ಯುವಜನತೆಯಲ್ಲಿ ಪ್ರಜ್ಞಾವಂತಿಕೆಯನ್ನು ಬೆಳೆಸುವುದೇ ಶಿಕ್ಷಣ:ವಿಷ್ಣು ಶಿಂಧೆ
ವಿಜಯಪುರ,ಜು.15:ಯುವ ಜನತೆಯಲ್ಲಿ ಪ್ರಜ್ಞಾವಂತಿಕೆಯನ್ನು ಬೆಳೆಸುವುದೇ ಶಿಕ್ಷಣ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಶ ಡಾ. ವಿಷ್ಣು ಶಿಂಧೆ ಹೇಳಿದರು.
ಭಾರತೀಯ ಶಿಕ್ಷಣ ಮಂಡಲ ಹಾಗೂ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ವಿಜಯಪುರದಲ್ಲಿ “ಭಾರತೀಯ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ” ಕುರಿತು ಉಪನ್ಯಾಸ ನೀಡಿದರು.
ಶಾಂತಿನಿಕೇತನ ಸಂಸ್ಥೆ ಹಾಗೂ ಭಾರತೀಯ ಶಿಕ್ಷಣ ಮಂಡಲದ ಉಪಾಧ್ಯಕ್ಷೆ ಡಾ. ಶೀಲಾ ಬಿರಾದಾರ ಅವÀರು ಅತಿಥಿಗಳಾಗಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಬಹು ಮುಖ್ಯ ಎಂದು ನುಡಿದರು.
ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಟಿ. ಬೋಳರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಮಹಿಳೆಯರನ್ನು ಶಿಕ್ಷಣ ಆರೋಗ್ಯ ಮತ್ತು ಆತ್ಮ ವಿಶ್ವಾಸಯುತ ಶಿಕ್ಷಣವನ್ನು ನೀಡುವುದು ಬಹು ಮುಖ್ಯ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡ್ಡದ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯಪುರ ಜಿಲ್ಲಾ ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಎಸ್. ಬಾಪುಗೌಡ ಸ್ವಾಗತಿಸಿದರು. ರಶ್ಮಿ ನೇಗಿನಾಳ ನಿರೂಪಿಸಿದರು. ಡಾ. ಶಾರದಾ ವಂದಿಸಿದರು.
ಸಹ್ಯಾದ್ರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು