ಭಾರತ ಸೇವಾದಳ ಶಿಕ್ಷಕ ಪುನಶ್ಚೇತನಕ್ಕೆ ತಹಸಿಲ್ದಾರ ಸುಬೇದಾರ ಚಾಲನೆ
ಆಳಂದ: ಜು.15:ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಭಾರತ ಸೇವಾದಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡ ತಾಲುಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕ, ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಗಾರವನ್ನು ತಹಸಿಲ್ದಾರ ಯಲ್ಲಪ್ಪ ಸುಬೇದಾರ ಸಸಿಗೆ ನೀರುಣಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ತಹಶಿಲ್ದಾರರು ಶಿಸ್ತಿನ ಸಿಪಾಯಿಗಳಾದ ಶಿಕ್ಷಕರು ಮಕ್ಕಳಲ್ಲಿ ದೇಶಾಭಿಮಾನ ಭಕ್ತಿ ಬೆಳೆಸಲು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ನೋಡಲ್ ಅಧಿಕಾರಿ ಪ್ರಕಾಶ ಕೊಟ್ರೆ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಸೇವಾದಳದ ಕಾರ್ಯದರ್ಶಿ ಹಿರಿಯ ಪತ್ರಕರ್ತ ಮಹಾದೇವ ವಡಗಾವ, ಶಿಕ್ಷಕರ ಸಂಘದ ರಾಣಪ್ಪ ಸಂಗನ್ ಮಹಾದೇವ ಗುಣಕಿ, ಅಪ್ಪಾಸಾಹೇಬ ತೀರ್ಥೆ, ಸೂರ್ಯ ಕಾಂತ ತಟ್ಟಿ, ಪತ್ರಕರ್ತ ಕ.ಸಾ.ಪ ಅಧ್ಯಕ್ಷ ಹಣಮಂತ ಶೇರಿ ಯುವ ಪತ್ರಕರ್ತ ಡಾ ಅವಿನಾಶ ದೇವನೂರ ಉಪಸ್ಥಿತರಿದ್ದರು
ಸೇವಾದಳದ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ ತಾಲೂಕಾ ಅಧಿನಾಯಕ ಶರಣಬಸಪ್ಪ ವಡಗಾವ ವೀರಭದ್ರ ಹಾರಕೆ ಇತರರು ಶಿಬಿರ ನಡೆಸಿಕೊಟ್ಟರು ಶಿಬಿರಾರ್ಥಿಗಳು ಶೀಶೈಲ ದೇವರಾಯ, ಮನೋಹರ ಠೊಕೆ, ವಿರುಪಾಕ್ಷಯ್ಯ ಸ್ವಾಮಿ, ಶಿವಾನಂದ ಜಳಕಿ ಚಂದ್ರಶೇಖರ ಜಮಾದಾರ, ದತ್ತಾಬಡಿಗೇರ ಬಲಭೀಮ ಕಟಬರ ಶಂಭುಲಿಂಗ ಅಪ್ಪಾ ಸಾಹೇಬ ತಿರ್ಥೇ ಸುನೀಲ ಪಾಟೀಲ, ದುಂಡಪ್ಪ ದರ್ಗಾಶಿರೂರ, ಶರಣು ವಾಲಿಕಾರ ಮುಂತಾದವರು ಭಾಗವಹಿಸಿದ್ದರು