ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಆರ್ ಎಸ್ ತುಂಗಾಳ
ಕೊಲ್ಹಾರ:ಜು.15: ದೇಶ ಕಂಡ ಅತ್ಯುನ್ನತ ನಾಗರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ, ಚುನಾವಣೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಾಲೂಕಿನ ಹಣಮಾಪುರ ಗ್ರಾಮದ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಆರ್ ಎಸ್ ತುಂಗಾಳ ಹೇಳಿದರು.
ಗ್ರಾಮೀಣ ವಿದ್ಯಾರ್ಥಿ ಸಂಘದ ಪ್ರೌಢಶಾಲೆಯ 2024-25 ನೇ ಸಾಲಿನ ಶಾಲಾ ಸಂಸತ್ತು ರಚನೆಯ ಚುನಾವಣಾ ಪ್ರಕ್ರಿಯೆಯ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಸುಭದ್ರ ಆಡಳಿತಕ್ಕೆ ನಾಗರಿಕನ ಮತದಾನದ ಹಕ್ಕು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಂತೆ ಶಾಲಾ ಮಕ್ಕಳಿಗೆ ಪ್ರಜಾಪ್ರಭುತ್ವದಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಮಹತ್ವ ಮತ್ತು ಮತದಾರರ ಕರ್ತವ್ಯವನ್ನು ಮಕ್ಕಳಿಗೆ ತಿಳಿಸಿದರು, ಈ ಸ್ಪರ್ಧೆಯಲ್ಲಿ 8, 9 ಮತ್ತು 10ನೇ ವರ್ಗದ 20 ವಿದ್ಯಾರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಅದರಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡ 12 ವಿದ್ಯಾರ್ಥಿಗಳನ್ನು ಶಾಲಾ ಸಂಸತ್ತು ಚುನಾವಣೆಗೆ ಆಯ್ಕೆ ಮಾಡಲಾಯಿತು. ಪ್ರಧಾನಮಂತ್ರಿಯಾಗಿ ಕುಮಾರಿ ಶ್ರೀರಕ್ಷಾ ಕುಲಕರ್ಣಿ, ಹಣಕಾಸು ಸಚಿವೆಯಾಗಿ ಕುಮಾರಿ ಕವಿತಾ ಕುಳ್ಳೋಳಿ, ಸಭಾಪತಿಯಾಗಿ ಮಾಚು ಮಡಿವಾಳರ್, ಮತ್ತು ವಿರೋಧ ಪಕ್ಷದ ನಾಯಕನಾಗಿ ಮುತ್ತು ಮಾಚಕನೂರು, ಹಾಗೂ ಇತರರನ್ನು ಸಚಿವ ಸಂಪುಟ ಸಚಿವರನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಶಾಲಾ ಮಕ್ಕಳು ಮತದಾನದಲ್ಲಿ ಪಾಲ್ಗೊಂಡರು. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛವನ್ನು ವಿತರಿಸಿವುದರ ಮೂಲಕವಾಗಿ ಪ್ರಮಾಣವಚನವನ್ನು ಬೋಧಿಸಲಾಯಿತು, ಚುನಾವಣಾ ಉಸ್ತುವಾರಿಯನ್ನು ಸಮಗ್ರವಾಗಿ ಶಿಕ್ಷಕರಾದ ವಿಜಯ ಎಚ್. ಮತ್ತು ಎಸ್ ಎಸ್ ಮುದ್ಗಲ್ ನಿರ್ವಹಿಸಿದರು. ಮತ್ತು ಪಿ ಆರ್ ಓ ಎಸ್ ಎಲ್ ಪವಾರ, ಎಸ್ ಎಂ ಬರಗಿ,ಆರ್ ಟಿ ಸಜ್ಜನ್. ಸೆಕ್ಟರ್ ಆಫೀಸರ್ ಎಂ,ಎಸ್ ದೇಸಾಯಿ. ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರಾದ ಮೂರ್ತಜಸಾಬ್ ಕಂಬೋಗಿ, ಎಚ್ ಪಿ ಭಜಂತ್ರಿ ಇದ್ದರು.