇರಿ ಇತರ ಆಟಗಳನ್ನು ಆಡಿದರು. ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆಯನ್ನು ಮಾರ್ಗದರ್ಶಿ ಸಂಸ್ಥೆ ಮತ್ತು ಅಜೀಂ ಪ್ರೇಂಜಿ ಫೌಂಡೇಶನ್ ಸಂಸ್ಥೆ ವತಿಯಿಂದ ನೀಡಲಾಯಿತು.
ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದ್ ರಾಜ, ಉಪ ನಿರ್ದೇಶಕಿ ಯಶೋಧ ಮತ್ತು ಸಿಬ್ಬಂದಿ, ಜಿಲ್ಲಾ ಮಕ್ಕಳ ಸಹವಾಣಿಯ ಸಂಯೋಜಕ ಬಸವರಾಜ ಟೆಂಗಳಿ ಹಾಗೂ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಶಾಂತಬಾಯಿ, ಬಾಲಕರ ಬಾಲಮಂದಿರದ ಅಧೀಕ್ಷಕರಾದ ನಾಜನಿಂಗ್ ಬೇಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಬಾಲಕಿಯರ ಬಾಲಮಂದಿರದ ಮಕ್ಕಳು ಸಹ ಈ ಕಿಶೋರಿ ಆಟದಲ್ಲಿ ಭಾಗವಹಿಸಿದ್ದರು.
ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಗುರಿ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು. ವಿಜಯಲಕ್ಷ್ಮಿ ಸಿ ಸ್ವಾಗತಿಸಿದರು. ಕು.ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಕು.ಸುರೇಖಾ ವಂದಿಸಿದರು.