ನಿಸ್ವಾರ್ಥ ಸೇವಕ ಧರ್ಮಣ್ಣ ದೊಡ್ಡಮನಿ : ಎನ್ ರವಿ ಕುಮಾರ್
ಜೇವರ್ಗಿ:ಜು.15 : ಅಧಿಕಾರದ ಆಸೆಗಾಗಿ ಪಕ್ಷ ಬದಲಿಸುವ ಈಗಿನ ಕಾಲದಲ್ಲಿ ಪಕ್ಷಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಿಟ್ಟು ಜೇವರ್ಗಿಯಲ್ಲಿ ಬಿಜೆಪಿ ಉಳಿಸಿ ಬೆಳೆಸಿದವರು. ಅನೇಕ ಜನರಿಗೆ ನಿಸ್ವಾರ್ಥ ಸೇವೆ ಮಾಡಿದ ಕೀರ್ತಿ ದಿ.ಧರ್ಮಣ್ಣ ದೊಡ್ಡಮನೆ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅಭಿಮತಪಟ್ಟರು.
ಪಟ್ಟಣದ ಭೂತಪುರ ಕಲ್ಯಾಣ ಮಂಟಪದಲ್ಲಿ ಬಾನುವಾರ ಕುರಿ ಮತ್ತು ಉಣ್ಣಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ದಿ.ಧರ್ಮಣ್ಣ ದೊಡ್ಡಮನಿ ಅವರ ಅಭಿಮಾನಿಗಳ ಬಳಗದ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದ ಅವರು ದಿ.ಧರ್ಮಣ್ಣ ದೊಡ್ಡಮನಿ ಅವರು ನಮ್ಮ ಪಕ್ಷದ ಕಾರ್ಯಕರ್ತರಾಗಿ, ಈ ಭಾಗದ ಹಿಂದುಳಿದ ವರ್ಗದ ನಾಯಕರಾಗಿ, ಸಮಾಜದ ಪರ ದ್ವನಿಯಾಗಿ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಅಕಾಲಿಕ ನಿಧನದಿಂದ ನಮ್ಮ ಪಕ್ಷಕ್ಕೆ, ಹಿಂದುಳಿದ ವರ್ಗಕ್ಕೆ ಅಪಾರ ನಷ್ಟವಾಗಿದೆ. ಸ್ವಾರ್ಥ ರಾಜಕಾರಣ ಮಾಡದೆ ನಿಸ್ವಾರ್ಥ ಸೇವೆ ಮಾಡುತ್ತಾ ನಿಜವಾದ ಧರ್ಮರಾಯನಂತೆ ಪಕ್ಷಕ್ಕಾಗಿ ದುಡಿದವರು ದಿ. ಧರ್ಮಣ್ಣ ದೊಡ್ಡಮನಿ. ತಮ್ಮ ಜೀವನದುದ್ದಕ್ಕು ನಿಸ್ವಾರ್ಥ ಸೇವೆಯನ್ನೆ ಮಾಡಿದ ಧೀಮಂತ ನಾಯಕನ ಗುಣಗಳು ಇಂದಿನ ಯುವಕರು ಮತ್ತು ಹಾಲುಮತದ ಯುವ ಜನತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸಂಸದ ಡಾ. ಉಮೇಶ್ ಜಾಧವ ಮಾತನಾಡಿ ದಿ.ಧರ್ಮಣ್ಣ ದೊಡ್ಡಮನಿ ಅವರು ಹಿಂದುಳಿದ ನಾಯಕರಾಗಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅಧಿಕಾರ ಸಿಕ್ಕರೂ ಸಹ ಅದನ್ನು ಅನುಭವಿಸುವ ಅವಕಾಶ ಅವರಿಗೆ ಒಲಿಯಲಿಲ್ಲ. ಮುಂದೆ ರಾಜಕೀಯದಲ್ಲಿ ದೊಡ್ಡಮನಿಗೆ ಉತ್ತಮ ಭವಿಷ್ಯವಿತ್ತು. ಆದರೆ, ಅವರು ನಮ್ಮನ್ನು ಅಗಲಿದ್ದಾರೆ. ಅವರ ಸಾವು ನಮ್ಮ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಿಪಡಿಸಿದರು.
