10ಕ್ಕೂ ಅಧಿಕ ಅಕ್ರಮ ಅಂಗಡಿಗಳ ತೆರವು
ವಿಜಯಪುರ, ಜು.15:ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ನಗರದ ಗಾಂಧಿಚೌಕ್ ನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ನಡೆಯಿತು.
ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ಜೆಸಿಬಿ ಮೂಲಕ ಮಾಡಲಾಯಿತು.
ಗಾಂಧಿಚೌಕ್‍ನಲ್ಲಿ ಅಕ್ರಮವಾಗಿ ಕಟ್ಟಿಸಿರುವ ಹತ್ತಕ್ಕೂ ಹೆಚ್ಚು ಅಂಗಡಿಗಳನ್ನು ನೆಲಸಮ ಮಾಡಿದರು. ಈ ವೇಳೆ ಅಹಿತಕರ ಘಟನೆಗಳು ಆಗದಂತೆ ಗಾಂಧಿಚೌಕ್ ಪೆÇಲೀಸರು ಸೂಕ್ತ ಬಂದೋಬಸ್ತ್ ನೀಡಿದರು.