ಇಂಗಳಗೇರಿಯಿಂದ ಪ.ಪೂ.ಶ್ರೀಅಕ್ಕಮಹಾದೇವಿ ಪಾದಯಾತ್ರೆ
ತಾಳಿಕೋಟೆ:ಜು.15: ಇಂಗಳಗೇರಿಯ ಶ್ರೀ ಖಾಸ್ಗತೇಶ್ವರ ಮಠದ ಪ.ಪೂ.ಶಿವಶರಣೆ ಶ್ರೀ ಅಕ್ಕಮಹಾದೇವಿ ತಾಯಿಯು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿ ಶ್ರೀಗಳ ದರ್ಶನಪಡೆದುಕೊಂಡರು.
ರವಿವಾರರಂದು ಮುಂಜಾನೆ 9 ಘಂಟೆಗೆ ಸುಮಾರು 100 ಕ್ಕೂ ಅಧಿಕ ಭಕ್ತಾಧಿಗಳೊಂದಿಗೆ ತಾಳಿಕೋಟೆಗೆ ಆಗಮಿಸಿದ ತಾಯಿಯವರು ಸುಮಾರು 22 ಕೀಲೋಮೀಟರ್ ಪಾದಯಾತ್ರೆ ಗೈಯುವದರೊಂದಿಗೆ 1 ಘಂಟೆಗೆ ಶ್ರೀ ಖಾಸ್ಗತೇಶ್ವರ ಮಠಕ್ಕೆ ತಲುಪಿ ಸಪ್ತ ಭಜನಾ ಕಾರ್ಯದಲ್ಲಿ ಪಾಲ್ಗೊಂಡರಲ್ಲದೇ ನಂತರ ಶ್ರೀ ಖಾಸ್ಗತ ಗದ್ದುಗೆಯ ದರ್ಶನ ಪಡೆದು ಮಹಾ ಪೂಜೆ ಸಲ್ಲಿಸಿದರು.
ಇಂಗಳಗೇರಿಯಿಂದ ಆಗಮಿಸುವ ಮಾರ್ಗ ಮಧ್ಯ ಮೂಕೀಹಾಳ ಗ್ರಾಮದಲ್ಲಿ ಕೆ.ಎಚ್.ಪಾಟೀಲ ಅವರು ತಮ್ಮ ಗ್ರಾಮದ ಸುಮಂಗಲೇಯರಿಂದ ಸ್ವಾಗತಿಸಿದರು.
ನಂತರ ಶ್ರೀ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ದರ್ಶನ ಪಡೆದು ಆಶಿರ್ವಾದ ಪಡೆದುಕೊಂಡರಲ್ಲದೇ ಇವರೊಂದಿಗೆ ಆಗಮಿಸಿದ ಸಮಸ್ತ ಭಕ್ತಸಮೂಹಕ್ಕೂ ಶ್ರೀಗಳು ಆಶಿರ್ವದಿಸಿದರು. ನಂತರ ಭಕ್ತಾದಿಗಳು ಶ್ರೀಮಠದಲ್ಲಿ ಮಹಾಪ್ರಸಾದ ಸೇವಿಸಿ ಪುನಿತರಾದರು.
ಈ ತಾಯಿಯ ನೇತೃತ್ವದಲ್ಲಿ ಕೈಗೊಂಡ ಪಾದಯಾತ್ರೆಯಲ್ಲಿ ಬಸನಗೌಡ ಮೇಟಿ, ಲಕ್ಷ್ಮೀಬಾಯಿ ಕರಡ್ಡಿ, ನೀಲಮ್ಮ ಪೊಲೇಸಿ, ಸರೋಜನಿ ಅಂಗಡಗೇರಿ, ಭೀಮಣ್ಣ ಪೂಜಾರಿ, ಅಮ್ಮಕ್ಕ ಗರಡ್ಡಿ, ಬಸಮ್ಮ ಹೊಸಮನಿ, ಸಿದ್ದಯ್ಯ ಹಿರೇಮಠ, ಸುವರ್ಣಾ ಬಿರಾದಾರ, ಒಳಗೊಂಡು ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡಿದ್ದರು.