ಸೊನ್ನ ವಿರಕ್ತಮಠದ ಮ.ನೀ.ಪು ಡಾ. ಶಿವಾನಂದ ಸ್ವಾಮೀಜಿ, ವಿರಕ್ತಮಠ ನೇಲೋಗಿಯ ಪೂಜ್ಯ ಶ್ರೀಸಿದ್ದಲಿಂಗ ಸ್ವಾಮೀಜಿ, ಚಿಗರಳ್ಳಿಯ ಪೂಜ್ಯ ಶ್ರೀ ಸಂತ ಕಬೀರನಂದ ಸ್ವಾಮೀಜಿ, ಬಸವಪಟ್ಟಣ ಬೀರಲಿಂಗೆಶ್ವರ ಮಠದ ಪೂಜ್ಯ ಮುದುಕಪ್ಪ ಮುತ್ಯಾ, ಆಂದೋಲ ಕರಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಯಡ್ರಾಮಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಜೆರಟಗಿಯ ಪೂಜ್ಯ ಮಹಾಂತ ಸ್ವಾಮೀಜಿ, ಅಣಜಿಗಿ ರೇವಣಸಿದ್ದೇಶ್ವರ ಮಠದ ಪೂಜ್ಯ ಸತ್ಯಾನಂದ ಮುತ್ಯಾ, ಅವರು ನುಡಿ ನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ವಿಧಾನ ಪರಿಷತ್ತಿನ ಸದಸ್ಯರಾದ ಶಶಿಲ್ ನಮೋಶಿ, ರಮೇಶ ಬಾಬು ವಕೀಲ್, ಹಳ್ಳೆಪ್ಪಾಚಾರ್ಯ ಜೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕಾಡ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಮಲ್ಲಿನಾಥ್ ಗೌಡ ಯಲಗೋಡ್, ದಂಡಪ್ಪ ಸಾಹು ಕುಳಗೆರಿ, ಶಿವಲಾಲ ಸಿಂಗ್, ಶೋಭಾ ಬಾಣಿ, ಮರೆಪ್ಪ ಬಡಿಗೇರ್, ಶಾಂತಪ್ಪ ಕೂಡಲಗಿ, ರೇವಣಸಿದ್ದಪ್ಪ ಸಂಕಾಲಿ, ಮಣಿಕಂಠ ರಾಠೋಡ್, ರಾಜಶೇಖರ್ ಸೀರಿ, ತಿಪ್ಪಣ್ಣ ಬಳಬಟ್ಟಿ, ಬೈಲಪ್ಪ ನೇಲೋಗಿ, ಶರಣಗೌಡ ಸರಡಗಿ, ಸಾಯಿಬಣ್ಣ ದೊಡ್ಮನಿ, ನಿಂಗಣ್ಣ ಭಂಡಾರಿ, ಗುರುರಾಜ್ ಸುಬೇದಾರ್, ನಿಂಗಣ್ಣ ದೊಡ್ಮನಿ, ವಿಜಯಕುಮಾರ ಹಿರೇಮಠ, ಶರಣು ದೊಡ್ಡಮನಿ, ತಿಪ್ಪಣ್ಣ ರಾಥೋಡ್, ವಿಶ್ವರಾಧ್ಯ ಬಡಿಗೇರ, ಚಂದ್ರಶೇಖರ ನೆರಡಗಿ, ಬಾಗೇಶ ಹೋತ್ತಿನಮಡು, ಶಂಕರಲಿಂಗ ಕರಿಕೆಹಳ್ಳಿ, ದೇವು ಕೊಡಚಿ, ಸಂಗನಗೌಡ ರದ್ದೇವಾಡಗಿ, ಗುರು ಪಾಟೀಲ, ರಾಜು ರದ್ದೇವಡಗಿ, ಹನುಮಂತ್ ಶಾಬಾದ್ಕರ್, ಪ್ರಕಾಶ್ ಪೂಜಾರಿ, ರವಿಚಂದ್ರ ಗುತ್ತೇದಾರ್, ಮರಪ್ಪ ಸರಡಗಿ, ರಾಜಶೇಖರ ಮುತ್ತಕೋಡ, ಶರಣು ನೇರಡಗಿ ಸೇರಿದಂತೆ ಪ್ರಮುಖರು, ಅಭಿಮಾನಿಗಳು ಉಪಸ್ಥಿತರಿದ್ದರು.