ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ
ವಿಜಯಪುರ,ಜು.15:ನಗರದ ಜ್ಞಾನ ಯೋಗ ಆಶ್ರಮದಲ್ಲಿ ಇನ್ನರ್ವಿಲ್ ಕ್ಲಬ್ ವತಿಯಿಂದ ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.
ಬಿಎಲ್‍ಡಿಇ ಸಂಸ್ಥೆಯ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸಂತೋಷ ರಾಮದುರ್ಗ ಅವರು ಮಾನಸಿಕ ಆರೋಗ್ಯದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಡಾ. ನಿರ್ಮಲಾ ಅವರು ಜೀವನ ಕೌಶಲ್ಯದ ಬಗ್ಗೆ ಮಾತನಾಡಿದರು.
ಶ್ರೀಮತಿ ಸುಖಲತಾ ಬಿರಾದರವರು ಯೋಗ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಿರ್ಮಲಾ ದೊಡ್ಮನಿ, ಸುಕಲತಾ ಬಿರಾದಾರ, ಶುಭದಾ ನಾವದಿಗಿ, ಶಾಂತ ಕೋರೆಡ್ಡಿ, ಸಂಗೀತ ಮೇಂದ್ರಕರ್, ಪ್ರೀತಿ ತೋಸ್ನಿವಾಲ್ ಮತ್ತು ಯೋಗೇನ್ ತಂಡದವರು ಉಪಸ್ಥಿತರಿದ್ದರು.