ಮೋಹರಂ : 10 ಬಡಾವಣೆಗಳಲ್ಲಿ ದೇವರ ಪ್ರತಿಷ್ಠಾಪನೆ
ತಾಳಿಕೋಟೆ:ಜು.15: ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಸಲವೂ ಕೂಡಾ ಮೋಹರಂ ಹಬ್ಬ ಪ್ರಾರಂಭಗೊಂಡಿದ್ದು ಈ ಕುರಿತು ಈ ಹಿಂದಿನಂತೆ 10 ಬಾಡವಣೆಗಳಲ್ಲಿ ದೇವರುಗಳ ಪ್ರತಿಷ್ಠಾಪನೆಗೊಂಡಿವೆ.
ಮುಸ್ಲಿಂ ಬಾಂದವರ ವತಿಯಿಂದ ಜರುಗಲಿರುವ ಈ ಉತ್ಸವವು ದಿ.17 ದೇವರ ಧಪನ್ ದಿನದಂದು ಪಟ್ಟಣದಲ್ಲಿಯೆ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವಕ್ಕಾಗಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣ ಹಾಗೂ ಗ್ರಾಮಗಳಿಂದ ಭಕ್ತಸಮೂಹ ದೀಡ ನಮಸ್ಕಾರ ಹಾಕುವ ಕಾರ್ಯ ನಡೆಯುತ್ತಿರುವದರಿಂದ ದಿ.17 ರಂದು ಜರುಗಬೇಕಾಗಿದ್ದ ದೇವರ ಧಪನ್ ದಿನವನ್ನು ಆಯಾ ಸಂಬಂದಿತ ಮುಖಂಡರ ತಿಳುವಳಿಕೆ ಮೇರೆಗೆ ದಿ.16 ರಂದು ನೇರವೇರಿಸುವ ಕುರಿತು ನಿಶ್ಚಯಿಸಲಾಗಿದೆ.
ಈ ವಿಷಯಕ್ಕೆ ಹಿಂದೂ-ಮುಸ್ಲಿಂ ಬಾಂದವರು ಸಹಮತಿಸಿದ್ದು ಜಾತ್ರೋತ್ಸವ ಹಾಗೂ ಮೋಹರಂ ಹಬ್ಬವನ್ನು ಭಕ್ತಿಭಾವದಿಂದ ಜರುಗಿಸುವ ಕುರಿತು ಹಾಗೂ ಪಟ್ಟಣದಲ್ಲಿ ಈ ಹಿಂದಿನಂತೆ ಕೋಮು ಸೌಹಾರ್ದತೆಯ ಭಾವನೆಯನ್ನು ಎಂದಿನಂತೆ ಮೂಡಿಸುತ್ತಾ ಸಾಗಲು ನಿರ್ಣಯಿಸಲಾಗಿದೆ.
ಈಗಾಗಲೇ ಮೋಹರಂ ಹಬ್ಬ ಕುರಿತು ಪಟ್ಟಣದ ಬಡಾವಣೆಗಳಾದ ಪಂಚಸೈಯದ ದರ್ಗಾ, ಕಟಗರ ಗಲ್ಲಿ, ಆಶ್ರಯ ಕ್ವಾಲನಿ, ಮಹಾಲ್ ಗಲ್ಲಿ, ವಠಾರ ಗಲ್ಲಿ ಪಠಾಣರ ಮನೆ, ಜಾಮೀಯಾ ಮಶೀದಿ ಹಿಂದೆ, ಬಿಸ್ತಿ ಗಲ್ಲಿ, ಹಾಳಗೋಡೆ, ಕಾಮನಕಟ್ಟಿ, ಕುಂಭಾರ ಗಲ್ಲಿ, ಮಕಾಂದಾರ ಓಣಿ, ಒಳಗೊಂಡು 10 ಬಡಾವಣೆಗಳಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದ್ದು ಈ ಎಲ್ಲ ದೇವರು 16 ರಂದು ಧಫನ್‍ಗೊಳ್ಳಲಿವೆ.